ಬಾಗಲಕೋಟೆ: ಮಕ್ಕಳ ಜೀವನ ರೂಪಿಸುವ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ನಿದರ್ೇಶಕ ಡಾ.ಬಿ.ಕೆ.ಎಸ್ ವಧನ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್ನಲ್ಲಿ ಗುರುವಾರ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇವಲ ಎಸ್.ಎಸ್.ಎಲ್.ಸಿ ಹಂತದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಮಾತ್ರ ಮಕ್ಕಳನ್ನು ತಯಾರು ಮಾಡುವುದಷ್ಠೆಯಲ್ಲಿ 8ನೇ ತರಗತಿಗೆಯಲ್ಲಿಯೇ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಕೆಲಸವಾಗಬೇಕೆಂದು ತಿಳಿಸಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಕಂಡುಬರುತ್ತಿವೆ. ಶಿಕ್ಷಣ ಕ್ಷೇತ್ರಗಳಲ್ಲಿಯೂ ಬದಲಾವಣೆಗಳು ಆಗುತ್ತಿವೆ. ಕಲಿಸುವ ವಿಧಾನಗಳು ಬದಲಾವಣೆಗೊಳ್ಳುತ್ತಿವೆ. ಕಾನೂನುಗಳು ಬಲಿಷ್ಠಗೊಳ್ಳುತ್ತಿವೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಕೇವಲ ಎಸ್.ಎಸ್.ಎಲ್.ಸಿ ಹಂತದಲ್ಲಿ ಮಾತ್ರ ಉತ್ತಮ ಫಲಿತಾಂಶ ಪಡೆಯುವಂತಾದರೆ ಸಾಲದು ಮುಂದಿನ ಹಂತದಲ್ಲಿಯೂ ಉತ್ತಮ ಫಲಿತಾಂಶ ತರುವಂತಾಗಬೇಕು. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಅವಶ್ಯವಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಬರವಣಿಗೆ ಸುಧಾರಣೆ, ತೆರೆದ ಪುಸ್ತಕ ಪರೀಕ್ಷೆ ಸೇರಿದಂತೆ ಇತರೆ ಚಟುವಟಿಕೆಗಳನ್ನು ಎಲ್ಲ ಹಂತದಲ್ಲಿಯೂ ಕೈಗೊಳ್ಳಬೇಕು. ಅಂದಾಗ ಮಾತ್ರ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಕೇವಲ ಎಸ್.ಎಸ್.ಎಲ್.ಸಿ ಹಂತ ಒಂದೇ ಗನನೆಗೆ ತೆಗೆದುಕೊಳ್ಳದೇ 8 ಮತ್ತು 9ನೇ ತರಗತಿಯಲ್ಲಿಯೇ ಕ್ರೀಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಕಡಿಮೆ ಫಲಿತಾಂಶ ಪಡೆದುಕೊಂಡ ವಿವಿಧ ಶಾಲೆಯ ಮುಖ್ಯೋಪಾದ್ಯಾಯರು ನಮ್ಮ ಶಾಲೆಯಲ್ಲಿ ಸಿಬ್ಬಂದಿಗಳ ಕೊರತೆ ಬಹಳಷ್ಟಿದೆ. ಇದರಿಂದ ಫಲಿತಾಂಶ ಹೆಚ್ಚಿಗೆ ಆಗುತ್ತಿಲ್ಲವೆಂದು ತಿಳಿಸಿದರೆ, ಸೌಲಭ್ಯಗಳ ಕೊರತೆ ಹಾಗೂ ಸಿಬ್ಬಂದಿಗಳ ಕೊರತೆ ಇದೆ ಎಂದು ತಿಳಿಸಿದರು. ನಂತರ ನೂರಕ್ಕೆ ನೂರರಷ್ಟು ಫಲಿತಾಂಶ ಬಂದ ಮುರಾಜರ್ಿ ದೇಸಾಯಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರು ಉತ್ತಮ ಫಲಿತಾಂಶಕ್ಕೆ ಗುಂಪು ಚರ್ಚೆ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿತ್ತು ಎಂದು ತಿಳಿಸಿದರು.
ಹಿರೇಬಾದವಾಡಗಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯರು ವಿಷಯವಾರು ವಸ್ತು ಪ್ರದರ್ಶನ, ಅನಿರೀಕ್ಷಿತ ಪರೀಕ್ಷೆ ನಡೆಸುವುದು, ಗ್ರಂಥಾಲಯ ದಿನ, ಕವಿ, ಕಾವ್ಯ ಪರಿಚಯ, ಇದುವ ಹವ್ಯಾಸ ಮೂಡಿಸುವುದು, ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಸೇರಿದಂತೆ ಇತರೆ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರಿಂದ ಉತ್ತಮ ಫಲಿತಾಂಶ ಬರಲು ಸಾದ್ಯವಾಯಿತು ಎಂದರು. ಅನವಾಲ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯರು ತಮ್ಮ ಶಾಲೆ ಸತತ 10 ವರ್ಷದಲ್ಲಿ 9 ಬಾರಿ 100ಕ್ಕೆ 100ರಷ್ಟು ಫಲಿತಾಂಶ ಬಂದಿದೆ. ಇದಕ್ಕೆ ಕಾರಣ ಪ್ರತಿ ವರ್ಷ ಜನವರಿ ಮಾಹೆಯಿಂದ ಬೀಗ ಹಾಕದ ಶಾಲೆ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ. ಇದರಿಂದ ಶಾಲಾವಧಿಯ ನಂತರ ಮಕ್ಕಳ ಅಭ್ಯಾಸ ಶಾಲೆಯಲ್ಲಿಯೇ ನಡೆಯುತ್ತಿರುವದರಿಂದ ಸಾಧ್ಯವಾಗಿದೆ ಎಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್.ಎಸ್.ಬಿರಾದಾರ, ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ, ಡಿವಾಯ್ಪಿಸಿಯ ಯೋಜನಾ ಸಮನ್ವಯಾಧಿಕಾರಿ ಸಿ.ಆರ್.ಓಣಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಿ.ಬಿ.ಹಿರೇಮಠ, ಹನಮಂತಗೌಡ ಮಿಜರ್ಿ, ಸಿ.ಎನ್.ನ್ಯಾಮಗೌಡ ಸೇರಿದಂತೆ ಜಿಲ್ಲೆಯ ಎಲ್ಲ ಪ್ರೌಢಶಾಲೆಯ ಮುಖ್ಯೋಪಾದ್ಯಾಯರು ಉಪಸ್ಥಿತರಿದ್ದರು.
ಅಪ್ಪಾಜಿ ಸೇವೆಗೆ ಅಭಿನಂದಿಸಿದ ವರ್ಧನ್
ನಿವೃತ್ತಿಯ ನಂತರ ಅನುದಾನ ರಹಿತ ಬಸವಾನಂದ ಪ್ರೌಢಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ ಕಾರ್ಯನಿರ್ವಹಿಸುತ್ತಿರುವ 86 ವಯಸ್ಸಿನ ಅಪ್ಪಾಜಿ ಪಡತಾರೆ ಅವರು ಕಳೆದ 10 ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತವಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುವುದಾಗಿ ತಿಳಿಸಿದಾಗ ನಿದರ್ೇಶಕ ಡಾ.ಬಿ.ಕೆ.ಎಸ್ ವರ್ಧನ್ ವೇದಿಕೆಯಿಂದ ಕೆಳಗಿಳಿದು ಅಪ್ಪಾಜಿಯವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.
ಉತ್ತಮ ಫಲಿತಾಂಶಕ್ಕೆ ಪಾಲರಕ ಸಹಕಾರ ಮತ್ತು ಪ್ರೋತ್ಸಾಹದಿಂದ ಹಾಗೂ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಶಾಲಾ ಅವಧಿಯ ನಂತರ ವಿಶೇಷ ಕ್ಲಸ್ಗಳ ಮೂಲಕ ಭೋದಿಸಲಾಗುತ್ತಿತ್ತು. ಅಲ್ಲದೇ ಶಾಲಾ ಮಕ್ಕಳ ತಾಯಂದಿರು ಬೆಳಿಗ್ಗೆ ಮಕ್ಕಳನ್ನು ಏಳಿಸಿ ಅಬ್ಯಾಸ ಮಾಡಿಸುತ್ತಿರುವದರಿಂದ ಇದು ಸಾಧ್ಯವಾಗುತ್ತಿದೆ ಎಂದು ಅಪ್ಪಾ ಪಡತಾರೆ ತಿಳಿಸಿದರು.