ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಜಮ್ಮಣ್ಣವರ್ ನೇಮಕ

Jammanwar appointed as State Vice President of Government Employees Union

ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಜಮ್ಮಣ್ಣವರ್ ನೇಮಕ  

ಕೊಪ್ಪಳ 9: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕಕ್ಕೆ ಹಿರಿಯಉಪಾಧ್ಯಕ್ಷರಾಗಿ ಕೊಪ್ಪಳದ ನಾಗರಾಜ್ ಜುಮ್ಮಣ್ಣವರ್ ನೇಮಕಗೊಂಡಿದ್ದಾರೆ ಸದರಿಯವರನ್ನು ರಾಜ್ಯ ಘಟಕಕ್ಕೆ ಹಿರಿಯ ಉಪಾಧ್ಯಕ್ಷರನ್ನಾಗಿ ಸಂಘದ ರಾಜ್ಯ ಅಧ್ಯಕ್ಷ ಸಿಎಸ್ ಕ್ಷಡಾಕ್ಷ್ರರಿ ಯವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸದರಿಯವರು ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ ಜನ ಸಾಮಾನ್ಯರ, ಸರ್ಕಾರಿ ನೌಕರ ವರ್ಗದ, ಅಧಿಕಾರಿ, ಸಿಬ್ಬಂದಿ ವರ್ಗದವರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವುದಲ್ಲದೆ ಇವರ ಉತ್ತಮ ಸಂಘಟನೆ ಸೇವೆಯನ್ನು ಪರಿಗಣಿಸಿ ರಾಜ್ಯಾಧ್ಯಕ್ಷರು ಇವರನ್ನು ರಾಜ್ಯ ಘಟಕಕ್ಕೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಕೊಂಡಿದ್ದಾರೆ. ಇವರ ನೇಮಕದಿಂದ ಕೊಪ್ಪಳ ಜಿಲ್ಲೆಯ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಸದಸ್ಯರು ಸರ್ಕಾರಿ ನೌಕರರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ