ಉದ್ಯಮಶೀಲತೆಯ ಕೌಶಲ್ಯದಿಂದ ವೃತ್ತಿ ಬದುಕು ಉನ್ನತಗೊಳ್ಳಲು ಸಾಧ್ಯ: ನರಸಿಂಹಮೂರ್ತಿ
ಹಾವೇರಿ14: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತ ದೇಶದ ಉಜ್ವಲತೆಗೆ ಕೈಗಾರಿಕೆಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉದ್ಯಮಶೀಲತೆಯ ಕೌಶಲ್ಯ ಮತ್ತು ರಚನಾತ್ಮಕತೆಯಿಂದ ವೃತ್ತಿ ಬದುಕು ಉನ್ನತಗೊಳ್ಳಲು ಸಾಧ್ಯವೆಂದು ಧಾರವಾಡ ಅಭಿನವ ಯೂಥ್ ಎಂಪವರ್ಮೆಂಟ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ನರಸಿಂಹಮೂರ್ತಿ ರಾಯಚೂರ ಹೇಳಿದರು.
ಅವರು ನಗರದ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗವು ಆಯೋಜಿಸಿದ್ದ 'ಉದ್ಯಮಶೀಲತೆಯ ಸಮಸ್ಯೆಗಳು ಮತ್ತು ಸವಾಲುಗಳು' ವಿಷಯಾರ್ಥ ಜರುಗಿದ ಒಂದು ದಿನದ ವಿಶೇಷ ಕಾಯರ್ಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಉದ್ಯಮಶೀಲರಾದವರಿಗೆ ವಾಸ್ತವದ ಅರಿವು ಮುಖ್ಯ. ಉದ್ಯೋಗ ಪಡೆದುಕೊಳ್ಳುವುದೇ ವೃತ್ತಿ ಜೀವನವಲ್ಲ. ವೃತ್ತಿಯ ಹಂತಗಳನ್ನು ಅರಿತು ಸ್ವತಃ ಉದ್ಯಮವನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ದೊರಕಿಸುವ ಹೆದ್ದಾರಿಯನ್ನು ಉದ್ಯಮಶೀಲತೆಯು ತೋರುತ್ತದೆ. ವೃತ್ತಿ ಕೌಶಲ್ಯಗಳು ವ್ಯಕ್ತಿಯ ವಿಕಾಸಕ್ಕೆ ಪೂರಕ. ಮಾಹಿತಿ ಮತ್ತು ತಂತ್ರಜ್ಞಾನದ ಮೂಲಕ ನವ್ಯ ಆವೀಷ್ಕಾರಗಳನ್ನು ಅಥರ್ೈಸಿಕೊಂಡು ಹೆಜ್ಜೆ ಹಾಕುವ ಅವಶ್ಯಕತೆ ಇದೆ ಎಂದರು.
ಧಾರವಾಡ ಕನೆಕ್ಟ್ ಸಂಸ್ಥೆಯ ಮಾನವ ಸಂಪನ್ಮೂಲ ತರಬೇತುದಾರ ಗಿರೀಶ ಅಂಗಡಿ ಮಾತನಾಡಿ ವ್ಯಕ್ತಿಯ ಬೆಳವಣಿಗೆಗೆ ಕೈಗಾರಿಕೆಗಳು ಪೂರಕವಾದ ವಾತಾವರಣ ಸೃಷ್ಠಿ ಮಾಡುವುದರ ಜೊತೆಗೆ ಸೃಜನಶೀಲತೆಯನ್ನುಂಟು ಮಾಡುತ್ತವೆ. ಕಲಿಕಾಥರ್ಿಗಳು ವಿಷಯದ ಕಲಿಕೆ ಮತ್ತು ಪ್ರಸ್ತುತತೆಯನ್ನು ಅರಿತು ಮುನ್ನಡೆಯುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಪಿ. ಡಿ. ಶಿರೂರ ಮಾತನಾಡಿ ಉದ್ಯಮಶೀಲತೆ ಕ್ಷೇತ್ರದಲ್ಲಿ ಸವಾಲುಗಳು ಹಲವು, ಸಮಸ್ಯೆಗಳು ನಿರಂತರ ಅವುಗಳ ಸರಿಯಾದ ತಿಳುವಳಿಕೆಯಿಂದ ಯಶಸ್ಸು ಕಾಣಲು ಸಾಧ್ಯವೆಂದರು.
ವೇದಿಕೆಯಲ್ಲಿ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಸವರಾಜ ಮಾಸೂರ, ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ, ಪ್ರೊ. ರಮೇಶ ಬಿ. ಅಜರಡ್ಡಿ, ಪ್ರೊ. ಜಿ. ಎಸ್. ಬಾಕರ್ಿ ಉಪಸ್ಥಿತರಿದ್ದರು. ಪ್ರೊ. ದೀಪಾ ಸಂಗಮ ಪ್ರಾಥರ್ಿಸಿದರು. ವಿಭಾಗದ ಮುಖ್ಯಸ್ಥ ಡಾ|| ಎಮ್. ಜಿ. ಯರನಾಳ ಸ್ವಾಗತಿಸಿದರು. ಡಾ|| ಗುರುಪಾದಯ್ಯ ವೀ. ಸಾಲಿಮಠ ನಿರ್ವಹಿಸಿದರು. ಪ್ರೊ. ಸುಮಾ ಹಿರೇಮಠ, ಪ್ರೊ. ರಿಷಿಕಾ ಡಿ., ಪ್ರೊ. ಸುಮಂಗಲಾ ಜಿ. ಎಮ್., ಪ್ರೊ. ಪಿ. ಯು. ಡೊಂಕಣ್ಣವರ ಹಾಗೂ ವಾಣಿಜ್ಯ ವಿಭಾಗದ ವಿದ್ಯಾಥರ್ಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 