ಲೋಕದರ್ಶನ ವರದಿ
ರಾಣೇಬೆನ್ನೂರು22: ಅಂತರ್ಜಲದ ಅತಿಯಾದ ಬಳಕೆಯಿಂದ ಇಂದು ಜಲಕ್ಷಾಮ ಎದುರಾಗಿದೆ. ಶುದ್ಧ ನೀರಿಗೂ ಕುತ್ತು ಬಂದಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಪ್ರತಿಯೊಬ್ಬರೂ ಇದಕ್ಕೆ ತಕ್ಕವಾದ ಬೆಲೆ ತೆರಬೇಕಾಗುತ್ತದೆ ಎಂದು ಇಲ್ಲಿನ ತಾಪಂ ಸಹಾಯಕ ನಿದರ್ೇಶಕ ಅಶೋಕ ನಾರಜ್ಜಿ ಹೇಳಿದರು.
ಸೋಮವಾರ ಹುಣಸಿಕಟ್ಟಿ ರಸ್ತೆಯ ಸರಕಾರಿ ಪ್ರಥಮ ದರ್ಜಿ ಕಾಲೇಜಿನಲ್ಲಿ ನಡೆದ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಲಶಕ್ತಿ ಅಭಿಯಾನವು ಕೇಂದ್ರ ಸಕರ್ಾರದ ಬಹು ದೊಡ್ಡ ಯೋಜನೆಯಾಗಿದ್ದು ಇದನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.