ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ಪ್ರೊ: ಎಂ.ಬಿ.ರಜಪೂತ

ವಿಜಯಪುರ: ಡಿ,22- ಭವಿಷ್ಯದ ದಿನಗಳಲ್ಲಿ ಮನುಕುಲ, ಪ್ರಾಣಿ ಸಂಕುಲ ಆರೋಗ್ಯದಿಂದ ಇರಬೇಕಾದರೆ ಪರಿಸರದ ರಕ್ಷಣೆ ಅಗತ್ಯ ಎಂದು ವಿಜಯಪುರ  ಬಾಲಕೀಯರ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರೋ.ಎಂ.ಬಿ ರಜಪೂತ ಹೇಳಿದರು.

ಇತ್ತೀಚೆಗೆ ಇಂಡಿ ತಾಲೂಕಿನ ಲಚ್ಯಾಣ ಸಕರ್ಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸಾಲು ಮರದ ತಿಮ್ಮಕ್ಕ ಹಸಿರು ಪಡೆಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಹಸಿರೇ ಉಸಿರು ಹಸಿರನ್ನು ಪ್ರೀತಿಸಿ ಹಸಿರಿನ ಜೊತೆ ಜೀವಿಸಿ, ಹಸಿರಾಗಿರಿ ಏಕೆಂದರೆ ಹಸಿರಿಲ್ಲದ ಭೂಮಿ ಬರಡು ಬರಡು ಭೂಮಿಯಲ್ಲಿ ಬದುಕು ಅಸಾಧ್ಯ ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಪರಿಸದ ಮೇಲೆ ಮಾನವ ಮಾಡುತ್ತಿರುವ ದೌರ್ಜಜ್ಯದಿಂದ ಪರಿಸರ ಮಾಲಿನ್ಯವಾಗುತ್ತಿದೆ ಇದರಿಂದ ವಾತಾವರಣದಲ್ಲಿ ಏರು-ಪೇರು ಉಂಟಾಗಿ ಅನೇಕ ನೈಸಗರ್ಿಕ ವಿಕೋಪಗಳು ಸಂಭವಿಸುತ್ತಿವೆ ಇದದರಿಂದ ಭೂಮಿಯ ಉಷ್ಣಾಂಶದಲ್ಲಿ ಕೂಡ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಅತಿ ಚಳಿ ಇಲ್ಲವೆ ತಾಪಮಾನ ಉಂಟಾಗಿ ಜೀವಿಗಳಿಗೆ, ಸಸ್ಯ ವರ್ಗಕ್ಕೆ ತೊಂದರೆ ಉಂಟಾಗುತ್ತಿದೆ ಉದಾಹರಣೆಗೆ ಕಳೆದ ಬುಧವಾರ ಜಿಲ್ಲೆಯಲ್ಲಿ ಉಂಟಾದ ಮಂಜು ಹಾಗೂ ಅತೀ ಶೀತಗಾಳಿಯೇ ಸಾಕ್ಷಿ ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಕೆ.ಎ. ಉಪ್ಪಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಸರ ಮಾಲಿನ್ಯದಿಂದಾಗಿ ಭೂಮಿಯ ಓಝೋನ ಪದದರು ಹಾನಿಗೊಳಗಾಗುತ್ತಿದೆ ಅದರಿಂದ ಮನುಕುಲ, ಪ್ರಾಣಿಕುಲ, ಜಲಚರಗಳ ಮೇಲೆ  ಪರಿಣಾಮ ಬೀರಿ ಎಲ್ಲವೂ ನಾಶವಾಗಬಲ್ಲವು ಆದ್ದರಿಂದ ತಾವೆಲ್ಲರೂ ಪರಿಸರ ರಕ್ಷಣೆಗೆ ಹೆಚ್ಚು ಒತ್ತು ನೀಡಿ ಈ ಮನೆ ಮನೆಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಸಾನಿಧ್ಯವನ್ನು ಲಚ್ಯಾಣದಸಿದ್ದಲಿಂಗ ಮಹಾರಾಜರ ಮಠದಬಸವ ಅಜ್ಜನವರು ವಹಿಸಿದ್ದರು.

ಪ್ರೊ. ಎಚ್.ಎಸ್.ಗೋಟ್ಯಾಳ ಸ್ವಾಗತ ಹಾಗೂ ಪರಿಚಯ ಮಾಡಿಕೊಟ್ಟರು. ಪ್ರೊ. ಆರ್.ವಿ.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ. ಎಚ್.ಡಿ.ಹಳ್ಳಿ ವಂದಿಸಿದರು, ಹಸಿರು ಪಡೆಯ ಸಂಚಾಲಕರಾದ ಪ್ರೊ. ಮಲ್ಲಿಕಾಜರ್ುನ ಟಿ.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ.ಬಿ.ಜಿ.ಗೊಳ್ಳಗಿ, ಪ್ರೊ. ಬಿ.ಆರ್.ಸ್ಥಾವರಮಠ, ಪ್ರೊ. ಸಿ.ಕೆ.ಸದಲಾಪುರ, ಅರುಣಕುಮಾರ ಹಾಗೂ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಭಾಗವಹಿಸಿ ಕಾರ್ಯಕ್ರಮ ಯಶಶ್ವಿಗೊಳಿಸಿದರು.