ಬಳ್ಳಾರಿ/ಹೊಸಪೇಟೆ,ಮಾ.27: ದುಡಿಮೆಗೆಂದು ವಲಸೆ ಹೋಗಿರುವವರು ಮರಳಿ ಬರುವ ಸಾಧ್ಯತೆಗಳಿದ್ದು ಅಂತಹ ವಲಸಿಗರ ತಪಾಸಣೆಗಾಗಿ ಸಾರಿಗೆ ಪ್ರಾದೇಶಿಕ ಕಚೇರಿಯ ಬಳಿಯಿರುವ ವಿದ್ಯಾಥರ್ಿ ವಸತಿ ನಿಲಯದಲ್ಲಿ ಕೊರೋನಾ ತಪಾಸಣಾ ಕೇಂದ್ರವನ್ನು ಸ್ಥಾಪಿಸಿ ಮರಳಿ ಬಂದಿರುವವರಿಗೆ ತಪಾಸಣೆ ಮಾಡಲಾಗುವುದೆಂದು ತಹಶೀಲ್ದಾರ್ ವಿಶ್ವನಾಥ್ ಅವರು ತಿಳಿಸಿದರು.
ತಾಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಬಳಿಕ ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಅವರು ಮಾತನಾಡಿದರು.
ವಲಸಿಗರನ್ನು ಕರೆತರುವ ಲಾರಿಗಳನ್ನು ತಡೆದು ಎಲ್ಲಾ ಪ್ರಯಾಣಿಕರನ್ನು ತಪಾಸಣಾ ಕೇಂದ್ರದಲ್ಲಿ ತಪಾಸಣೆ ನಡೆಸಿ ವರದಿಯನ್ನು ನೀಡಬೇಕು. ತಪಾಸಣಾ ಕೇಂದ್ರ ಹತ್ತಿರದ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಗ್ರಾಮ ಮಟ್ಟದಲ್ಲಿ ಕೊರೋನಾ ವೈರಸ್ ನಿಯಂತ್ರಣ ಸಲುವಾಗಿ ಕಾರ್ಯನಿರ್ವಹಿಸುವ ಗ್ರಾಮ ಮಟ್ಟದ ಎಲ್ಲಾ ಅಧಿಕಾರಿಗಳು ಮಂಜಾಗ್ರತೆಯಾಗಿ ತಾವುಗಳು ಸ್ವಚ್ಚತಾ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಗೃಹಬಂಧನಕ್ಕೆ ಒಳಗಾಗಿರುವವರನ್ನು ಭೇಟಿ ಮಾಡುವವರು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು. ಗ್ರಾಮಗಳಿಗೆ ಆಗಮಿಸುವವರ ಮಾಹಿತಿಗಳನ್ನು ಪಡೆದು ಸ್ಥಳೀಯ ವೈದ್ಯಾಧಿಕಾರಿಗಳಿಗೆ ತಿಳಿಸಬೇಕು. ಪ್ರತಿದಿನ 3 ಬಾರಿ ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡಬೇಕು ಜೊತೆಗೆ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಟಾಸ್ಕ್ ಫೋಸರ್್ ಸಮಿತಿ ಸಭೆಯನ್ನು ನಡೆಸಿ ಮಾಹಿತಿಯನ್ನು ತಾಲೂಕು ಆಡಳಿತಕ್ಕೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ತಹಶೀಲ್ದಾರ್ ಎಂ.ರೇಣುಕಾ, ಹಂಪಿ ಪ್ರಾಧಿಕಾರದ ಆಯುಕ್ತರಾದ ಪಿ.ಎನ್.ಲೋಕೇಶ್ ಸೇರಿದಂತೆ ಗ್ರಾಮಲೆಕ್ಕಾಧಿಕಾರಿಗಳು ಇದ್ದರು.