ಬೈಲಹೊಂಗಲ : ಪಕೃತಿಯಲ್ಲಿ ಈ ಹಿಂದೆ ಮಣ್ಣನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತಿದ್ದ ನಾವು ಇಂದು ಸ್ವಾರ್ಥ ಸಾಧನೆಗಾಗಿ ಅತಿಯಾದ ಲಾಭಗಳಿಸುವದಕ್ಕಾಗಿ ಪ್ಲಾಸ್ಟಿಕ್, ರಸಾಯನಿಕ ಹಾಗೂ ವಿಷಯುಕ್ತವಸ್ತುಗಳನ್ನು ಭೂಮಿಗೆ ಸೇರಿಸುವದರೊಂದಿಗೆ ಪರಿಸರದ ನಾಶದೊಂದಿಗೆ ನಮ್ಮ ವಿನಾಶವನ್ನು ನಮ್ಮ ಕೈಯಾರೆ ನಾವೆ ಸಮೀಪಕ್ಕೆ ತಂದಕೊಳ್ಳುತ್ತಿದ್ದೆವೆಂದು ಸವದತ್ತಿ ಎಪಿಎಮ್ಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಕಳವಳ ವ್ಯಕ್ತಪಡಿಸಿದರು.
ಸಮೀಪದ ಹೊಸೂರ ಗ್ರಾಮದ ಪ್ರಾ.ಕೃ.ಪ.ಸ.ಸಂಘ ಮತ್ತು ಯೂನಿವರ್ಸಲ್ ಅಗ್ರಿ ಬಯೋಟೆಕ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ವಿಶ್ವ ಮಣ್ಣಿನ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮಣ್ಣೆಂದರೆ ಬರಿ ಮಣ್ಣಲ್ಲ ಅದು ಲಕ್ಷಾಂತರ ಜೀವಾಣುಗಳನ್ನು ತನ್ನಲ್ಲಿ ಅಡಗಿಟ್ಟಿಸಿಕೊಂಡು ಕೋಟ್ಯಂತರ ಜೀವಿಗಳಿಗೆ ಆಹಾರ ಮತ್ತು ನೆಲೆಯನ್ನು ನೀಡುವ ಸಂಜೀವಿನಿಯಾಗಿದೆ. ಅದನ್ನು ನಮ್ಮ ಅತಿಯಾದ ಹಣಗಳಿಸುವ ಆಸೆಯಿಂದ ಮಣ್ಣಿಗೆ ವಿಷಬೆರೆಸುತ್ತಿರುವದನ್ನು ತಡೆಗಟ್ಟಿ ಮಣ್ಣು ರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 2002 ರಿಂದ ಡಿ.5ನ್ನು ವಿಶ್ವ ಮಣ್ಣಿನ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು.
ಯೂನಿವರ್ಸಲ್ ಅಗ್ರಿ ಬಯೋಟೆಕ್ ಶಿವಾನಂದ ಓಮಕಾರೊ ಮಾತನಾಡಿ, ರೈತರು ತಮ್ಮ ಬೆಳೆ ರಕ್ಷಣೆಗಾಗಿ ಕಳೆ ನಾಶಕದ ಉಪಯೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರಿಂದ ಭೂಮಿಯ ಸತ್ವ ಹಾಳಾಗುತ್ತಿದೆ. ಇದರಿಂದ ರಸಾಯನಿಕ ಗೊಬ್ಬರಗಳ ಬಳಕೆ ಅಧಿಕವಾಗುತ್ತಿದ್ದು ರೈತರ ಕೃಷಿ ಖಚರ್ು ಆದಾಯಕ್ಕಿಂತ ಹೆಚ್ಚಾಗುತ್ತಿದೆ. ಆದ್ದರಿಂದ ರೈತರು ಕಡಿಮೆ ಖಚರ್ಿನಲ್ಲಿ ಒಳ್ಳೆಯ ಬೆಳೆ ತಗೆಯುವತ್ತ ಗಮನ ಹರಿಸಬೇಕು ಎಂದರು.
ನಿವೃತ್ತ ಸಹಕಾರಿ ಸಂಘಗಳ ಉಪ ನಿಭಂಧಕರಾದ ಸೋಮಲಿಂಗಪ್ಪ ಇಂಗಳಗಿ ಮಾತನಾಡಿ, ರೈತರು ಕೃಷಿಯ ಬಗ್ಗೆ ಆಸಕ್ತಿ ಹೊಂದಿ ವೈಜ್ಞಾನಿಕ ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವದರಿಂದ ಆರ್ಥಿಕ ಸ್ಥಿತಿಗಳು ಸುಧಾರಿಸುತ್ತವೆ. ಇಲ್ಲದೆ ಹೋದರೆ ರಸಗೊಬ್ಬರ ಮತ್ತು ಕ್ರೀಮಿ ಕಿಟನಾಶಕಗಳ ಬಳಕೆಯಿಂದ ಪರಿಸರದ ಮೇಲೆ ಪರಿಣಾಮ ಬಿರುತ್ತಾ ಮಾನವನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದರು.
ಸಹಕಾರಿ ಸಂಘದ ಉಪಾಧ್ಯಕ್ಷ ಈರಣ್ಣ ಹುರಳಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ರೈತರಾದ ಗಂಗಾಧರ ಮತ್ತಿಕೊಪ್ಪ, ಸಂಜುಗೌಡಾ ಪಾಟೀಲ, ರುದ್ರಪ್ಪ ಹುಲಿಕಟ್ಟಿ, ವೀರಬಸಪ್ಪ ಮತ್ತಿಕೊಪ್ಪ, ಶಿವರಾಜ ಮಾಕಿ, ಸಿದ್ದಪ್ಪ ಗುಮಗೋಳ, ನಾಗಪ್ಪ ತಳವಾರ, ಸೋಮಪ್ಪ ಜಮನೂರ, ವೀರೇಶಪ್ಪ ಮಾಕಿ, ಸೋಮಪ್ಪ ಯರಡಾಲ, ಅಶೋಕ ಮಾಕಿ, ಮಲ್ಲಪ್ಪ ಮದಲಭಾಂವಿ, ಶಂಕರೆಪ್ಪ ಮಲ್ಲಣ್ಣವರ, ಪ್ರಶಾಂತ ಹುಂಬಿ, ಬಸವಾಣೆಪ್ಪ ಕರಬಸಣ್ಣವರ, ನಾಗಪ್ಪ ಮಸಗುಪ್ಪಿ, ಸೋಮಪ್ಪ ವಿವೇಕಿ, ಮಂಜು ಪೆಂಟೆದ, ಶಿವಪ್ಪ ಚಳಕೊಪ್ಪ, ನೀಲಕಂಠ ಚಿಕ್ಕೊಪ್ಪ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು. ಸೋಮಪ್ಪ ತುಪ್ಪದ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕಲ್ಲಪ್ಪ ಚಳಕೊಪ್ಪ ವಂದಿಸಿದರು.