ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ: ಅನುರಾಧಾ ವಸ್ತ್ರದ
ಲೋಕದರ್ಶನ ವರದಿ
ಇಂಡಿ 03: ತಾಲೂಕಿನಾದ್ಯಂತ ಯಾವುದೇ ರೀತಿಯ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ ಇಂಡಿ ತಾಲೂಕು ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ರೃದ ಅವರು ಸೂಚನೆ ನೀಡಿದರು. ಇಂದು ಇಂಡಿ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅನುರಾಧಾ ವಸ್ತ್ರದರವರು ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಕುರಿತು ಚರ್ಚಿಸಿ ಮಾತನಾಡಿ ಬೇಸಿಗೆಯಲ್ಲಿ ಕುಡಿಯುವ ನೀರು ಸಮರ್ಕವಾಗಿ ಒದಗಿಸಲು ಯಾವುದೇ ಅಡೆ- ತಡೆ ಉಟಾಂಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಜನ -ಜಾನುವಾರುಗಳಿಗೆ ಯಾವುದೇ ರೀತಿ ನೀರಿನ ಅಭಾವವಾಗದಂತೆ ಕುಡಿಯುವ ನೀರು ಪೂರೈಸಬೇಕು ಎಂದು ಸೂಚಿಸಿದರು.ತಾಲೂಕಿನ ಬಸನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ನೀಲಂಗಿ ಅವರು ಬಸನಾಳ, ಅಗಸನಾಳ, ಕ್ಯಾತನಕೇರಿ ಹಾಗೂ ತಾಂಡಾಗಳ ಕುಡಿಯುವ ನೀರಿನ ಸಮಸ್ಯೆಗಳ ಇದೆ ಎಂದು ಮಾಹಿತಿ ನೀಡಿದರು.
ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ ಅವರು ಮಾತನಾಡಿ ಕುಡಿಯುವ ನೀರಿನ ಅನುದಾನ ಮಾಹಿತಿ ಪಡೆದು ಹಾಗೂ ಗ್ರಾಮ ಹಾಗೂ ವಸತಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಸಹಾಯಕ ನಿರ್ದೇಶಕರು ( ಪಂ ರಾ ್ಘ ಗ್ರಾ ಉ) ಹಾಗೂ ಇಂಡಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.