ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ರಾಘವೇಂದ್ರ ನೀಲಣ್ಣವರ

Environmental protection is our responsibility: Raghavendra Neelannavara

ರನ್ನ ಬೆಳಗಲಿ 23: ಪಂಚ ಮಹಾಭೂತಗಳಾದ ಅಗ್ನಿ, ವಾಯು, ಜಲ,  ಆಕಾಶ ಮತ್ತು ಭೂಮಿ ಮಾನವನ ದುರಾಸೆಗಳಿಂದ ಮಲೀನಗೊಂಡು, ಮನುಷ್ಯನ ಆರೋಗ್ಯದ ಜೊತೆಗೆ ಆಯುಷ್ಯ ಕೂಡ ಕಡಿಮೆಯಾಗುತ್ತಿದೆ ಎಂದು ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಹೇಳಿದರು. 

ಅವರು ಪಟ್ಟಣದ ಸಮೀಪದ ನಾಗರಾಳ ಗ್ರಾಮದ ಬನದ ವಸತಿ  ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ. ಶನಿವಾರ ದಂದು ಇಕೋ ಕ್ಲಬ್ ಅಡಿಯಲ್ಲಿ ಜರುಗಿದ ಪರಿಸರ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ  ಮಾತನಾಡುತಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಆದ್ದರಿಂದ ಪರಿಸರ ಜಾಗೃತಿ ವಿಷಯವನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಪ್ಲಾಸ್ಟಿಕ್ ಮುಕ್ತ ಶಾಲೆ. ಶಾಲಾ ಪರಿಸರ ಹಾಗೂ ಶಾಲಾ ಸ್ವಚ್ಚತೆ ನೀರಿನ ಮಹತ್ವ ಹೀಗೆ ಹತ್ತು ಹಲವು ವಿಷಯಗಳ ಕುರಿತು ಸವಿಸ್ತಾರವಾಗಿ ಮಕ್ಕಳಿಗೆ ಮನಮುಟ್ಟುವಹಾಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಹಿಸಿದ್ದ ಮಲ್ಲು ಎಸ್ ಜಗದಾಳ ಗ್ರಾಮ ಪಂಚಾಯತಿ ಸದಸ್ಯರು  ಶಾಲೆಯ ಸರ್ವಾಂಗಿನ ಪ್ರಗತಿಗೆ ಕೈಜೋಡಿಸಿವೆ ಎಂದು ಹೇಳುವುದರ ಜೊತೆಗೆ ಮಕ್ಕಳಿಗೆ ಪರಿಸರ ಉಳಿಸಿ ಬೆಳೆಸುವ ಬಗ್ಗೆ ತಿಳಿದರು. ಶಾಲೆಯ ಮುಖ್ಯ ಗುರುಗಳಾದ  ಜಯಪ್ರಕಾಶ. ಎಸ್‌. ಅನುರವರು ಪ್ರಾರ್ಥನೆಯನ್ನು ಹಾಡುವುದರ ಜೊತೆಗೆ ಸರ್ವರನ್ನು ಸ್ವಾಗತಿಸಿ ಸನ್ಮಾನಿಸಿದರು.  

ಶಿಕ್ಷಕರಾದ ಪರಮಾನಂದ.ಆರ್‌. ಮಲ್ಲಾರಿ, ಹಿರಿಯರಾದ ಮುತ್ತಪ್ಪಜ್ಜ ಒಡೆಯರ,ಯಮನಪ್ಪ ನಾಗರಾಳ, ಅವಧೂತಪ್ಪ ಒಡೆಯರ, ಲಕ್ಕಪ್ಪ ಕುಂದರಗಿ, ರಾಮಣ್ಣ ಸೆಂಡಗಿ, ಸಿದ್ದು ನಾಗರಾಳ,ಶಿಕ್ಷಣ ಪ್ರೇಮಿಗಳಾದ  ಬಸವರಾಜ ಬಳಗಾರ ನಿವೃತ್ತ ಯೋಧರು, ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಲಕ, ಪೋಷಕರು ಮತ್ತು ಎಸ್ ಡಿ ಎಂ ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.