ರಾಣೇಬೆನ್ನೂರು-ಜು.27: ಪರಿಸರ ಜಾಗೃತಿ ಪ್ರತಿಯೊಬ್ಬ ವಿದ್ಯಾಥರ್ಿಗಳಲ್ಲಿ ಒಡಮೂಡಬೇಕಾಗಿದೆ. ಪರಿಸರ ರಕ್ಷಿಸದೇ ಹೋದರೆ, ಭವಿಷ್ಯದಲ್ಲಿ ಅನೇಕ ಸಮಸ್ಯಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಮಕ್ಕಳಲ್ಲಿ ಅರಿವು ಮತ್ತು ಜಾಗೃತಿ ಮೂಡಿವು ಕೆಲಸ ಶಿಕ್ಷಕರು ಮಾಡಲು ಮುಂದಾಗಬೇಕು ಎಂದು ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವ್ಹಿ.ಪಿ.ಲಿಂಗನಗೌಡ್ರ ಹೇಳಿದರು.
ಅವರು ತಾಲೂಕಿನ ಹನುಮನಮಟ್ಟಿ ಗ್ರಾಮದ ದಿ ಮಾಡೆಲ್ ಹೈಯರ್ ಸೆಕೆಂಡರಿ ಸ್ಕೂಲ್ ಸಭಾಂಗಣದಲ್ಲಿ ರೋಟರಿ ಹಾಗೂ ಇನ್ನರ್ವೀಲ್ ಮತ್ತು ಸಾಮಾಜಿಕ ಅರಣ್ಯ ಇಲಾಖೆಯು ಆಯೋಜಿಸಿದ್ದ, ವನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಸಿರು ನಮ್ಮ ನಿತ್ಯದ ಬದುಕಿನಲ್ಲಿ ಉಸಿರಾಗಬೇಕಾದರೆ, ನಾವು ಬಾಳಿ ಬದುಕುವ ಪರಿಸರವು ಹಚ್ಚ-ಹಸಿರಾಗಿರುವಂತೆ ಮಾಡಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು ನಮ್ಮ ಹಕ್ಕಿಗಾಗಿ ಪ್ರತಿಪಾದಿಸುವ ನಾವುಗಳು ಪರಿಸರ ಮತ್ತು ಸಮಾಜಕ್ಕಾಗಿ ನಾವು ನೀಡಬೇಕಾದ ಕೊಡುಗೆ ಮತ್ತು ಜವಾಬ್ದಾರಿ ಏನು ಎಂಬುದನ್ನು ಮೊದಲು ಅರಿತುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಪರಿಸರ ಬೆಳೆಸುವ ಮತ್ತು ಉಳಿಸುವ ಕಾರ್ಯದಲ್ಲಿ ಮುಂದಾಗಬೇಕಾದ ಹೊಣೆ ನಮ್ಮದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಮಹಿಳಾ ಮುಖಂಡರಾದ ಭಾರತಿ ಜಂಬಿಗಿ, ರೋಟರಿ ಅಧ್ಯಕ್ಷೆ ಟಿ.ಹೆಚ್.ವೀರೇಶ್, ವಲಯ ಅರಣ್ಯಧಿಕಾರಿ ಪಿ.ಎಲ್.ಆನವಟ್ಟಿ, ಮುಖ್ಯೋಪಾಧ್ಯಾಯ ಎಲ್.ಬಿ.ಅಜ್ಜೇರ, ಶಿಕ್ಷಕಿಯರಾದ ಜೆ.ಎಂ.ಖಾನಪೇಟ, ಎಸ್.ಡಿ.ಹೊನ್ನಮ್ಮನವರ, ಎಸ್.ಕೆ.ಬಲಕುಂದಿ, ಎನ್.ಐ.ಅತ್ತಾರ, ಎಸ್.ಹೆಚ್,.ಕುಸಗೂರ, ಕಾಂತೇಶ ಬಾಕರ್ಿ ಸೇರಿದಂತೆ ರೋಟರಿ ಇನ್ನರ್ವೀಲ್ ಪದಾಧಿಕಾರಿಗಳು ಮತ್ತು ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು