ಲೋಕದರ್ಶನವರದಿ
ಧಾರವಾಡ06 : ಅಭಿವೃದ್ಧಿ, ಬೆಳವಣಿಗೆ, ಪ್ರಗತಿ, ಕೈಗಾರೀಕರಣ, ನಗರೀಕರಣ ಮುಂತಾದ ಆಕರ್ಷಕ ಹೆಸರಿನಿಂದ ಮತ್ತು ಪ್ರತಿನಿತ್ಯ ನಾವು ಬಳಸುವ ವಸ್ತುಗಳಿಂದಾಗಿ ಮಿತಿಮೀರಿ ಪರಿಸರ ನಾಶ ಮಾಡಿ ಆಗಿದೆ. ಪರಿಸರ ನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಭೂಮಿಯ ತಾಪಮಾನ ಏರಿಕೆ ಆಗುತ್ತಲೇ ಇದೆ. ಪ್ರತಿದಿನವು ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಠಿಯಾಗುತ್ತಲೇ ಇದೆ. ಪರಿಸರದಲ್ಲಿ ಉಂಟಾಗುತ್ತಿರುವ ಜೀವರಾಶಿಗಳಿಗೆ ಮಾರಕವಾಗುವ ಬೆಳವಣಿಗೆ ತೀವ್ರ ಗತಿಯಲ್ಲಿ ಏರುತ್ತಲೇ ಇದೆ. ಇದನ್ನೆಲ್ಲಾ ನೋಡಿದಾಗ ಮುಂದೆ ಜೀವರಾಶಿ ವಿನಾಶವಾಗುವ ಆತಂಕ ಮೂಡುತ್ತಿದೆ. ಈಗಲೇ ಎಚ್ಚೆತ್ತುಕೊಂಡು ಪರಿಣಾಮಕಾರಿಯಾಗಿ ಪರಿಸರ ಸಂರಕ್ಷಣೆ ಮಾಡದೇ ಹೋದಲ್ಲಿ ಜೀವರಾಶಿಗೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು ಹಾಗೂ ಖ್ಯಾತ ಪರಿಸರ ತಜ್ಞರಾದ ಕೆ.ಎಚ್. ನಾಯಕ ಅವರು ಸಮಾಜವನ್ನು ಎಚ್ಚರಿಸಿದರು.
ನಗರದ ಕನರ್ಾಟಕ ವಿದ್ಯಾವರ್ಧಕ ಸಂಘವು ಲೂಸಿ ಕೆ. ಸಾಲ್ಡಾನ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಪರಿಸರ ಸಂರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ವಿಷಯ ಕುರಿತು ಮಾತನಾಡುತ್ತಿದ್ದರು,
ಪರಿಸರ ಸಂರಕ್ಷಣೆಯ ಜೊತೆಗೆ ನಾಶವಾದ ಪರಿಸರವನ್ನು ಪುನಃ ಸ್ಥಾಪಿಸುವುದು ಸಾಧ್ಯ. ಇದರಿಂದ ಬರುವ ಪೀಳಿಗೆಗೆ ನೆಮ್ಮದಿಯ ಬದುಕು ನೀಡಲು ಸಾಧ್ಯ. ಮಕ್ಕಳು ಶಿಕ್ಷಕರ ಮಾತನ್ನು ನಂಬುತ್ತಾರೆ-ಪಾಲಿಸುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಪರಿಸರ ರಕ್ಷಣೆಯ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವವಾದದ್ದು ಎಂದು ಅಭಿಪ್ರಾಯಪಟ್ಟರು.
ಕನರ್ಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ) ಮಾತನಾಡಿ, ಪರಿಸರ ಸಂರಕ್ಷಣೆ ಜಗತ್ತಿನಲ್ಲಿ ಹುಟ್ಟಿ ಬೆಳೆಯುವ ಪ್ರತಿ ಮಗುವಿನ, ಪುರುಷರ ಹಾಗೂ ಮಹಿಳೆಯರ ಆದ್ಯಕರ್ತವ್ಯವಾಗಿದೆ. ಪರಿಸರ ಶಿಕ್ಷಣವು ಇಂದಿನ ಆದ್ಯತೆಯಾಗಿದ್ದು, ಮಕ್ಕಳನ್ನೊಳಗೊಂಡು ಎಲ್ಲರೂ ಜವಾಬ್ದಾರಿಯಿಂದ ಹೊಣೆಗಾರಿಕೆಯಿಂದ ಬದ್ಧತೆಯಿಂದ ಸಂರಕ್ಷಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ದತ್ತಿ ದಾನಿಗಳಾದ ಲೂಸಿ, ಕೆ. ಸಾಲ್ಡಾನ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದಶರ್ಿಗಳಾದ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಜ ಪಾಟೀಲ ಸ್ವಾಗತಿಸಿದರು. ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಎಸ್.ಬಿ. ಗಾಮನಗಟ್ಟಿ ವಂದಿಸಿದರು.
ಕೆ.ಜಿ. ದೇವರಮನಿ, ವೀರಣ್ಣ ಒಡ್ಡೀನ, ಎಲ್.ಐ. ಲಕ್ಕಮ್ಮನವರ, ಸುನಿತಾ ಹಿರೇಮಠ, ಮಾತರ್ಾಂಡಂಪ್ಪ ಕತ್ತಿ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಸಿ.ವಾಯ್. ಲಗಮನ್ನವರ. ಲಿಂಬಣ್ಣ ನಾಯ್ಕರ್, ಪ್ರಕಾಶ ಬೂತಾಳೆ, ಎಂ.ಎಂ. ಚಿಕ್ಕಮಠ, ಉದಯ ಮೊರಬ, ಸಿ.ಎನ್. ರಡ್ಡೇರ, ಜಿ.ಬಿ. ಹೊಂಬಳ, ಮಹಾಂತೇಶ ನರೇಗಲ್ಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.