ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ-ಮಹೇಂದ್ರ ಚೋಪ್ರಾ
ಕೊಪ್ಪಳ 27: ಪ್ರತಿಯೊಬ್ಬ ಮನುಷ್ಯನಿಗೆ ಒಳ್ಳೆಯ ಪರಿಸರದ ಗಾಳಿ ಶುದ್ಧ ನೀರು ಅವಶ್ಯಕವಾಗಿದೆ ಈ ದಿಶೆಯಲ್ಲಿ ಪರಿಸರ ಸಂರಕ್ಷಣೆ ಮಾಡಬೇಕು ಅದು ನಮ್ಮ ಕರ್ತವ್ಯ ಕೂಡ ಆಗಿದೆ ಎಂದು ಕೊಪ್ಪಳ ಜೈನ ಸಮಾಜದ ಮುಖಂಡ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಮಹೇಂದ್ರ ಚೋಪ್ರಾ ಹೇಳಿದರು.
ಅವರು ನಗರಕ್ಕೆ ಸಮೀಪ ಉಕ್ಕಿನ ಕಾರ್ಖಾನೆ ಸ್ಥಾಪನೆ ಗೆ ವಿರೋಧಿಸಿ ಕೊಪ್ಪಳ ಬಂದ್ ಗೆ ಕರೆ ನೀಡಿದ ವಿವಿಧ ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಅವರು ಬಂಜರ ಭೂಮಿ ಗಳಲ್ಲಿ ಕಾರ್ಖಾನೆ ಸ್ಥಾಪನೆ ಆಗಲಿ, ಆದರೆ ಜನ ವಸತಿ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪನೆ ಆದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ, ನಾವು ಎಷ್ಟೇ ದುಡ್ಡು ಗಳಿಸಿದರು ಅದು ತಿನ್ನಲು ಬರುವುದಿಲ್ಲ, ಮನುಷ್ಯ ನೆಮ್ಮದಿಯಿಂದ ಜೀವಿಸಲು ಆಹಾರ, ಒಳ್ಳೆಯ ಪರಿಸರ ಬೇಕು ಶುದ್ಧ ನೀರು ಒಳ್ಳೆಯ ಗಾಳಿ ಬೇಕು ಎಂದ ಅವರು ಕೂಡಲೇ ಉಕ್ಕಿನ ಕಾರ್ಖಾನೆ ಸ್ಥಾಪನೆ ಕಾರ್ಯ ಚಟುವಟಿಕೆ ರದ್ದುಗೊಳಿಸಬೇಕು, ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಎಲ್ಲರೂ ಸೇರಿ ಪ್ರತಿಭಟನೆ ಮಾಡಿ ಕೊಪ್ಪಳದಿಂದ ಇಂತಹ ಕಾರ್ಖಾನೆ ತೊಲಗು ವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಮಹೇಂದ್ರ ಚೋಪ್ರಾ ಹೇಳಿದರು.
ಈ ಹೋರಾಟಕ್ಕೆ ನಮ್ಮ ಜೈನ ಸಮಾಜ ಸೇರಿದಂತೆ ಇತರ ಎಲ್ಲಾ ಸಮಾಜ ಮತ್ತು ವಿವಿಧ ಪ್ರಗತಿಪರ ಸಂಘಟನೆ ಗಳಿಗೆ ಸದಾ ಕಾಲ ತಮ್ಮ ತನು ಮನ ಧನದ ಸಹಾಯ ಸಹಕಾರ ನೀಡುವುದಾಗಿ ಕೊಪ್ಪಳ ನಗರಸಭೆಯ ಮಾಜಿ ಹಾಗೂ ಹಾಲಿ ಸದಸ್ಯ ಮಹೇಂದ್ರ ಚೋಪ್ರಾ ತಿಳಿಸಿದರು, ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಿಶೇಷವಾಗಿ ಜೈನ್ ಸಮಾಜದ ಪ್ರಮುಖರು ಮತ್ತು ಮಹಿಳೆಯರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಅಲ್ಲದೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕೂಡ ಉಪಸ್ಥಿತರಿದ್ದರು.