ಮನಸೂರೆಗೊಂಡ ಜೆ.ಎಸ್‌.ಎಸ್ ಸಂಕ್ರಾಂತಿ ಸಂತೆ

ಮನಸೂರೆಗೊಂಡ ಜೆ.ಎಸ್‌.ಎಸ್ ಸಂಕ್ರಾಂತಿ ಸಂತೆ Enthusiastic JSS Sankranti Festival


ಧಾರವಾಡ 13 : ನಗರದ ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಸಿ.ಬಿ.ಎಸ್‌.ಇ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ ಹಾಗೂ ಸಂತೆಯನ್ನು ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ವಿವಿಧ ರಾಜ್ಯದಲ್ಲಿ ಹೇಗೆ ಸಂಕ್ರಾಂತಿ ಆಚರಿಸುತ್ತಾರೆ ಎಂದು ಉಡುಗೆತೊಡುಗೆಗಳನ್ನು ತೊಟ್ಟು ಮಕ್ಕಳು ಆಚರಣೆಗಳನ್ನು ಪ್ರದರ್ಶಿಸಿದರು. ಮಕ್ಕಳು ಹಬ್ಬಕ್ಕೆ ತಯಾರಿಸುವ ವಿವಿಧ ಭಕ್ಷ-ಭೋಜನಗಳನ್ನು ತಯಾರಿಸಿ ತಂದಿದ್ದು, ಜೆ.ಎಸ್‌.ಎಸ್ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಊಟವನ್ನು ಸವಿಯುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ  

ಹಬ್ಬ-ಹರಿದಿನಗಳ ಆಚರಣೆಯಿಂದ ಮಕ್ಕಳಿಗೆ ನಮ್ಮ ದೇಶದ ಸಂಸಕೃತಿಯ ಪರಿಚಯವಾಗುತ್ತದೆ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹಬ್ಬಗಳನ್ನು ಯಾವ ರೀತಿ ಆಯೋಜಿಸಲಾಗುತ್ತದೆ ಮತ್ತು ಅದರ ಮಹತ್ವ ಅವರಿಗೆ ತಿಳಿಯುತ್ತದೆ. ಅಷ್ಟೆ ಅಲ್ಲದೇ ಮಕ್ಕಳಲ್ಲಿ ಇದು ಸೌಹಾರ್ದಯುತ ಭಾವನೆ ಬೆಳೆಯಲು ಸಹಕಾರಿಯಾಗುತ್ತದೆ. ಸಂಕ್ರಾಂತಿ ಉತ್ತರಾಯಣದ ಪ್ರಾರಂಭ ಕಾಲವಾಗಿದ್ದು, ಸುಗ್ಗಿಯ ಹಬ್ಬವಾಗಿದೆ. ಈ ಹಬ್ಬದಲ್ಲಿ ಪುಣ್ಯಸ್ಥಾನ,  ಎಳ್ಳು-ಬೆಲ್ಲವನ್ನು ಹಂಚುವ ಮೂಲಕ ದ್ವೇಷ ಮರೆತು ಎಲ್ಲರು ಒಂದಾಗಿ ಆಚರಿಸುವ ಹಬ್ಬ ಇದಾಗಿದೆ. ಗಾಳಿಪಟ ಹಾರಿಸುವುದು, ವಿವಿಧ ತರಹದ ಸಿಹಿ ತಿನಿಸುಗಳನ್ನು ಕಟ್ಟಿಕೊಂಡು ಒಟ್ಟಾಗಿ ಊಟ ಮಾಡುವುದು ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣ ಮಾಡುತ್ತದೆ. ಈ ಸಂಕ್ರಾಂತಿ ಹಬ್ಬ ಮಕ್ಕಳಿಗೆ ಆಯರಾರೋಗ್ಯ ಮತ್ತು ಯಶಸ್ಸನ್ನು ದಯಪಾಲಿಸಲಿ ಎಂದು ಶುಭ ಹಾರೈಸಿದರು.  

ಇದೆ ಸಂದರ್ಭದಲ್ಲಿ ಮಕ್ಕಳಿಂದ ಸಂಕ್ರಾಂತಿ ನೃತ್ಯ, ರಾ​‍್ಯಪಿಡ್ ಎನ್‌.ಜಿ.ಓ ್ಘ ವೇದಾ ಎನ್‌.ಜಿ.ಓ ಸಿಬ್ಬಂದಿಗಳಿಂದ ಶಾಲಾ ಮಕ್ಕಳು ಮತ್ತು ಸಿಬ್ಬಂದಿಗಳಿಂದ ಕುಸರೆಳ್ಳು, ಕಡಲೇಕಾಯಿ, ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಕಬ್ಬು, ಚಟ್ನಿಪುಡಿ, ತರಕಾರಿ, ಚಿಗಳಿ, ಉಪ್ಪಿಕಾಯಿ, ಹೊಸ ಬಟ್ಟೆಗಳನ್ನು ಒಳಗೊಂಡಂತೆ 60 ಮಾರಾಟ ಮಳಿಗೆಗಳನ್ನು ತರೆಯಲಾಗಿತ್ತು .ಈ ಸಂತೆ ನೋಡಲು ಕಣ್ಣಿಗೆ ಸಂಕ್ರಾಂತಿ ಸಂಭ್ರಮವನ್ನು ನೀಡಿತು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು. ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಾಚಾರ್ಯೆ ಸಾಧನಾ ಎಸ್‌.  ಮಹಾವೀರ ಉಪಾದ್ಯೆ, ಮಾಲವಿಕಾ ಕಡಕೋಳ ಇತರರು ಉಪಸ್ಥಿತರಿದ್ದರು.