ಮೂಡಲಗಿ 05: 'ಜೀವ ಸಂಕುಲದ ಉಳಿವಿಗಾಗಿ ಪರಿಸರವನ್ನು ಕಾಯುವುದು ಇಂದಿನ ಅಗತ್ಯವಾಗಿದೆ' ಎಂದು ಲಾಯನ್ಸ್ ಕ್ಲಬ್ ರೀಜಿನಲ್ ಪ್ರೆಸಿಡೆಂಟ್ ಅನಿಲ್ ದೇಶಪಾಂಡೆ ಹೇಳಿದರು.
ಇಲ್ಲಿಯ ಲಾಯನ್ಸ್ ಕ್ಲಬ್ ಮೂಡಲಗಿ ಪರಿವಾರದಲ್ಲಿ ಜರುಗಿದ ವಾಷರ್ಿಕ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಆರೋಗ್ಯಪೂರ್ಣವಾದ ಸಮಾಜ ಮತ್ತು ಸಮರ್ಥ ಯುವಕರನ್ನು ಸಿದ್ಧಪಡಿಸುವುದು ಅವಶ್ಯವಿದೆ ಎಂದರು.
ಸಮಾಜ ಸೇವೆಯು ನಿಸ್ವಾರ್ಥವಾಗಿರಬೇಕು. ಪ್ರತಿ ಮನುಷ್ಯ ಒಂದಿಷ್ಟು ಸಮಾಜ ಸೇವೆಯಲ್ಲಿ ತೊಡಗುವುದರ ಮೂಲಕ ಬದುಕಿನ ಸಾರ್ಥಕತೆಯನ್ನು ಕಾಣಬೇಕು ಎಂದರು.
ಮೂಡಲಗಿಯ ಲಾಯನ್ಸ್ ಕ್ಲಬ್ದ ವೈವಿಧ್ಯಮಯವಾದ ಸಮಾಜ ಸೇವಾ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಪ್ರಶಂಸಿದರು.
ಮೂಡಲಗಿ ಪರಿವಾರ ಅಧ್ಯಕ್ಷ ಪ್ರಕಾಶ ಬಾಗೇವಾಡಿ, ಲಯನ್ಸ್ ಕ್ಲಬ್ ಜೋನಲ್ ಪ್ರೆಸಿಡೆಂಟ್ ವೆಂಕಟೇಶ ಸೋನವಾಲಕರ ಮಾತನಾಡಿದರು.
ಒಂದು ವರ್ಷದ ಕಾರ್ಯಚಟುವಟಿಕೆಗಳ ಕುರಿತು ಬಾಲಶೇಖರ ಬಂದಿ ವಿವರಿಸಿದರು.
ಲಯನ್ಸ್ ಕ್ಲಬ್ ಗೌರವ ಅಧ್ಯಕ್ಷ ಮಹಾಂತೇಶ ಹೊಸೂರ, ಕಾರ್ಯದಶರ್ಿ ಶ್ರೀಶೈಲ್ ಲೋಕನ್ನವರ, ಖಚಾಂಚಿ ಗಿರೀಶ ಆಸಂಗಿ ವೇದಿಕೆಯಲ್ಲಿದ್ದರು.
ಮಲ್ಲಿನಾಥ ಶೆಟ್ಟಿ ನಿರೂಪಿಸಿದರು, ಶಿವಾನಂದ ಕಿತ್ತೂರ ಪರಿಚಯಿಸಿದರು, ಮಹಾವೀರ ಸಲ್ಲಾಗೋಳ ವಂದಿಸಿದರು.