ಪರಿಸರ ಶುದ್ಧಿ, ರೋಗರುಜಿನಗಳು ದೂರಾಗಲು ಯಾಗಗಳು ಅಗತ್ಯ: ಶಿವಯೋಗಿ ಶ್ರೀ

 ಲೋಕದರ್ಶನವರದಿ

ರಾಣೇಬೆನ್ನೂರು17: ದೇಶದ ಎರಡನೇ ಹಾಗೂ ರಾಜ್ಯದ ಮೊದಲನೆಯ ಬಯಲು ಆಲಯದ ಸ್ಥಳೀಯ ಹಿರೇಮಠದ ಶ್ರೀ ಶನೈಶ್ಚರ ಮಂದಿರದ ಏಳನೇ ವಾಷರ್ಿಕೋತ್ಸವದ ನಿಮಿತ್ಯ ಲೋಕಕಲ್ಯಾಣಾರ್ಥವಾಗಿ, ಧರ್ಮದ ಉಳಿವಿಗಾಗಿ  ಮತ್ತು ಪರಿಸರ ಸಂರಕ್ಷಣೆಗಾಗಿ ಮಹಾರುದ್ರಯಾಗವು ರವಿವಾರ ನೂರಾರು ಭಕ್ತರ ಮಧ್ಯ ಬಹು ಅರ್ಥಪೂರ್ಣವಾಗಿ ಮತ್ತು ವೈಶಿಷ್ಟ್ಯಮಯವಾಗಿ ನಡೆಯಿತು. 

    ಶನೈಶ್ಚರ ಮಂದಿರದ ಶಿವಯೋಗಿ ಮಹಾಸ್ವಾಮಿಗಳು ಮಾತನಾಡಿ, ಈ ಮಹಾರುದ್ರಯಾಗ ಮಾಡುವುದರಿಂದ  ಪರಿಸರ ಶುದ್ದಿಯಾಗುವುದು, ಮನುಜನಲ್ಲಿನ ರೋಗ-ರುಜೀನಗಳು ದೂರವಾಗುವವು, ಪರಿಸರದಲ್ಲಿನ ಕ್ರಿಮಿ-ಕೀಟಗಳು ನಾಶವಾಗುವವು. 

       ಇದರಿಂದ ಮನುಷ್ಯನ ಹಾಗೂ ಆತನ ಕುಟುಂಬ ವರ್ಗದಲ್ಲಿ   ಉತ್ತಮ ಆರೋಗ್ಯ ಕಂಡು ಬರುವುದು, ಈ ಕಾರಣಕ್ಕಾಗಿ ಸಮಸ್ತ ಮನುಕುಲದ ಏಳ್ಗೆಗೆ ಈ ಯಾಗ ಮಾಡಲಾಗುತ್ತಿದೆ  ಎಂದರು. 

     ಚಕ್ರರೂಪಿ ಮಹಾಮಾತೆಯ ಪೂಜೆ ಮಾಡುವುದರಿಂದ ಆಪತ್ತಿನಲ್ಲಿರುವವರನ್ನು ರಕ್ಷಿಸುತ್ತಾಳೆ. ಜಗತ್ತಿನ ಯೋಗ ಕ್ಷೇಮಗಳಿಗೆ ಕಾರಣಳಾಗುತ್ತಾಳೆ. ಭಕ್ತಿ ಶ್ರದ್ದೆಗಳಿಂದ ಕುಂಕುಮಾರ್ಚನೆ ಮಾಡಿದರೆ ಆಯುಷ್ಯ ಹೆಚ್ಚಳವಾಗುತ್ತದೆ. ಪಂಚಾಕ್ಷರಿ ಜಪ ಮಾಡುವುದರಿಂದ ದು:ಖ, ನೋವುಗಳನ್ನು ದೂರ ಮಾಡಲು ಶಕ್ತಿ ಬರುತ್ತದೆ. ಇಂದಿನಿಂದ ಆರಂಭಗೊಂಡ ಮಹಾರುದ್ರಯಾಗವು ನ.23ರಂದು ಮಂಗಲಗೊಳ್ಳುವುದು.

    ಧರ್ಮ ಮತ್ತು ಆಧ್ಯಾತ್ಮದಿಂದ ಮನುಷ್ಯನಲ್ಲಿರುವ ದುಗುಡ, ದುಮ್ಮಾನಗಳು ಕ್ಷೀಣಗೊಂಡು ಮನಸ್ಸು ಆಹ್ಲಾದಗೊಳ್ಳುವುದರಿಂದ ಹೆಚ್ಚಿನ ಆಸಕ್ತಿ ಹೊಂದಬೇಕು. 

  ದಿನಂಪ್ರತಿ ಮಂದಿರದ ಅವರಣದಲ್ಲಿ ನಡೆಯುವ ವಿವಿಧ ಧಾಮರ್ಿಕ ಮತ್ತು ಪ್ರವಚನ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಾವನರಾಗಬೇಕು ಎಂದರು. 

    ಇದೇ ಸಂದರ್ಭದಲ್ಲಿ ಶಿದ್ದಾಂತ ಶಿಖಾಮಣಿ ಪಾರಾಯಣ, ಶ್ರೀಲಲಿತ ಸಹಸ್ರನಾಮ ಪಾರಾಯಣ, ಚಕ್ರರೂಪಿ ಮಹಾಮಾತೆಗೆ ಕುಂಕುಮಾರ್ಚನೆ, ಅಧ್ಯಾತ್ಮಿಕ ಪ್ರವಚನ, ಸಂಗೀತ ಸುಧೆ, ಮಹಾಮಂಗಳಾರತಿ, ಪ್ರಸಾದ  ಕಾರ್ಯಕ್ರಮಗಳು ದಿನಂಪ್ರತಿ ಜರುಗುವವು. ಹೇರೂರಿನ ಗುಬ್ಬಿ ನಂಜುಂಡೇಶ್ವರ ಸ್ವಾಮಿಗಳು, ವೈದಿಕ ಪುರೋಹಿತರು ಹಾಗೂ ಸ್ಥಳೀಯ ಶಾಸ್ರ್ತೀಗಳು, ವಟುಗಳು, ಸೇರಿದಂತೆ ಭಕ್ತರು ಮತ್ತಿತರರು ಯಾಗದಲ್ಲಿ ಭಾಗವಹಿಸಿದ್ದರು.