ಕಾಗವಾಡ 30: ಭಗವಾನ್ ಮಹಾವೀರರು ಇಡಿ ವಿಶ್ವಕ್ಕೆ ಅಹಿಂಸಾ ತತ್ವದ ಸಂದೇಶ ನೀಡಿದ್ದಾರೆ. ಅದೇ ರೀತಿ ಇಂದಿನ ಮುನಿ ಮಹಾರಾಜರು ಅಹಿಂಸಾ ತತ್ವಗಳು ಸಾರೀ ಹೇಳುತ್ತಾ, ಚಾತುಮರ್ಾಸ ನಿಮಿತ್ಯ ಸಮಾಜದ ಎಲ್ಲರನ್ನು ಒಗ್ಗುಡಿಸಿ ಇಂದಿನ ಯುವಕರಿಗೆ ಅಹಿಂಸಾ ತತ್ವದ ಬಗ್ಗೆ ಮಾಹಿತಿ ನೀಡಿ. ಸನ್ಮಾರ್ಗದತ್ತ ಸಾಗಿಸಲು ಪ್ರಯತ್ನಿಸುತ್ತಾರೆ. ದೇಶ, ರಾಜ್ಯ ಮೇಲೆ ಏನೋ ಅನಾಚಾರವಾಗುತ್ತಿದ್ದಾಗ, ಈ ಮುನಿಗಳ ತಪಸ್ಸು ಕಾಪಾಡುತ್ತದೆ ಎಂದು ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ, ರಾಜ್ಯದ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಅಶೋಕರಾವ್ ಚವ್ಹಾಣ ಹೇಳಿದರು.
ರವಿವಾರರಂದು ಸಂತ ಶೀರೋಮಣಿ ಆಚಾರ್ಯ ವಿದ್ಯಾಸಾಗರಜಿ ಮಹಾರಾಜ ಇವರ ಪರಮಶಿಷ್ಯ ಆಚಾರ್ಯ ನಿಯಮಸಾಗರ ಮಹಾರಾಜರೊಂದಿಗೆ 5 ಮುನಿಗಳ ಸಾಂಗಲಿಯ ಭಗವಾನ ನೇಮಿನಾಥ ದಿಗಂಬರ ಜೈನ್ ಮಂದಿರದಲ್ಲಿ ವಷರ್ಾಯೋಗ ಪಾವನ ಚಾತುಮರ್ಾಸ ಸ್ಥಾಪನೆ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ಮಹಾರಾಷ್ಟ್ರದ ಮಾಜಿ ಸಚಿವರು, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಜಯಂತರಾವ್ ಪಾಟೀಲ ಮಾತನಾಡುತ್ತ ವಿಶ್ವದಲ್ಲಿ ಮತ್ತು ದೇಶದಲ್ಲಿ ಅತಿ ಪ್ರಾಚೀನ ಜೈನ್ ಧರ್ಮವಾಗಿದ್ದು. ಧರ್ಮದ ಬಗ್ಗೆ ನನಗೆ ಅಪಾರ ಶ್ರದ್ಧೆಯಿದೆ. ಮುನಿ ಮಹಾರಾಜರು ಚಾತುಮರ್ಾಸ ನಿಮಿತ್ಯ ಶ್ರಾವಕರಿಗೆ ಯಾವುದು ತ್ಯಾಜ್ಯ ಮಾಡುವದು ಹಾಗೂ ಯಾವದು ಸ್ವೀಕರಿಸುವದು ಬಗ್ಗೆ ಪ್ರವಚನ ಮುಖಾಂತರ ಹೇಳುತ್ತಿದ್ದರಿಂದ ಸಮಾಜದಲ್ಲಿ ಒಳ್ಳೆ ಬೆಳವಣಿಗೆವಾಗುತ್ತಿದೆ ಎಂದು ಹೇಳಿದರು.
4 ತಿಂಗಳ ವಷರ್ಾಯೋಗ ಚಾತುಮರ್ಾಸದಲ್ಲಿ ಮುನಿ ಮಹಾರಾಜರು ಮಾಡುತ್ತಿರುವ ಬೋಧನೆ ಬಗ್ಗೆ ಶ್ರಾವಕರು ಸಂದೇಶವನ್ನು ಮನಗಂಡು ಅವರಲ್ಲಿ ಪರಿವರ್ತನವಾದರೆ, ಚಾತುಮರ್ಾಸ ಸಾರ್ಥಕವಾಗುತ್ತಿದೆ. ಅನೇಕರು ಈ ಸಮಯದಲ್ಲಿ ಪರಿವರ್ತನವಾಗಲು ಸಾಧ್ಯವಿದೆ ಎಂದು ಸಂತ ಶಿರೋಮಣಿ ನಿಯಮಸಾಗರ ಮುನಿ ಮಹಾರಾಜರು ಹೇಳಿದರು.
ಕಲಶ ಸ್ಥಾಪನೆ:
ವಷರ್ಾಯೋಗ ಚಾತುಮರ್ಾಸ ನಿಮಿತ್ಯ 11 ಕಲಶಗಳನ್ನು ಸ್ಥಾಪಿಸಲಾಯಿತು. ಮೊದಲನೇಯ ಸಂಯಮ ಸುವರ್ಣ ಕಲಶ 13.13 ಲಕ್ಷ ರೂ. ಎಡ್ರಾವೆ ಕುಟುಂಬದವರು ಪಡೆದುಕೊಂಡರು.
ಅಮೃತ ಕಲಶ ಶೇಡಬಾಳಕ್ಕೆ:
ಶೇಡಬಾಳದ ಸುಪುತ್ರರು, ಸಾಂಗಲಿಯ ರತ್ನಾಕರ್ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಬಾಹುಬಲಿ ಗಣೆ 2.51 ಲಕ್ಷ ರೂ. ಗೆ ಅಮೃತ ಕಲಶ ಸವಾಲ ಸ್ವೀಕರಿಸಿದರು.
ಚಾತುಮರ್ಾಸ ಕಲಶ ಸ್ಥಾಪನೆ ಸಮಾರಂಭದಲ್ಲಿ ಚಾತುಮರ್ಾಸ ಕಮೀಟಿ ಆಧ್ಯಕ್ಷರು ಹಾಗೂ ಸಾಂಗಲಿ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಸುರೇಶ ಪಾಟೀಲ, ತಾತ್ಯಾಭೈಯ್ಯಾ, ಅಭಯಕುಮಾರ ಬರಗಾಲೆ, ಬಹಾದುರ್ ಖುರಪೆ, ಜಯಕುಮಾರ ಚಿಂಚವಾಡೆ, ಜೀನೇಂದ್ರ ಉಳಾಗಡ್ಡೆ, ರಾಜಕುಮಾರ ಚೌಗುಲೆ, ಬಾಹುಬಲಿ ಗಣೆ ಸೇರಿದಂತೆ ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಗ್ರಾಮಗಳಿಂದ ಸಾವಿರಾರು ಶ್ರಾವಕ, ಶ್ರಾವಿಕೆಯರು ಪಾಲ್ಗೊಂಡಿದ್ದರು. ಹಾಗೂ ಶಾಸಕರು ಪಾಲ್ಗೊಂಡಿದ್ದರು.
ಫೋಟೊ ಶಿಷರ್ಿಕೆ: 30 ಕಾಗವಾಡ 1 ಸಾಂಗಲಿಯ ನೇಮಿನಾಥ ಜೈನ್ ಮಂದಿರದಲ್ಲಿ ನಿಯಮಸಾಗರ ಮುನಿ ಮಹಾರಾಜರು, ಇನ್ನೂಳಿದ ಮುನಿಗಳು ವಷರ್ಾಯೋಗ ಚಾತುಮರ್ಾಸ ಕಲಶ ಸ್ಥಾಪನೆ ಮಾಡುತ್ತಿರುವುದು