ನಮ್ಮ ಹಿರಿಯರ ದೂರದೃಷ್ಟಿಯಿಂದ ಸ್ಥಾಪಿತ ಸಂಸ್ಥೆ ಇಂದು ಹೆಮ್ಮರವಾಗಿದೆ: ಉಪ್ಪಿನ

ರಾಣೇಬೆನ್ನೂರು08: ವರ್ತಕರ ದಿನನಿತ್ಯದ ಬದುಕಿನಲ್ಲಿ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ.  ಅದಕ್ಕಾಗಿ ನಮ್ಮ ಪೂರ್ವಜರು ತಮ್ಮ ದೂರದೃಷ್ಠಿಯಿಂದಾಗಿ ಮತ್ತು ವರ್ತಕರ ಹಿತದೃಷ್ಠಿಯಿಂದ ಈ ಸಂಘಟನೆಯನ್ನು ಹುಟ್ಟು ಹಾಕಿರುವುದು ವರ್ತಕರ ಸಮುದಾಯಕ್ಕೆ ಅತ್ಯಂತ ಸಂತೋಷಕರ ಸಂಗತಿಯಾಗಿದೆ ಎಂದು ಸ್ಟೇಷನ್ ರಸ್ತೆ ವರ್ತಕರ ಸಂಘದ 2020-22ನೇ ಸಾಲಿಗಾಗಿ ಆಯ್ಕೆಗೊಂಡ ನೂತನ ಅಧ್ಯಕ್ಷ ಸದಾಶಿವಪ್ಪ ಕೆ. ಉಪ್ಪಿನ ಹೇಳಿದರು. 

ಅವರು ಇಲ್ಲಿನ ವರ್ತಕರ ಸಂಘದ ಸಮುದಾಯ ಭವನದಲ್ಲಿ ನಡೆದ ನೂತನ ಅಧ್ಯಕ್ಷ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.  ಸಂಘವನ್ನು ಅಂದಿನ ನಮ್ಮ ನಗರದ ಗಣ್ಯ ವರ್ತಕರಾಗಿದ್ದ, ಹಿರಿಯ ಮುತ್ಸದ್ಧಿ ಹಿಂದೂಮಲ್ ಜೈನ್ ಅವರು ಕೆಲವೇ ವರ್ತಕನ್ನು ಒಂದುಗೂಡಿಸಿ  ಸ್ಥಾಪಿಸಿದ ಈ ಸಂಸ್ಥೆ ಇಂದು ವಾಣಿಜ್ಯ ನಗರಕ್ಕೆ ಮತ್ತು ವರ್ತಕ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು ಕೇವಲ ವರ್ತಕರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಾತ್ರ ಈ ಸಂಸ್ಥೆ ನಿಂತಿಲ್ಲ.  ಸಮಾಜದ ಎಲ್ಲ ಹಂತದಲ್ಲಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದರು. 

ಸಮಾರಂಭದಲ್ಲಿ ಉಪಾಧ್ಯಕ್ಷ ಪಾಂಡಪ್ಪ ಮಾಳೋದೆ, ಗೌರವ ಕಾರ್ಯದಶರ್ಿ ಗೌಡಶಿವಣ್ಣನವರ, ಹಿಂದಿನ ಅಧ್ಯಕ್ಷರಾದ ವೀರೇಶ್ ಮೊಟಗಿ, ಉಪಾಧ್ಯಕ್ಷ ಜಗದೀಶ ಬಾಗಲರ, ಗೌರವ ಕಾರ್ಯದಶರ್ಿ ಗದಿಗೆಪ್ಪ ಹೊಟ್ಟಿಗೌಡ್ರ ಸೇರಿದಂತೆ ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರಾದ ರಾಜಶೇಖರ ನೂರಂದೇವರಮಠ, ಪುಟ್ಟನಗೌಡ ತೆಂಬದ, ಬಸವನಗೌಡ ರಾಗಿಕೊಪ್ಪದ, ರಾಜಶೇಖರ ಹಾದಿಮನಿ, ಬಸವರಾಜ ಮಳವಳ್ಳಿ, ರಾಜೇಂದ್ರಕುಮಾರ ತಿಳವಳ್ಳಿ, ವೆಂಕಟೇಶ್ ಕೊಟ್ಟೂರು, ಶಿವರಾಜ ಬಿಳಗಿ, ಚನ್ನಬಸಪ್ಪ ಅಜಗಣ್ಣನವರ, ಮಹಾವೀರ ಜೈನ್, ಪ್ರವಿಣ್ ಕಬ್ಬೂರು, ಬೀರಪ್ಪ ಪೂಜಾರ ಸೇರಿದಂತೆ ಮತ್ತಿತರ ಗಣ್ಯರು, ಸಮುದಾಯದ ಹಾಲಿ-ಮಾಜಿ ಸದಸ್ಯರು, ನಾಗರಿಕರು, ವರ್ತಕರು ಪಾಲ್ಗೊಂಡಿದ್ದರು.  

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.