ಸಾಲುಮರದ ತಿಮ್ಮಕ್ಕಳ ಪರಿಸರ ಕಾಳಜಿ ಅನುಕರಣೀಯ: ಹಾದಿಮನಿ
Environmental concern of Salumarada Timmakka is exemplary: Hadimani
ತಾಳಿಕೋಟಿ 07: ಭೂಮಿ ನಮ್ಮದಲ್ಲ ಇದನ್ನು ನಾವು ಯಾರೂ ತಂದಿಲ್ಲ ಜಗತ್ತಿನಲ್ಲಿ ಮಾನವ ಹುಟ್ಟುವುದಕ್ಕಿಂತ ಮುಂಚೇನೆ ಅರಣ್ಯ ಉದಯವಾಗಿದೆ ನಂತರದಲ್ಲಿ ಮಾನವ ಉದಯವಾಗಿದ್ದಾನೆ ಅರಣ್ಯಕ್ಕೆ ನಮ್ಮ ಅವಶ್ಯಕತೆ ಇಲ್ಲ ಆದರೆ ನಮಗೆ ಅರಣ್ಯ ಹಾಗೂ ಪರಿಸರ ಅತಿ ಅವಶ್ಯಕವಾಗಿದೆ ಆದರೆ ಮಾನವನ ತನ್ನ ಅತಿ ಆಸೆಯಿಂದ ಇಂತಹ ಅಮೂಲ್ಯವಾದ ಸಂಪತ್ತನ್ನು ಅತಿಯಾಗಿ ಬಳಸಿ ನಾಶ ಮಾಡುತ್ತಿದ್ದಾನೆ ಈ ಭೂಮಿಯ ಮೇಲೆ 84 ಲಕ್ಷ ಜೀವ ರಾಶಿಗಳಿಗೂ ಪರಿಸರದ ಮೇಲೆ ತಮ್ಮದೇ ಆದ ಬದುಕುವ ಹಕ್ಕಿದೆ ಆದರೆ ಮಾನವ ತನ್ನ ಸ್ವಾರ್ಥಕ್ಕಾಗಿ ಇಂತಹ ಪರಿಸರವನ್ನ ಹಾಳು ಮಾಡುತ್ತಿದ್ದಾನೆ ಇದರಿಂದ ಜಗತ್ತು ಮುಂದೊಂದು ದಿನ ವಿನಾಶವಾಗುವುದು ಎಂದು ಅರಣ್ಯ ಅಧಿಕಾರಿ ಮಹಾಂತೇಶ ಹಾದಿಮನಿ ಹೇಳಿದರು.
ಸ್ಥಳೀಯ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪರಿಸರ ದಿನ ನಿಮಿತ್ಯವಾಗಿ ಉಸಿರಿಗಾಗಿ ಹಸಿರು ಹಾಗೂ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಇಂದಿನ ಜಗದಲ್ಲಿ ನಿಶ್ವಾರ್ಥ ಸೇವೆ ಸಲ್ಲಿಸಿದ ಸಾಲುಮರದ ತಿಮ್ಮಕ್ಕ ಅಂತವರನ್ನು ಈ ಸಂದರ್ಭದಲ್ಲಿ ನೆನೆಯುವುದು ಅತಿ ಅವಶ್ಯಕ ಎಂದ ಅವರು ಈ ಭೂಮಿಯ ಮೇಲೆ ಶೇ.33 ಅರಣ್ಯ ಅವಶ್ಯಕ ವಿದ್ದು ನಮ್ಮ ವಿಜಯಪುರ ಜಿಲ್ಲೆಯಲ್ಲಿ ಕೇವಲ 04ಅ ಅರಣ್ಯವಿದೆ ಹೀಗಾಗಿ ಬಯಲು ಸೀಮೆಯಾದ ನಮ್ಮ ಜಿಲ್ಲೆಯಲ್ಲಿ ನಾವು ಗಿಡಮರಗಳನ್ನ ಬೆಳೆಸಿ ಸುಂದರ ಪರಿಸರವನ್ನ ನಿರ್ಮಿಸವುದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಕೆ.ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಕಾಶಿನಾಥ ಮುರಾಳ ಅವರು ಪರಿಸರವನ್ನು ನಾವು ಕೇವಲ ಹಸಿರಿಗಾಗಿ ಅಲ್ಲ, ನಮ್ಮ ಉಸಿರಿಗಾಗಿ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಆರ್.ಎಂ.ಬಂಟನೂರ ನಾವು ಸುಂದರವಾಗಿ ಬದುಕಲು ನಮ್ಮ ಮನೆ, ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಂಡರೆ ಸಾಲದು ನಮ್ಮ ಹಳ್ಳಿ, ರಾಜ್ಯ, ದೇಶ ಹೀಗೆ ಇಡೀ ನಮ್ಮ ಪರಿಸರ ಸ್ವಚ್ಛವಾಗಿ ಸುಂದರವಾಗಿ ಇಟ್ಟುಕೊಂಡರೇ ನಾವು ಸುಂದರವಾಗಿ ಬದುಕಲು ಸಾಧ್ಯ ಎಂದರು.
ಪ್ರಶಿಕ್ಷಣಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. ಕು. ಪ್ರವೀಣ ಪರಿಸರ ಜಾಗೃತಿ ಕುರಿತು ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿದನು. ಪರಿಸರ ಜಾಗೃತಿ ಕುರಿತು ವಿದ್ಯಾರ್ಥಿಗಳು ಕಿರು ನಾಟಕವನ್ನೂ ಪ್ರದರ್ಶಿಸಿದರು.
ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಮಾಳಿಂಗರಾಯ ಮೇಗಲಮನಿ ಇವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಐ.ಕ್ಯೂ.ಎ.ಸಿ. ಸಂಯೋಜಕ ಯು.ಎನ್. ಮಂಗೊಂಡ ಎನ್.ಎಸ್.ಎಸ್ ಸಂಯೋಜಕಾರ ಎ.ಎ ಗಂಗನಗೌಡರ ವಿಜ್ಞಾನ ವಿಭಾಗದ ಉಪನ್ಯಾಸಕ ಎಮ್. ಎ. ಪೋತದಾರ ಉಪಸ್ಥಿತರಿದ್ದರು. ಕಾಲೇಜಿನ ಸರ್ವ ಸಿಬ್ಬಂದಿ ವರ್ಗ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವೇಂದ್ರ್ಪ ಗೋಪಾಲೆರ ಪ್ರಾರ್ಥಿಸಿದರು. ಶಿವರಾಜ ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು. ನೇತ್ರಾವತಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 