ಲೋಕದರ್ಶನ ವರದಿ
ರಾಯಬಾಗ 15: ಶಿಕ್ಷಣ ಕ್ಷೇತ್ರವೊಂದು ಅಮೂಲ್ಯವಾದ ಕ್ಷೇತ್ರವಾಗಿದ್ದು, ಶಿಕ್ಷಣ ಪಡೆದ ಪ್ರತಿಯೊಬ್ಬರು ಸಮಾಜದಲ್ಲಿ ಗೌರವಿಸಲ್ಪಡುತ್ತಾರೆ ಎಂದು ಹಣಮಾಪೂರ - ಕೌಲಗುಡ್ಡ ಸಿದ್ಧಶ್ರೀ ಆಶ್ರಮದ ಸಿದ್ಧಯೋಗಿ ಅಮರೇಶ್ವರ ಶ್ರೀಗಳು ಹೇಳಿದರು.
ಶನಿವಾರ ತಾಲೂಕಿನ ಹೊಸದಿಗ್ಗೇವಾಡಿ ಗಂಗಪ್ಪ ಮೈಶಾಳೆ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯೆಯನ್ನು ಪಡೆಯಬೇಕಾದರೆ ಅದಕ್ಕೆ ಸತತ ಪ್ರಯತ್ನ ಬೇಕು. ವಿದ್ಯೆಯನ್ನು ಪಡೆದ ವ್ಯಕ್ತಿಯುತನಗೆ ಬೇಕಾದಂತಹ ಸುಂದರಜೀವನ ರೂಪಿಸಿಕೊಳ್ಳಲು ಸಾಧ್ಯವೆಂದರು. ಶಿಕ್ಷಕರು ಮಕ್ಕಳಿಗೆ ಒಳ್ಳೆ ಗುಣಮಟ್ಟದ ಶಿಕ್ಷಣದೊಂದಿಗೆ ಅವರಲ್ಲಿ ಒಳ್ಳೆ ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸಬೇಕೆಂದರು.
ಶಾಸಕ ಡಿ.ಎಮ್.ಐಹೊಳೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದಿನ ಕಾಲದಲ್ಲಿ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಶಿಕ್ಷಣ ಸಂಸ್ಥೆ ನಡೆಸುವುದು ಅತ್ಯಂತ ಕಷ್ಟಕರವಾಗಿದ್ದರೂ, ಅಂತಹ ಕಷ್ಟದಲ್ಲಿ ಯೂಗಂಗಪ್ಪ ಮೈಶಾಳೆ ಶಾಲೆಯು ಇಂದು ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿ ಶಾಲೆ ಒಳ್ಳೆ ಶಿಕ್ಷಣ ನೀಡುತ್ತಿದ್ದು, ಇದು ಇನ್ನು ಹೆಮ್ಮರವಾಗಿ ಬೆಳೆಯಬೇಕೆಂದು ಹಾರೈಸಿದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಭಜಂತ್ರಿ, ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಉಪನಿದೇರ್ಶಕ ಮಹೇಶ ಪೋತದಾರ, ಪ್ರಕಾಶ ಮೈಶಾಳೆ, ಬಿ.ವಾಯ್.ಮಾನೆ, ಚಂದ್ರಶೇಖರ ಅರಭಾವಿ, ಕೆ.ಕೆ.ಮೈಶಾಳೆ, ಮಲ್ಲಪ್ಪ ಮೈಶಾಳೆ, ಗಂಗಪ್ಪ ಸಲಗರೆ, ಕಾಡಯ್ಯ ಹಿರೇಮಠ, ಗಂಗಾಧರ ಮೈಶಾಳೆ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಎಮ್.ಎಚ್. ಪಾಟೀಲ ಸ್ವಾಗತಿಸಿದರು, ಪಿ.ಎಸ್.ಕಾಂಬಳೆ ನಿರೂಪಿಸಿ, ವಂದಿಸಿದರು. ವಿ.ಎಸ್.ಕರಿಹೊಳಿ ವರದಿ ವಾಚಿಸಿದರು.