ಪರಿಸರ ಮಾಲಿನ್ಯ: ಕಾಲೇಜು ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆ
ಯಮಕನಮರಡಿ 08: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಸಿರು ಪಡೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಪರಿಸರ ಮಾಲಿನ್ಯ ಕುರಿತು ಭಾಷಣ ಸ್ಪರ್ಧೆ ಏರಿ್ಡಸಲಾಯಿತು.
ಸ್ಪರ್ಧೆಯಲ್ಲಿ ಅಮೂಲ್ಯ ಪಾಟೀಲ ಪ್ರಥಮ, ಸಂದ್ಯಾ ನಾವಿ ದ್ವಿತೀಯ, ಉಮಾ ಬೆಣ್ಣಿ ತೃತೀಯ ಹಾಗೂ ಜಾಹ್ನವಿ ಮಾದರ ಸಮಾಧಾನಕರ ಬಹುಮಾನ ಪಡೆದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರು ವಹಿಸಿದ್ದರು.
ಉಪನ್ಯಾಸಕರುಗಳಾಗದ ಬಿ.ಬಿ.ಕೊಡ್ಲಿ, ಸವಿತಾ ಹುಣ್ಣರಗಿ ಹಾಗೂ ಸ್ವಾತಿ ಬಾಗೇವಾಡಿ ನಿರ್ಣಾಯಕರಾಗಿ ಭಾಗವಹಿದ್ದರು. ಅತಿಥಿಗಳಾಗಿ ಎ.ಎ.ಕಿವಂಡಾ ಇವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಎಸ್.ಆರ್ ತಬರಿ ನಡೆಸಿಕೊಟ್ಟರು.