ಸಸಿಗಳನ್ನು ನೆಟ್ಟು ಪೋಷಿಸಿದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯ: ಗೌತಮ

ಲೋಕದರ್ಶನವರದಿ

ಮುಧೋಳ: ಪರಿಸರ ರಕ್ಷಣೆಗೋಸ್ಕರ, ಸುದ್ದಿ, ಭಾಷಣದಿಂದ ಹೆಚ್ಚು ಪ್ರಯೋಜನವಿಲ್ಲ ಪ್ರತಿಯೊಬ್ಬರು ಮರಗಳನ್ನು ನೆಟ್ಟು ಪೋಷಿಸಿದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯ ಇದನ್ನು ಮಾಡದಿದ್ದರೆ ನಮ್ಮ ಮುಂದಿನ ಜನಾಂಗ ನಮ್ಮನ್ನುಕ್ಷಮಿಸುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಕ್ಷಿ ಬ್ರ್ಯಾಂಚ್ ಪ್ರಬಂಧಕ ಗೌತಮ ಕುಮಾರ ಹೇಳಿದರು.

      ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ದಿನಾಚರಣೆ ಹಾಗೂ ಸಂಘದ 25 ನೇ ವಾಷರ್ಿಕೋತ್ಸವ ಅಂಗವಾಗಿ ಮಂಟೂರ ರಸ್ತೆಯ ಯಶವಂತ ನಗರ ಬಡಾವಣೆಯಲ್ಲಿ ಆಯೋಜಿಸಿದ ವನಮಹೋತ್ಸವಕ್ಕೆ ಚಾಲನೆ ನೀಡಿ ಇಲ್ಲಿಯ ಪತ್ರಕರ್ತರು ಸಸಿಗಳನ್ನು ನಡೆವುದರ ಮೂಲಕ ಸ್ತುತ್ಯಾರ್ಹ ಕಾರ್ಯ ಮಾಡಿ ಜನ ಜಾಗೃತಿ ಮಾಡಿದ್ದಾರೆ ಎಂದು ಹೇಳಿದರು.

      ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ  ಬಿ. ರತ್ನಾಕರ ಶೆಟ್ಟಿ ಅಭಿವೃದ್ಧಿಯ  ಹೆಸರಿನಲ್ಲಿ ಪ್ರತಿನಿತ್ಯ ಪರಿಸರದ ಮೇಲಾಗುತ್ತಿರುವ ದೌರ್ಜನ್ಯದ ಫಲವಾಗಿಯೇ ಇಂದು ಮಾನವ, ಪ್ರಕೃತಿ, ಪ್ರಾಣಿ ಪಕ್ಷಿಗಳು ವಿನಾಶದಂಚಿಗೆ ಬಂದು ನಿಲ್ಲುವಂತಾಗಿದೆ  ವಿನಾಶವನ್ನು ತಪ್ಪಿಸಲು ರಸಾಯನಿಕಗಳ ವಿಪರೀತ ಬಳಕೆಯ ಬಗ್ಗೆ, ಪ್ಲಾಸ್ಟಿಕ ನಿಷೇಧದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಪತ್ರಕರ್ತರ ಮೇಲಿದೆಎಂದು ಹೇಳಿದರು. 

       ನಗರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ತಾಲ್ಲೂಕು ಪಂಚಾಯ್ತಿ ಸಹಾಯಕ ನಿದರ್ೇಶಕ ಬಿ.ಡಿ. ತಳವಾರ ಸಸಿ ನೆಡುವಕಾರ್ಯಕ್ಕೆ ಚಾಲನೆ ನೀಡಿದರು.

      ಇದೇ ಸಂದರ್ಭದಲ್ಲಿ ಪತ್ರಕರ್ತ ಗಣೇಶ ಮೇತ್ರಿ ಮಾತನಾಡಿ ಕಾಡು ನಶಿಸಿ ಹೋಗುತ್ತಿರುವುದು ಅಪಾಯಕರ ಸನ್ನಿವೇಶದ ಮುನ್ಸೂಚನೆ ಅದಕ್ಕಾಗಿ ಮಾನವ ಎಚ್ಚರಿಕೆ ಹೆಜ್ಜೆಯಿಡಬೇಕಾಗಿದೆ ಎಂದು ನುಡಿದರು.

  ಈ ಸಂದರ್ಭದಲ್ಲಿ ಉದ್ದಿಮಿ ಭೀಮರಾವ, ಎಸ್.ಬಿ.ಐ ಸಹಾಯಕ ಪ್ರಬಂಧಕ ದಿಲೀಪಕುಮಾರಚೌಧರಿ, ಗಣ್ಯರಾದ ಸದಾಶಿವ ವೆಂಕಟೇಶ, ಕಾ.ನಿ.ಪ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಅಶೋಕ ಕುಲಕಣರ್ಿ, ವೆಂಕಟೇಶಗುಡೆಪ್ಪನವರ, ಉದಯಕುಲಕಣರ್ಿ, ಎಂ. ಎಚ್.ನದಾಫ, ಎಂ.ಆಯ್.ಕರೆಹೊನ್ನ, ಬಿ.ಎಚ್. ಬೀಳಗಿ, ಎಲ್.ಬಿ. ಹಳ್ಳದ, ವಿಶ್ವನಾಥ ಮುನವಳ್ಳಿ, ಗಣಪತಿ ಮಾನೆ, ಸಿರಾಜ್ ಹೊರಟ್ಟಿ, ಜಗದೀಶ ಜೀರಗಾಳ, ಖಜಾಂಚಿಗಣೇಶ ಮೇತ್ರಿ, ನಗರಸಭೆ ಆರೋಗ್ಯ ಅಧಿಕಾರಿಗಳಾದ ಶೋಭಾ ಹೊಸಮನಿ, ಬಿಜಾಪೂರ, ಸುಭಾಸ ಕಾಂಬಳೆ, ಬಸ್ ನಿಲ್ದಾಣದ ನಿಯಂತ್ರಕರು ಹಾಜರಿದ್ದರು.   

           ಮುಧೋಳದ ಮಂಟೂರ ರಸ್ತೆಯ ಯಶವಂತ ನಗರ ಬಡಾವಣೆಯಲ್ಲಿ ಕಾನಿಪ ಸಂಘದಿಂದ ನಡೆದ ವನಮಹೋತ್ಸವಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಕ್ಷಿ ಬ್ರ್ಯಾಂಚ್ ಪ್ರಬಂಧಕ ಗೌತಮಕುಮಾರ ಚಾಲನೆ ನೀಡಿದರು.