ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಸಮಾನ ಶಿಕ್ಷಣ ದೊರೆಯಬೇಕು: ಲಿಂಗನಗೌಡ

ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಸಮಾನ ಶಿಕ್ಷಣ ದೊರೆಯಬೇಕು: ಲಿಂಗನಗೌಡ  Equal education should be provided without distinction between boys and girls: Linganagouda


ರಾಣೇಬೆನ್ನೂರು, ಆ.30: ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಯಾವುದೇ ಭೇದಭಾವ ಇರಬಾರದು ಎಂಬ ದೂರದೃಷ್ಟಿ ಹೊಂದಿದ್ದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಅರಣ್ಯ ಸಚಿವ ಕೆ.ಎಫ್‌. ಪಾಟೀಲ ಅವರು ಸ್ಥಾಪಿಸಿದ ಮಹಿಳಾ ಶಿಕ್ಷಣ ಪರವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವುದು ನಾಡಿನ ಹೆಮ್ಮೆಯ ಸಂಗತಿ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಸ್ಥಳೀಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡ ಹೇಳಿದರು.  

ನಗರದ ಕಾಲೇಜು ಸಭಾಭವನದಲ್ಲಿ ಗುರುವಾರ ನಡೆದ ದಿ. ಕಲ್ಲನಗೌಡ ಎಫ್‌. ಪಾಟೀಲ ಅವರ 30ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಕೆ.ಎಫ್‌. ಪಾಟೀಲ ಅವರು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಹಾಗೂ ಧೈರ್ಯದಿಂದ ಮಹಿಳಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆ ಸಮಾನ ಶಿಕ್ಷಣ ದೊರೆಯಬೇಕು ಮತ್ತು ಮಹಿಳಾ ಸಮಾನತೆ ಸಾಧಿಸಬೇಕು ಎಂಬ ಉದ್ದೇಶ ಹೊಂದಿದ್ದರು ಎಂದು ಹೇಳಿದರು.  

ಅಂದು ಅವರು ಕಂಡಿದ್ದ ದೂರದೃಷ್ಟಿಯ ಕನಸು ಇಂದು ಸಾಕಾರಗೊಂಡಿದೆ. ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲ್ಯವಾದ ಬೆಳವಣಿಗೆ ಸಾಧಿಸಿರುವುದನ್ನು ಗಮನಿಸಿದರೆ, ಕೆ.ಎಫ್‌. ಪಾಟೀಲರು ಕಂಡ ಕನಸು ನನಸಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಲಿಂಗನಗೌಡ ಹೇಳಿದರು.  

ಕೆ.ಎಫ್‌. ಪಾಟೀಲರು ಮಹಿಳಾ ಸಮಾನತೆಗಾಗಿ ಹೋರಾಟ ನಡೆಸಿ, ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆ ಶಿಕ್ಷಣ ದೊರೆಯಬೇಕು ಎಂಬ ಆಶಯ ಹೊಂದಿದ್ದರು. ಅವರ ಆಶಯವನ್ನು ಮುಂದುವರಿಸಿಕೊಂಡು ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ವಾಣಿಜ್ಯ ನಗರದಲ್ಲಿರುವ ಈ ಸಂಸ್ಥೆ ಮತ್ತಷ್ಟು ಪ್ರಗತಿ ಸಾಧಿಸಿ ನಾಡಿಗೆ ಹೆಮ್ಮೆ ತರುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.