ಹಾವೇರಿ15 : ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರ ಕಾಳಜಿ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ಗೌರಿಮಠದ ಷ.ಬ್ರ. ಶಿವಯೋಗಿ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ಮಲ್ಲಿಕಾಜರ್ುನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ (ರಿ)ಹಾವೇರಿ ವತಿಯಿಂದ ನಡೆದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಸಂಚಾಲಕ ವಸಂತಕುಮಾರ ಕಡತಿ ಮಾತನಾಡಿ, ಪರಿಸರದಿಂದ ಮಾನವ ಇದ್ದಾನೆಯೇ ಹೊರತು ಮಾನವನಿಂದ ಪರಿಸರವಿಲ್ಲ. ಪ್ರತಿಯೊಬ್ಬರೂ ಮನೆಗಳ ಮುಂದೆ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದರು.
ಉತ್ತರ ಕನರ್ಾಟಕ ಕನ್ನಡ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕುರಗೋಡಿ ಮಾತನಾಡಿ, ವಿದ್ಯಾಥರ್ಿಗಳು ಪ್ರತಿದಿನ ಸಸಿಗಳಿಗೆ ನೀರೆರೆದು ತಮ್ಮ ಪರಿಸರ ಪ್ರೀತಿ ಹಾಗೂ ಕಾಳಜಿಯನ್ನು ತೋರಬೇಕು. ಹಾಗೂ ನೆಟ್ಟ ಸಸಿಗಳು ಹಾಳಾಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕರಿಬಸಯ್ಯ ಸಾಲಿಮಠ, ಈರಣ್ಣ ಕದರಮಂಡಲಗಿ, ಶಿಕ್ಷಕರು ಉಪಸ್ಥಿತರಿದ್ದರು. ನಂತರ ವಿದ್ಯಾಥರ್ಿಗಳು, ಶಿಕ್ಷಕಿಯರೊಂದಿಗೆ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.