ಎಲ್ಲರಿಗೂ ಸಮಾನ ಅವಕಾಶ ಸಂವಿಧಾನದ ಆಶಯ: ರೇಣುಕಾದೇವಿ

ಹಾವೇರಿ: ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡುವುದು ಸಂವಿಧಾನದ ಅಶಯವಾಗಿದೆ. ಯಾವುದೇ ಕಾನೂನುಗಳನ್ನು ಸಂವಿಧಾನಕ್ಕೆ ಅನುಗುಣವಾಗಿ ರಚಿಸಲಾಗುತ್ತದೆ ಎಂದು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಸ್.ರೇಣುಕಾದೇವಿ ಅವರು ಹೇಳಿದರು.

   ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಲಯಗಳ ಆವರಣದಲ್ಲಿರುವ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಅಭಿಯೋಜನಾ ಇಲಾಖೆ  ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ  ನ್ಯಾಯಾಧೀಶರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಆಯೋಜಿಸಲಾದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರ ಹಿತಾಸಕ್ತಿಗೆ ಸಂವಿಧಾನ ರಚಿಸಲಾಗಿದೆ, 26 ನವಂಬರ್ 1949 ರಂದು ಸಂವಿಧಾನ ಅಂಗೀಕರಿಸಲಾಗಿದೆ. ಭಾರತೀಯ ಸಂವಿಧಾನದ  ಗಿಎ ಅನುಚ್ಛೇದ 51ಎ ಮೂಲಭೂತ ಕರ್ತವ್ಯಗಳನ್ನು ನಾವು ಶ್ರದ್ಧೆಯಿಂದ ಮಾಡಬೇಕು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಗೌರವಿಸಬೇಕು, ಸ್ವಾತಂತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಹೋರಾಟಕ್ಕೆ ಸ್ಫೂತರ್ಿ ನೀಡಿದ ಉದಾತ್ತ ಆದರ್ಶಗಳನ್ನು ಗೌರವಿಸಬೇಕು, ಎಂದು ಹೇಳಿದರು.

 ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆ ಎತ್ತಿ ಹಿಡಿಯುವುದು ಮತ್ತು ಸಂರಕ್ಷಿಸುವುದು, ರಾಷ್ಟ್ರ ರಕ್ಷಣೆಗೆ ಸೇವೆ ಸಲ್ಲಿಸುವುದು, ಧಾಮರ್ಿಕ, ಭಾಷಿಕ ಮತ್ತು ಪ್ರಾದೇಶಿಕ ಭಿನ್ನತೆಗಳನ್ನು ಮೀರಿ ಭಾರತೀಯರೆಲ್ಲರಲ್ಲಿ ಸಾಮರಸ್ಯ ಮತ್ತು ಭ್ರಾತೃತ್ವ ಭಾವನೆಗಳನ್ನು ಪ್ರೋತ್ಸಾಹಿಸುವುದು ಮತ್ತು ಮಹಿಳೆಯ ಘನತೆಗೆ ಕುಂದು ತರುವಂತಹ ಸಂಪ್ರದಾಯಗಳನ್ನು ತ್ಯಜಿಸುವುದು, ನಮ್ಮ ಸಂಯುಕ್ತ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಗೌರವಿಸಿ ಸಂರಕ್ಷಿಸುವುದು, ನೈಸಗರ್ಿಕ ಪರಿಸರವನ್ನು ರಕ್ಷಿಸುವುದು ಅದಕ್ಕೆ ಸುಧಾರಣೆ ತರುವುದು ಮತ್ತು ಜೀವಿಗಳ ಬಗ್ಗೆ ಅನುಕುಂಪ ಹೊಂದುವುದು, ಸಾರ್ವಜನಿಕ ಸ್ವತ್ತನ್ನು ಸಂರಕ್ಷಿಸುವು ಮತ್ತು ಹಿಂಸೆಯನ್ನು ಖಂಡಿಸುವುದು, ಎಲ್ಲ ಕ್ಷೇತ್ರಗಳಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಗಳಲ್ಲಿ  ಭಾಗವಹಿಸಿ ರಾಷ್ಟ್ರವು ಸಾಧನೆಯ ಮೇಲ್ಮಟ್ಟಕ್ಕೇರುವಂತೆ ಮಾಡುವುದು ಹಾಗೂ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ಒದಗಿಸುವುದು ನಮ್ಮ ಸಂವಿಧಾನ ಆಶಯವಾಗಿದೆ. ಈ ಆಶಯವನ್ನು ಸಹಕಾರಗೊಳಿಸುವುದು ಹಾಗೂ ಎಲ್ಲರೂ  ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ   ನ್ಯಾಯಾಧೀಶರರಾದ ಕಿರಣ ಕಿಣಿ, ಶ್ರೀಮತಿ ಲಕ್ಷ್ಮೀ ಗರಗ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಅಭಿಯೋಜನಾ ಇಲಾಖೆಯ ಶ್ರೀಮತಿ ಕೂಡಲಮಠ ಇತರರು ಉಪಸ್ಥಿತರಿದ್ದರು.

ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ಕೆ.ಶ್ರೀವಿದ್ಯಾ ಅವರು ಸ್ವಾಗತಿಸಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದಶರ್ಿ ಪಿ.ಎಂ.ಬೆನ್ನೂರ ವಂದಿಸಿದರು.