ಹಾವೇರಿ19: ಕರೋನಾ ವೈರಸ್ ಹರಡುವಿಕೆ ಮುನ್ನೇಚ್ಚರಿಕೆಯಾಗಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಲು ಜಿಲ್ಲೆಯ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ಹೆಲ್ಪ್ ಡೆಸ್ಕ್ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಪ್ರಯಾಣಿಕರನ್ನು ತಪಾಸಣೆ ನಡೆಸುವ ತಂಡಕ್ಕೆ ನೆರವಾಗಲು ಪೊಲೀಸ್ ನಿಯೋಜಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ತಿಳಿಸಿದ್ದಾರೆ.
ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ದಿನದ 24 ತಾಸು ತಪಾಸಣೆ ನಡೆಸಬೇಕಾಗಿದೆ. ನಿತ್ಯವೂ ಹೊರರಾಜ್ಯ ಹಾಗೂ ಪ್ರದೇಶಗಳಿಂದ ಸಾವಿರಾರು ಪ್ರಯಾಣಿಕರು ಬಂದು ಹೋಗುವುದರಿಂದ ಮಾಹಿತಿ ಸಂಗ್ರಹಿಸಬೇಕಾದ ಕಾರಣ ಪೊಲೀಸ್ ನಿಯೋಜಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ.
ರೈಲ್ವೆ ನಿಲ್ದಾಣದಲ್ಲಿ ಜಾಗೃತಿ: ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪ್ರಯಾಣದ ಮುನ್ನೇಚ್ಚರಿಕೆ ಕುರಿತಂತೆ ಹೆಲ್ತ್ಡೆಸ್ಕ್ನಿಂದ ಜಾಗೃತಿ ಮೂಡಿಸಲಾಗುತ್ತದೆ. ಪ್ರಯಾಣಿಕರ ಮಾಹಿತಿ ಸಂಗ್ರಹಿಸಲಾಗುತ್ತದೆ.
ರೈಲ್ವೆ ನಿಲ್ದಾಣದ ಶೌಚಗೃಹ, ಕಾರಿಡಾರ್ಗಳ ಸ್ವಚ್ಛತೆ ಪ್ರತಿದಿನ ನಡೆಯುತ್ತಿದೆ. ಹಾಗೂ ಹರಿಹರ, ಹುಬ್ಬಳ್ಳಿ, ಯಶವಂತಪುರ ಹಾಗೂ ಬೆಂಗಳೂರಿನಲ್ಲಿ ಪ್ರತಿದಿನ ಸಂಚರಿಸುವ ರೈಲುಗಳ ಪ್ರತಿ ಭೋಗಿಯನ್ನು ಸ್ವಚ್ಛತೆ ಮಾಡಲಾಗುತ್ತಿದೆ ಎಂದು ಹಾವೇರಿ ರೈಲ್ವೆ ನಿಲ್ದಾಣದ ಅಧಿಕಾರಿಗಳಾದ ವಿಜಯಕುಮಾರ್ ಸಿಂಗ್ ಅವರು ತಿಳಿಸಿದರು.
ಕೊರೋನಾ ವೈರಸ್ ಹಿನ್ನೆಲೆ ಹಾವೇರಿ ಮಾರ್ಗವಾಗಿ ಸಂಚರಿಸುತ್ತಿದ್ದ ಬೆಳಗ್ಗೆ 7ಗಂಟೆಯ ಇಂಟರ್ಸಿಟಿ ಎಕ್ಸ್ಪ್ರೆಸ್, ಬೆ.5ಗಂಟೆಯ ವಾಸ್ಕೋ ಯಶವಂತಪುರ, ಸಂಜೆ7.35ರ ಇಂಟರ್ಸಿಟಿ ಎಕ್ಸ್ಪ್ರೆಸ್ ಹಾಗೂ ರಾತ್ರಿ 9ಗಂಟೆಯ ಯಶವಂತಪುರ ವಾಸ್ಕೋ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಮಾಚರ್್ 15ರಿಂದಲೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ತಂಡ ನಗರದ ರೈಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ದಿನ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ರೈಲ್ವೆಮಾರ್ಗವಾಗಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುತ್ತಿದೆ. ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರು ಬಂದಲ್ಲಿ ಅವರ ಬಗೆಗಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇರುವ ಲಕ್ಷಣಗಳು ಕಂಡು ಬಂದಲ್ಲಿ ಜಿಲ್ಲಾಸ್ಪತ್ರೆಗೆ ಕಳಿಸಲಾಗುವುದು ಎಂದರು.
ರೈಲುಗಳು ನಿಲ್ದಾಣಕ್ಕೆ ಬರುವುದಕ್ಕಿಂತ ಮುನ್ನ ಹಾಗೂ ಬಂದ ಬಳಿಕ ಕೊರೋನಾ ವೈರಸ್ ಕುರಿತು ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಹಾಗೂ ರೈಲ್ವೆ ನಿಲ್ದಾಣದಲ್ಲಿರುವ ಕ್ಯಾಂಟೀನ್, ಮಿಲ್ಕ್ ಪಾರ್ಲರ್, ಕುಡಿಯುವ ನೀರಿನ ವ್ಯವಸ್ಥೆ ಹೊರತು ಪಡಿಸಿ ಉಳಿದೆಲ್ಲ ಆಹಾರ ಪದಾರ್ಥ, ತಿಂಡಿ-ತಿನಿಸುಗಳ ಮಾರಾಟ ಹಾಗೂ ರೈಲ್ವೆ ಪ್ರಯಾಣಿಕರಿಗೆ ಒದಗಿಸಲಾಗುತ್ತಿದ್ದ ಬ್ಲಾಂಕೇಟ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದರು.
ರೈಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸಿಬ್ಬಂದಿಗಳಿಗೆ ನಾರ್ಮಲ್ ಮಾಸ್ಕ್ ಹಾಗೂ ಆರೋಗ್ಯ ತಪಾಸಣಾ ತಂಡದ ಸಿಬ್ಬಂದಿಗಳಿಗೆ ಟ್ರೀಪ್ಪಲ್ ಲೇಯರ್ ಮಾಸ್ಕ್ಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಸಾರಿಗೆ ಇಲಾಖೆ: ವಾಯುವ್ಯ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈಗಾಗಲೇ ಹೊರ ಜಿಲ್ಲೆಗೆ ಹೋಗುವ ಪ್ರತಿ ಬಸ್ಗೂ ನಿತ್ಯವೂ ಸ್ಯಾನಿಟೈಜೇಶನ್ ಮಾಡಲಾಗುತ್ತದೆ. ಸ್ಥಳೀಯ ಬಸ್ಸುಗಳನ್ನು ಡೆಟಾಲ್ ಮತ್ತು ಪೇನಾಯಿಲ್ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ. ವಿಭಾಗದಲ್ಲಿಯೇ ಸಿಬ್ಬಂದಿಗಳಿಂದ ಕಾಟನ್ ವಾಷೇಬಲ್ ಮಾಸ್ಕ ತಯಾರಿಸಿ ಪೂರೈಸಲಾಗುತ್ತದೆ. ಸಾರಿಗೆ ಸಿಬ್ಬಂದಿ ಹಾಗೂ ಪ್ರಯಾಣಿಕರ ಆರೋಗ್ಯದ ಬಗ್ಗೆ ಗರಿಷ್ಠ ಮುನ್ನೇಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಲಮಾಣಿ ಅವರು ತಿಳಿಸಿದರು.
ಹಾವೇರಿಯಿಂದ ಸಂಚರಿಸುವ ಬಸ್ ಸಂಖ್ಯೆಗಳನ್ನು ಕಡಿತಗೊಳಿಸಲಾಗಿದೆ. ಬಾಂಬೆಗೆ ಹೋಗುವ ನಾಲ್ಕು ಬಸ್ಸುಗಳ ಪೈಕಿ ಒಂದು ಬಸ್ಸು ಮಾತ್ರ ಸಂಚರಿಸುತ್ತಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಜಿಲ್ಲೆಯಿಂದ 20 ಬಸ್ಸುಗಳ ಪೈಕಿ 5 ಬಸ್ಗಳನ್ನು ಕಡಿತಗೊಳಿಸಲಾಗಿದೆ. ಪ್ರಯಾಣದ ಸಂಖ್ಯೆ ಶೇಕಡಾ 20ರಷ್ಟು ಕಡಿಮೆಯಾಗಿದೆ. ಬೆಂಗಳೂರು ಮತ್ತು ಗುಲಬಗರ್ಾ ಸಂಚರಿಸುವ ಬಸ್ಸ್ಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಬಸ್ಸ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ನಲ್ಲಿ ಇಬ್ಬರು ವೈದ್ಯಕೀಯ ಆರೋಗ್ಯ ಸಹಾಯಕರನ್ನು ನೇಮಿಸಲಾಗಿದೆ. 24ಷ7 ಕಾರ್ಯನಿರ್ವಹಿಸಲಾಗುತ್ತಿದೆ. ಹೊರ ಜಿಲ್ಲೆಯಿಂದ ಬರುವ ಬಸ್ಸುಗಳ ಚಾಲಕರು ಮತ್ತು ನಿವರ್ಾಹಕರಿಂದ ರೊಗದ ಲಕ್ಷಣ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಶಂಕಿತ ಎಂದು ಕಂಡುಬಂದರೆ ವ್ಯಕ್ತಿಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಇಂದಿನಿಂದ ಹಾವೇರಿ ವಿಭಾಗದಿಂದ ಬೆಂಗಳೂರು, ಬಾಂಬೆ, ಪೂನಾ, ಗೋವಾ, ಪಣಜಿ ಸಂಚರಿಸುವ ಬಸ್ಸುಗಳನ್ನು ಸಂಪೂರ್ಣ ನಿಲ್ಲಿಸಲಾಗುವುದು. ಜಿಲ್ಲೆಯಲ್ಲಿನ ಸ್ಥಳೀಯವಾಗಿ ಸಂಚರಿಸುವ ಬಸ್ಸುಗಳ ಸಂಖ್ಯೆ 8 ರಿಂದ 10 ಸೆಡ್ಯುಲ್ಗಳನ್ನು ಕಡಿಮೆಗೊಳಿಸಲಾಗಿದೆ ಎಂದು ಸಾರಿಗೆ ನಿಯಂತ್ರಕ ಲೊಕೇಶ ಮಿನಗಲವರ ತಿಳಿಸಿದರು.