ಮಕ್ಕಳು ದಿನ ಡಾ ಅಂಬೇಡ್ಕರ್ ಭಾವಚಿತ್ರಕ್ಕೆ ಕೈ ಮುಗಿಯಬೇಕು: ಶಾಸಕ ಹೆಬ್ಬಾರ್

Reconstructed Samaj Mandir of Chalawadi Samaj

ಮುಂಡಗೋಡ 09: ಮಕ್ಕಳು ದಿನ ಬೆಳಿಗ್ಗೆ ಸ್ಕೂಲ್ ಗೆ ಹೋಗುವಾಗ ಡಾ ಬಿ ಆರ್‌. ಅಂಬೇಡ್ಕರ್  ಅವರ ಭಾವಚಿತ್ರಕ್ಕೆ ಕೈ ಮುಗಿದು ಹೋಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳದರು. 

ಅವರು ಪಟ್ಟಣದ ಗಾಂಧಿನಗರದಲ್ಲಿನ ಚಲವಾದಿ ಸಮಾಜದ ಪುನರ್‌ರ್ನಿರ್ಮಾಣಗೊಂಡ ಸಮಾಜ ಮಂದಿರವನ್ನು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡದರು.   ಮಾಜಿ ಶಾಸಕ ವಿ ಎಸ್ ಪಾಟೀಲ ಮಾತನಾಡುತ್ತ ಅಂಬೇಡ್ಕರ್ ಸಭಾ ಭವನ ಬರೀ ಕಟ್ಟಿದರೆ ಆಗಲಿಲ್ಲ, ಅಂಬೇಡ್ಕರ್ ಹೆಸರಲ್ಲಿ ಕಟ್ಟಿದ ಸಭಾಭವನದ ನಿರ್ವಹಣೆ ನಿರಂತರವಾಗಿರಬೇಕು, ಯಾವತ್ತೂ ಚಾಲ್ತಿಯಲ್ಲಿರಬೇಕು, ಸಭಾಭವನ ಖಾಲಿ ಇರಬಾರದು" ಎಂದರು.    

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ.ಎಸ್‌.ಪಾಟೀಲ್, ಪ.ಪಂ ಅಧ್ಯಕ್ಷರಾದ ಜಯಸುಧಾ ಬೋವಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಿವರಾಜ ಸುಬ್ಬಯ್ಯನವರ್, ಸದಸ್ಯರಾದ ಮಹಮ್ಮದ ಗೌಸ್ ಮಕಾನದಾರ್, ಚಲವಾದಿ ಸಮಾಜದ ಅಧ್ಯಕ್ಷರಾದ ಈರ​‍್ಪ ಚಲವಾದಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಜ್ಞಾನೇಶ್ವರ ಗುಡಿಯಾಳ, ಪ್ರಮುಖರಾದ ಎನ್‌.ಎಮ್ ಧುಂಡಶಿ, ನಾಗಭೂಷಣ ಹಾವಣಗಿ, ರಾಘು ಟಪಾಲದಾರ್  ಸೇರಿದಂತೆ ಚಲವಾದಿ ಸಮುದಾಯದ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.