ಗುಳೇದಗುಡ್ಡ,ಫೆ.20 ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಈಚೆಗೆ ಆಯುಷ್ಮಾನ ಭಾರತ ಮತ್ತು ಆರೋಗ್ಯ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿ ಗಳಿಗೆ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ ಬಹುಮಾನ ವಿತರಣೆ ಮಾಡಿದರು. ಕಿರಿಯ ಆರೋಗ್ಯ ಸಹಾಯಕ ರಾಜಶೇಖರ ಸಾಳಗುಂದಿ, ಆರೋಗ್ಯ ಮಿತ್ರರಾದ ಭಾರ್ಗವಿ ಹಾಲಪ್ಪನವರ, ಮುಖ್ಯಗುರು ಸಿ.ಎಂ.ಕುರುಬರ, ಎಸ್.ಐ.ಔರಸಂಗ, ಎಸ್.ಬಿ.ಹೊನ್ಯಾಳ, ಶಂಕರ.ವೈ.ಎಂ ಹಾಗೂ ಶಿಕ್ಷಕರು ಹಾಜರಿದ್ದರು.