ಲೋಕದರ್ಶನವರದಿ
ಗುಳೇದಗುಡ್ಡ24: ಜಗತ್ತಿಗೆ ಭಾರತ ಪರಿಚಯಿಸಿದ ಅದ್ಭುತ ಕಲೆಗಳಲ್ಲಿ ಯೋಗ ವಿದ್ಯೆಯೂ ಒಂದು. ಯೋಗ ಪರಂಪರೆಗೆ ಭಾರತದಲ್ಲಿ ಪುರಾತನ ಇತಿಹಾಸವಿದೆ. ಯೋಗ ವಿದ್ಯೆ ಅರಿತ ನಮ್ಮ ಋಷಿ ಮುನಿಗಳು ಇಂದ್ರಿಯಗಳನ್ನು ನಿಗ್ರಹಿಸಿ, ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಬೆಳೆಸಿಕೊಂಡಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಹೀಗಾಗಿ ಯೋಗದಿಂದ ಸ್ಮರಣಶಕ್ತಿ ವೃದ್ಧಿಯಾಗುತ್ತದೆಂದು ಜರ್ಮನ್ ದೇಶದ ಯೋಗ ಶಿಕ್ಷಕಿ ಜುತ್ತಾರೀಚೆನ್ ಬ್ಯಾಕ್ ಹೇಳಿದರು.
ಅವರು ಸ್ಥಳೀಯ ನೆಹರು ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯೋಗದಿಂದ ಸ್ಮರಣಶಕ್ತಿ ವೃದ್ಧಿ ಎಂಬ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ವಿದ್ಯೆ ಅತ್ಯಂತ ಅಗತ್ಯವಾಗಿದೆ.
ಅದು ನಿಮ್ಮ ಆತ್ಮಬಲ ಹೆಚ್ಚಿಸಿ ಏಕಾಗ್ರತೆಗೆ ಸಹಾಯಕವಾಗುತ್ತದೆ. ಮನಸ್ಸು ಹತೋಟಿಗೆ ಬರುತ್ತದೆ. ಮಾನಸಿಕ ಚಂಚಲತೆ ನಿವಾರಣೆಯಾಗುತ್ತದೆ ಎಂದರು.
ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಮಕ್ಕಳು ಪರೀಕ್ಷೆ ಎದುರಿಸುವುದು ಒಂದು ಮಹತ್ವದ ಘಟ್ಟ. ಯೋಗದಿಂದ ಸ್ಮರಣ ಶಕ್ತಿ ಹೇಗೆ ವೃದ್ಧಿಗೊಳ್ಳುತ್ತದೆಂದು ಇಲ್ಲಿನ ಶ್ರೀಕೃಷ್ಣ ಯೋಗಾಶ್ರಮದ ಯೋಗಗುರು ಡಾ.ದೀಪಕ್ ಹಡಗಲಿ ಹೇಳಿದರು. ಡಾ.ಲಕ್ಷ್ಮೀ ಹಡಗಲಿ, ಶಾಲೆಯ ಅಧ್ಯಕ್ಷ, ಪತ್ರಕರ್ತ ಮಹಾಂತೇಶ ಗಣಾಚಾರಿ, ಪ್ರಾಂಶುಪಾಲ ಇ.ಸಾಯಿಕೃಷ್ಣ ವೇದಿಕೆ ಮೇಲಿದ್ದರು.