ಪ್ರವೇಶ ಪರಿಚಯ ಸಮಾರಂಭ

ಬೆಳಗಾವಿ, 15: ಕೆ.ಎಲ್.ಎಸ್. ರಾಜಾಲಖಮಗೌಡಾ ಕಾನೂನು ಮಹಾವಿದ್ಯಾಲಯ ಪ್ರಥಮ ವರ್ಷದ 3 ವರ್ಷ ಎಲ್.ಎಲ್.ಬಿ., 5 ವರ್ಷ ಬಿ.ಎ. ಎಲ್.ಎಲ್.ಬಿ. ಹಾಗೂ ಬಿಬಿಎ ಎಲ್.ಎಲ್.ಬಿ. ವಿದ್ಯಾಥರ್ಿಗಳಿಗೆ ಪ್ರವೇಶ ಪರಿಚಯ ಸಮಾರಂಭವನ್ನು 14, ಸಪೆಂಬರ್, 2019 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಂಡಿತ್ತು.

"ಸಾಮಾಜಿಕ ಜವಾಬ್ದಾರಿಯೇ ಕಾನೂನು ವೃತ್ತಿಯ ಮುಖ್ಯ ಧ್ಯೇಯ ಎಂದು ಮುಖ್ಯಅತಿಥಿಗಳಾದ ಶ್ರೀ ಎ.ಜಿ.ಮುಳವಾಡಮಠ ವಕೀಲರು ಹಾಗೂ ಅಧ್ಯಕ್ಷರು, ಬೆಳಗಾವಿ ವಕೀಲರ ಸಂಘ, ಅವರು ಹೇಳಿದರು. ಕಾನೂನು ವೃತ್ತಿಯಲ್ಲಿ ಹೇಗೆ ಮುಂದುವರೆಯಬೇಕು ಹಾಗೂ ಮನಃಪೂರಕ ಅಭ್ಯಾಸ ಮಾಡಲು ವಿದ್ಯಾಥರ್ಿಗಳಿಗೆ ಸಲಹೆ ಕೊಟ್ಟರು.

ಆರ್.ಎಸ್.ಮುತಾಲಿಕ್ (ದೇಸಾಯಿ), ವಕೀಲರು ಹಾಗೂ ಸದಸ್ಯರು, ಕೆ.ಎಲ್.ಎಸ್. ಆರ್.ಎಲ್.ಎಲ್.ಸಿ ಆಡಳಿತ ಮಂಡಳಿ, ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾನೂನು ವಿದ್ಯಾಭ್ಯಾಸ ಹಾಗೂ ವಕೀಲ ವೃತ್ತಿಯ ಬಗ್ಗೆ ತಿಳುವಳಿಕೆ ನೀಡಿದರು.

ಪ್ರಾಂಶುಪಾಲರಾದ ಡಾ. ಎ.ಎಚ್.ಹವಾಲ್ದಾರ್ ಅವರು ಸ್ವಾಗತಿಸಿದರು ಹಾಗೂ ಸಂಸ್ಥೆಯ ಕೊಡುಗೆಗಳನ್ನು ವಿವರಿಸಿದರು. ಡಾ. ಸಮಿನಾ ಬೇಗ್ ಅತಿಥಿಗಳನ್ನು ಪರಿಚಯಿಸಿದರು. ರಾಹುಲ್ ಭಾಂದುಗರ್ೆ ವಂದನಾರ್ಪಣೆ ಮಾಡಿದರು. ಶ್ರೀ ಸತೀಶ ಆನಿಖಿಂಡಿ ನಿರೂಪಣೆ ಮಾಡಿದರು. ಮಹಾವಿದ್ಯಾಲಯದ ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು