ಜಿಲ್ಲಾ ಮಟ್ಟದ ಕೇಬಲ್ ದೂರು ಕೋಶ ಸ್ಥಾಪನೆ

ಹಾವೇರಿ:27: ಕೇಬಲ್  ಟೆಲಿವಿಜನ್ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರ ದೂರುಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದ ದೂರ ಕೋಶ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಜನ್  ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕೇಬಲ್ ಟೆಲವಿಜನ್ ನಿರ್ವಹಣಾ ಸಮಿತಿಯ ಸಭೆ ನಡೆಸಿದ ಅವರು ಜಿಲ್ಲಾಧಿಕಾರಿಗಳ ಕಚೇರಿ ಅಥವಾ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ದೂರು ನಿರ್ವಹಣಾ ಕೋಶ ಆರಂಭಿಸಲು ತ್ವರಿತ ಕ್ರಮವಹಿಸಲು ಸೂಚಿಸಿದರು.

ಕೇಬಲ್ ಟೆಲವಿಜನ್ ನೆಟ್ವಕರ್್ ಅಧಿನಿಯಮ 1995ರ ಅನುಸಾರ ಕೇಬಲ್ ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಯಾವುದೇ ಸಿಗ್ನಲ್ಗಳ ದೋಷ, ಕಾರ್ಯಕ್ರಮ ಗುಣಮಟ್ಟದ ಬಗ್ಗೆ ವೀಕ್ಷಕರ ಆಕ್ಷೇಪಗಳು, ಜಾಹೀರಾತುಗಳಲ್ಲಿ ಬಿತ್ತರವಾಗುವ ಸಂದೇಶ, ಚಿತ್ರಗಳ ಆಕ್ಷೇಪ ಹಾಗೂ  ಸಾರ್ವಜನಿಕರನ್ನು ಪ್ರಚೋದಿಸುವ, ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಕಾರ್ಯಕ್ರಮಗಳ ಪ್ರಸಾರ, ನಾಗರಿಕ ಸಮಾಜದಲ್ಲಿ ಶಾಂತಿ ಕದಡುವ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಕಾರ್ಯಕ್ರಮಗಳ ಪ್ರಸಾರ, ಮಹಿಳೆಯರು ಮತ್ತು ಮಕ್ಕಳ ಬಗೆಗಿನ ವಿಕೃತವಾದ ಕಾರ್ಯಕ್ರಮ ಪ್ರಸಾರ,  ಅಶ್ಲೀಲ ಚಿತ್ರಗಳನ್ನು ಸ್ಥಳೀಯ ಕೇಬಲ್ಗಳಲ್ಲಿ ಪ್ರಸಾರ ಮಾಡಿದರೆ ಸಾರ್ವಜನಿಕರು ಲಿಖಿತವಾಗಿ ಜಿಲ್ಲಾ ದೂರು ಕೋಶಕ್ಕೆ ದೂರು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸುವಾಗ ಪ್ರಸಾರವಾದ ಕಾರ್ಯಕ್ರಮದ ವಿವರ, ದಿನಾಂಕ, ಸಮಯ, ಪ್ರಸಾರ ಮಾಡಿದ ಕೇಬಲ್ ಹೆಸರು, ಸಾಧ್ಯವಾದೆ ವಿಡಿಯೋ ತುಣುಕುಗಳ ಸಹಿತ ದೂರುಗಳನ್ನು ನೀಡಬಹುದಾಗಿದೆ. ಈ ದೂರುಗಳ ಕುರಿತಂತೆ ಜಿಲ್ಲಾ ಸಮಿತಿ ಪರಿಶೀಲಿಸಿ ನಿಯಮಸಾನುಸಾರ ಸ್ಥಳೀಯ ಕ್ರಮಕೈಗೊಳ್ಳಲಿದೆ. ರಾಜ್ಯ ಮಟ್ಟದ ಸಮಿತಿಗೆ ದೂರುಗಳನ್ನು ಶಿಫಾರಸ್ಸು ಮಾಡಲಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಕೇಬಲ್ಗಳು ಕಡ್ಡಾಯವಾಗಿ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರಮಾಡಬೇಕು. ನಿಯಮಾನುಸಾರ ನೋಂದಣಿಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡಿರುವ ಕೇಬಲ್ ಆಪರೇಟರ್ಗಳ ವಿವರವನ್ನು ಅಂಚೆ ಇಲಾಖೆಯಿಂದ ಪಡೆಯಲು ತೀಮರ್ಾನಿಸಲಾಯಿತು ಹಾಗೂ ಜಿಲ್ಲೆಯಲ್ಲಿ ಟಿವಿ ವೀಕ್ಷಕರ ಅಂದಾಜು ಸಂಖ್ಯೆಯನ್ನು ಸಂಗ್ರಹಿಸಲು ತಾಲೂಕಾ ತಹಶೀಲ್ದಾರ ಮೂಲಕ ಸಮೀಕ್ಷೆ ನಡೆಸಲು ಸಭೆಯಲ್ಲಿ ತೀಮರ್ಾನಿಸಲಾಯಿತು. ಈ ಕುರಿತಂತೆ ಎಲ್ಲ ತಹಶೀಲ್ದಾರಗಳಿಗೆ ಪತ್ರ ಬರೆಯಲು ಸೂಚಿಸಿದರು.

ಸಕರ್ಾರಿ ಸ್ವಾಮ್ಯದ ಚಾನಲ್ಗಳನ್ನು ಪ್ರೈಂ ಮೋಡನಲ್ಲಿ ಪ್ರಸಾರ ಮಾಡಬೇಕು. ಈ  ಕುರಿತಂತೆ ಎಲ್ಲ ಕೇಬಲ್ ಆಪರೇಟರ್ಗಳುಗೆ ಸೂಚಿಸಲು ನಿರ್ಧರಿಸಲಾಯಿತು. ಕೇಬಲ್ ಟೆಲವಿಜನ್ ನೆಟ್ವರ್ಕ ಅಧಿನಿಯಮದ ಪ್ರಕಾರ ಪ್ರಸಾರ ಮಾಡದ ಕೇಬಲ್ ಸಂಸ್ಥೆಗಳನ್ನನು ಪರಿಕರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಸಮಿತಿಯ ಸದಸ್ಯ ಕಾರ್ಯದಶರ್ಿ ವಾತರ್ಾಧಿಕಾರಿ ಬಿ.ಆರ್. ರಂಗನಾಥ ಅವರು ಸ್ವಾಗತಿಸಿ, ಕೇಬಲ್ ನೆಟ್ವಕರ್್ ಅಧಿನಿಯಮದ ಕುರಿತಂತೆ ಸಭೆಯಲ್ಲಿ ವಿವರಿಸಿದರು.

ಸಭೆಯಲ್ಲಿ ಸದಸ್ಯರಾದ ಶಿವಲಿಂಗೇಶ್ವರ ಮಹಿಳಾ ಕಾಲೇಜು ಪ್ರಾಚಾರ್ಯರಾದ ಶ್ರೀಮತಿ ಸವಿತಾ ಹಿರೇಮಠ, ಇಡಾರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಪರಿಮಳಾ ಜೈನ್, ಮನೊವೈದ್ಯರಾದ ಡಾ.ವಿಜಯಕುಮಾರ ಬಳಿಗಾರ, ಉಪನ್ಯಾಸಕರಾದ ಅರವಿಂದ ಐರಣಿ, ಸಕರ್ಾರಿ ಪದವಿ ಪೂರ್ವ ಬಾಲಕಿಯರ ಕಾಲೇಜ ಪ್ರಾಚಾರ್ಯರಾದ ಅಶೋಕ ಬಿ.ಹಣಗಿ ಉಪಸ್ಥಿತರಿದ್ದರು.