ಓದುವುದರಿಂದ ಕಲ್ಪನಾಶಕ್ತಿ ವೃದ್ಧಿ: ವಾಜಂತ್ರಿ

ಲೋಕದರ್ಶನವರದಿ

ಮಹಾಲಿಂಗಪುರ: ಓದುವುದರಿಂದ ನಮ್ಮ ಮೆದುಳು ಚುರುಕುಗೊಂಡು ಕಲ್ಪನಾಶಕ್ತಿ ಹೆಚ್ಚಾಗುವುದರ ಮೂಲಕ ವಿವೇಚನೆಗೆ ದಾರಿಮಾಡಿಕೊಡುತ್ತದೆ ಎಂದು ಗ್ರಂಥಾಲಯ ಪ್ರಾಕಾರ ಸದಸ್ಯ ಯಶವಂತ ವಾಜಂತ್ರಿ ಹೇಳಿದರು.

ಸ್ಥಳೀಯ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಪುಸ್ತಕ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಮಾತನಾಡಿದ ಅವರು, ಗ್ರಂಥಾಲಯ ಅರಿವಿನ ಜ್ಞಾನದೀವಿಗೆ. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಅನುಭವವನ್ನು ನೀಡುವ ಅಕ್ಷರ ಭಂಡಾರ. ಗ್ರಂಥಾಲಯ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿ ಹೋಗುವುದಿಲ್ಲ ಎಂದರು.

ಮಕ್ಕಳ ಸಾಹಿತಿ ಅಣ್ಣಾಜಿ ಫಡತಾರೆ ಮಾತನಾಡಿ, ಪುಸ್ತಕ ಮನರಂಜನೆ ಮತ್ತು ಅಭಿರುಚಿಯನ್ನು ನೀಡುವುದರ ಮೂಲಕ ಹೊಸ ಅನುಭವವನ್ನು ನೀಡುತ್ತದೆ. ಗ್ರಂಥಾಲಯದಲ್ಲಿ ಕೇವಲ ಪುಸ್ತಕಗಳು ಇರದೇ ದಿನಪತ್ರಿಕೆಗಳು, ಮಾಸಪತ್ರಿಕೆಗಳು, ಇನ್ನೂ ಅನೇಕ ಸಾಮಾನ್ಯ ಪುಸ್ತಕಗಳನ್ನು ಕೂಡಾ ಇರುತ್ತವೆ. ಎಲ್ಲ ವಯಸ್ಸಿನವರು ಇಷ್ಟಪಡುವ ಅಭಿರುಚಿಯ ಸಾಹಿತ್ಯ ಗ್ರಂಥಾಲಯದಲ್ಲಿರುತ್ತದೆ. ಓದು ಮತ್ತು ಬರಹ ಮನುಷ್ಯರನ್ನು ಜ್ಞಾನವಂತರನ್ನಾಗಿ ಮಾಡುತ್ತದೆ. ಸಾರ್ವಜನಿಕ ಗ್ರಂಥಾಲಯ ಒಂದು ಮುಕ್ತ ಸಾರ್ವಜನಿಕ ಸಂಸ್ಥೆ ಮತ್ತು ಸಾಮಾನ್ಯನ ವಿಶ್ವವಿದ್ಯಾಲಯ ಎನ್ನಿಸಿಕೊಂಡಿದೆ ಎಂದರು.

ಪತ್ರಕರ್ತ ಚಂದ್ರಶೇಖರ ಮೋರೆ ಮಾತನಾಡಿ 51 ವರ್ಷಗಳ ಇತಿಹಾಸ ಇರುವ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲದಿರುವದು ವಿಷಾದನೀಯ. ಪುರಸಭೆ ಮತ್ತು ಕ್ಷೇತ್ರದ ಶಾಸಕರ ಮೇಲೆ ಒತ್ತಡ ತಂದು ಗ್ರಂಥಾಲಯಕ್ಕೆ ಸ್ವಂತ ನಿವೇಶನ ಸಿಗುವರೆಗೂ ಓದುಗರು ಹೋರಾಟ ಮಾಡುವದು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ನಿವೃತ್ತ ಗ್ರಂಥಪಾಲಕ ಎಸ್.ವ್ಹಿ.ಕೆಂಪಲಿಂಗನ್ನವರ ಮಾತನಾಡಿ, ಗ್ರಂಥಾಲಯಗಳನ್ನು ಯಾರೂ ಪ್ರೀತಿಸುತ್ತಾರೋ ಅದು ಅವರನ್ನು ಪ್ರೀತಿಸುತ್ತದೆ. ಗ್ರಂಥಾಲಯವಿಲ್ಲದ ಊರು, ಜೀವವಿಲ್ಲದ ದೇಹ. ಪುಸ್ತಕ ನಾಡಿನ ಸಂಸ್ಕೃತಿ ಪ್ರತೀಕ ಎಂದರು. ಪತ್ರಕರ್ತ ಲಕ್ಷ್ಮಣ ಕಿಶೋರಿ, ಕಸಾಪ ತಾಲೂಕು ಅಧ್ಯಕ್ಷ ವಿರೇಶ ಆಸಂಗಿ, ಪ್ರೋ. ಭೀಮಪ್ಪ ನೇಗಿನಾಳ ಮಾತನಾಡಿದರು. 

ಗ್ರಂಥಪಾಲಕ ಜಿ.ಎಚ್.ಪಾಟೀಲ, ಸಹಾಯಕ ಎಂ.ಡಿ.ಭಜಂತ್ರಿ, ಬಸಪ್ಪ ಪರೀಟ, ಶಿವಾನಂದ ಹುಣಶ್ಯಾಳ ಅತಿಥಿಗಳಾಗಿ ಭಾಗವಹಿಸಿದ್ದರು. ಓದುಗರಾದ ಗುರಲಿಂಗಪ್ಪ ಶಿರೋಳ, ಎನ್.ವ್ಹಿ.ಗೋಲಭಾಂವಿ, ಎಂ.ಜಿ.ಬಂಡಿ, ಶಂಕರ ಹಣಗಂಡಿ, ಎಂ.ವ್ಹಿ. ಮಂಟೂರ, ಪಿ.ಎಂ.ನಾಯಕ, ವ್ಹಿ.ಆರ್. ಸಕರ್ಾವಸ್, ಈಶ್ವರ ಹಳ್ಳಿ ಸೇರಿದಂತೆ ಹಲವರು ಇದ್ದರು.