ಶ್ರಮಸಾಮಥ್ರ್ಯ ಯೋಜನೆಯಡಿ ತರಬೇತಿ ಕಾಮರ್ಿಕರಿಗೆ ಉಪಕರಣ ವಿತರಣೆ ಕಟ್ಟಡ ಕಾಮರ್ಿಕರ ವೃತ್ತಿ ಕೌಶಲ್ಯಕ್ಕೆ ತರಬೇತಿ ಅವಶ್ಯ- ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್


ಹಾವೇರಿ07: ಬೆಳಿಗ್ಗೆಯಿಂದ ಸಂಜೆವರೆಗೆ ಬೆವರುಸುರಿಸಿ ಶ್ರಮದಿಂದ ಕೆಲಸಮಾಡುವ ಕಟ್ಟಡ ಕಾಮರ್ಿಕರ ಜೀವನ ಉತ್ತಮ ಪಡಿಸಲು ಹಾಗೂ ಅಭಿವೃದ್ಧಿಗೆ ಶ್ರಮಸಾಮಥ್ರ್ಯ ಯೋಜನೆ ರೂಪಿಸಲಾಗಿದೆ. ಪ್ರತಿಯೊಬ್ಬರು ಈ ಯೋಜನೆಯ ಕುರಿತು ಅರಿತುಕೊಳ್ಳಬೇಕು. ಈ ತರಬೇತಿಯಿಂದ ಉದ್ಯೋಗಾವಕಾಶಗಳು ಪಡೆಯಲು ಹಾಗೂ ಸ್ವಯಂ ಉದ್ಯೋಗಿಗಳಾಗಲು ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಕನರ್ಾಟಕ ಕಟ್ಟಡ ಮತ್ತು ಇತರ ನಿಮರ್ಾಣ ಕಾಮರ್ಿಕ ಮಂಡಳಿ ಬೆಂಗಳೂರು ಹಾಗೂ ಹಾವೇರಿ ಜಿಲ್ಲಾಡಳಿತ, ಜಿಲ್ಲಾ ನಿಮರ್ಿತಿ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕಟ್ಟಡ ಮತ್ತು ಇತರ ನಿಮರ್ಾಣ ಕಾಮರ್ಿಕರಿಗೆ ಡಾ.ಬಿ.ಆರ್.ಅಂಬೇಡ್ಕರ ಕಾಮರ್ಿಕ ಸಹಾಯಕ ಹಸ್ತ ಯೋಜನೆಯಡಿ ಶ್ರಮ ಸಾಮಥ್ರ್ಯ ಯೋಜನೆಯಡಿ ಆಯೋಜಿಸಿದ  ತರಬೇತಿ ಕಾಯರ್ಾಗಾರ ಉದ್ಘಾಟಿಸಿ   ಉಪಕರಣಗಳ ಕಿಟ್ ವಿತರಣೆಮಾಡಿ ಅವರು ಮಾತನಾಡಿದರು.

ಅರೆಬರೆ ಕೌಶಲ್ಯದಿಂದ ಕೆಲಸಮಾಡುವವರಿಗೆ ಪೂರ್ಣ ಪ್ರಮಾಣದಲ್ಲಿ ತರಬೇತಿ ನೀಡಿ ವೈಜ್ಞಾನಿಕ ಪದ್ಧತಿ ಅಳವಡಿಕೆಯಿಂದ ಕಡಿಮೆ ಸಮಯದಲ್ಲಿ ಕಡಿಮೆ ಖಚರ್ಿನಲ್ಲಿ ಉತ್ತಮ ಗುಣಮಟ್ಟದ ಕಟ್ಟಡ ನಿಮರ್ಾಣದ ಕುರಿತು ಪೂರ್ಣ ಪ್ರಮಾಣದಲ್ಲಿ ಕೌಶಲ್ಯ  ತರಬೇತಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾಮರ್ಿಕ ಇಲಾಖೆಯಿಂದ  ಕಟ್ಟಡ ಕಾಮರ್ಿಕರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಟ್ಟಡ ಕಾಮರ್ಿಕರೆಂದು ಐಡಿ ಹೊಂದಿದವರಿಗೆ ಆರೋಗ್ಯ ಸ್ಥಿತಿ ಸುಧಾರಿಸಲು ಆರೋಗ್ಯ ಸಮಸ್ಯೆಗಳಿಗೆ ಸಹಾಯಧನ ಹಾಗೂ ವಿದ್ಯಾಥರ್ಿಗಳ ಉತ್ತಮ ಭವಿಷ್ಯ ರೂಪಿಸಲು ವಿದ್ಯಾಥರ್ಿ ವೇತನ ಸೇರಿದಂತೆ ನಾನಾ ಸೌಲಭ್ಯಗಳನ್ನು ಸಕರ್ಾರ ಜಾರಿಗೆ ತಂದಿದೆ. ವೈದ್ಯಕೀಯ ವಿದ್ಯಾಥರ್ಿಗಳಿಗೆ 30 ಸಾವಿರ ರೂ. ಹಾಗೂ ಇಂಜನೀಯರಿಂಗ್  ವಿದ್ಯಾಥರ್ಿಗಳಿಗೆ 20 ಸಾವಿರ ವಿದ್ಯಾಥರ್ಿ ವೇತನ ನೀಡಲಾಗುತ್ತಿದೆ. ಕಾಮರ್ಿಕರಿಗೆ ಟೂಲ್ ಕಿಟ್ ಸಹ ನೀಡಲಾಗುತ್ತಿದೆ. ಈವರೆಗೆ ಕಟ್ಟಡ ಕಾಮರ್ಿಕರ ಗುರುತಿನ ಚೀಟಿ ಪಡೆಯದವರು ಕೂಡಲೇ ಗುರುತಿನ ಚೀಟಿ ಮಾಡಿಕೊಳ್ಳಬೇಕು. ಹೆಚ್ಚಿನ ಕೌಶಲ್ಯ ತರಬೇತಿ ಪಡೆದು ಉತ್ತಮ ಗುಣಮಟ್ಟದ ಕಟ್ಟಡ  ನಿಮರ್ಾಣ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಶ್ರೀಮತಿ ಶಿಲ್ಪಾ ನಾಗ್ ಅವರು ಮಾತನಾಡಿ, ನಿಮಗೆ ಒಂದು ಮೀನು ನೀಡಿದರೆ ಅದನ್ನು ಒಂದು ಕ್ಷಣದ ಹಸಿವು ನೀಗುವುದು. ಆದರೆ ಮೀನು ಹಿಡಿವುದುನ್ನು ಕಲಿಸಿದರೆ ನಿಮ್ಮ ಜೀವನ ರೂಪಿಸಿಕೊಳ್ಳಲು ನೆರವಾಗುವುದು. ಇದೇ ರೀತಿ ಒಂದು ದಿನ ಕೆಲಸ ನೀಡುವ ಬದಲು ನಿಮಗೆ ವೃತ್ತಿಪರವಾದ ಕೌಶಲ್ಯ ನೀಡಿದರೆ ಗುಣಮಟ್ಟದ ಕಟ್ಟಡ ನಿಮರ್ಾಣದ ಜೊತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. 

ನೀವು ಕಟ್ಟುವ ಕಟ್ಟಡಗಳು ರಾಷ್ಟ್ರನಿಮರ್ಾಣದ ಕಟ್ಟಡಗಳು.  ಗ್ರಾಮೀಣ, ನಗರ ಪ್ರದೇಶದಲ್ಲಿ ಉತ್ಯುತ್ತ ಗುಣಮಟ್ಟದ ನೂರಾರು ವರ್ಷಗಳು ಬಾಳುವ ಕಟ್ಟಡಗಳನ್ನು ಒಳ್ಳೆಯ ರೀತಿ ಕಟ್ಟಡ ನಿಮರ್ಾಣಮಾಡಲು ಈ ತರಬೇತಿ ಸಹಾಯವಾಗುತ್ತದೆ. ಈ ತರಬೇತಿಯ ಮೂಲಕ ಉತ್ತಮ ಹಾಗೂ ಗುಣಮಟ್ಟದ ಕಟ್ಟಡದ  ರಾಷ್ಟ್ರ ನಿಮರ್ಾಣ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.

ನಿಮರ್ಿತಿ ಕೇಂದ್ರದ ಜಿಲ್ಲಾ ಯೋಜನಾ ನಿದರ್ೆಶಕರಾದ ತಿಮ್ಮೇಶಕುಮಾರ್ ಎಸ್.ಎಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಟ್ಟಡ ನಿಮರ್ಾಣ ಕ್ಷೇತ್ರದಲ್ಲಿ ಅತೀ ಅವಶ್ಯವಿರುವ ನಿಮರ್ಾಣ ವೃತ್ತಿಗಳಾದ ಮೇಸನ್, ಮೇಸ್ತ್ರಿ, ಬಾರ್ ಬೆಂಡಿಂಗ್, ವಾಲ್ಪೇಟಿಂಗ್, ಉಡ್ ಪೇಟಿಂಗ್, ಡಿಸೈನ್ ಪೇಟಿಂಗ್, ಫಾಮರ್್ ವಕ್ಸ್, ಟೈಲಿಂಗ್,  ವಾಟರ್ ಫ್ರೂಫಿಂಗ್, ಪ್ಲಂಬಿಂಗ್, ಕಾಪರ್ೆಂಟರಿ, ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಫಿಟಿಂಗ್ಸ್, ಆಪರೇಷನ್ ಮತ್ತು ಮೇಂಟೆನೆನ್ಸ್ ಆಫ್ ಕನ್ಸಸ್ಟ್ರಕ್ಸನ್ ಎಕ್ವಿಪಮೆಂಟ್, ವಕರ್್ ಇನ್ಸಫೆಕ್ಸನ್ ಮತ್ತು ಮೇಷರಮೆಂಟ್, ಅರ್ಥ ವಕರ್್, ಡ್ರಿಲ್ಲಿಂಗ್, ಕನ್ಸ್ಟ್ರಕ್ಷನ್ ಡೆಮೋಲಿಷನ್ ಮತ್ತು ಡಿಸ್ಪೋಸರ್, ಫಾಲ್ಸ್ಸಿಲಿಂಗ್, ಫ್ಯಾಬ್ರಿಕೇಷನ್, ಬ್ಲಾಕ್ ಮೇಕಿಂಗ್, ತಾತ್ಕಾಲಿಕ ಶೆಡ್ಗಳ ನಿಮರ್ಾಣ ವೃತ್ತಿಗಳಲ್ಲಿ ವಸತಿ ರಹಿತ ಮತ್ತು ವಸಹಿತ ಸಹಿತವಾಗಿ 30 ದಿನಗಳ ಅವಧಿಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಮಹಿಳೆಯರು ಮತ್ತು ಪುರುಷರು ತರಬೇತಿಯನ್ನು ಪಡೆಯಬಹುದಾಗಿದೆ. ತರಬೇತಿ ಅವಧಿಯಲ್ಲಿ ಕೂಲಿ ನಷ್ಟ ಪರಿಹಾರವನ್ನು ನೀಡಲಾಗುತ್ತಿದೆ. ಊಟ-ಉಪಹಾರ ನೀಡಲಾಗುವುದು. ವಸತಿ ಸೌಲಭ್ಯಕ ಕಲ್ಪಿಸಲಾಗುವುದು ವೃತ್ತಿ ಸಂಬಂಧಪಟ್ಟಂತೆ ಸುರಕ್ಷತಾ ಕಿಟ್ಗಳನ್ನು ಉಪಕರಣ ಪೆಟ್ಟಿಗಳನ್ನು ನೀಡಲಾಗುವುದು.  ತರಬೇತಿ ಪಡೆದ ನಂತರ ವೃತ್ತಿ ಕೌಶಲ್ಯ ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯೋಜನಾ ವ್ಯವಸ್ಥಾಪಕರಾದ ಶಾಂತಕುಮಾರ ಎಚ್.ಡಿ., ತರಬೇತಿ ವ್ಯವಸ್ಥಾಪಕರಾದ ವಿನಯಕುಮಾರ ರಾಣೆ, ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಶ್ರೀನಿವಾಸ ಕುಲಕಣರ್ಿ, ಡಾ.ಕೆ.ಬಿ.ಪ್ರಕಾಶ, ಶ್ರೀಕಾಂತ ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ, ಮಹಾಂತೇಶ ಮಳಿಮಠ, ಮಂಜುನಾಥ ಮತ್ತಿಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.