ಲೋಕದರ್ಶನ ವರದಿ
ಬೆಳಗಾವಿ,2: ವಿದ್ಯಾಥರ್ಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆಯುವುದರ ಜೊತೆಗೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಮಾ1 ರಂದು ಗೋಕಾಕ ತಾಲೂಕಿನ ಬಳೋಬಾಳ ಸರಕಾರಿ ಪ್ರೌಢಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಆಂಗ್ಲ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಮಲ್ಲಿಕಾಜರ್ುನ ಗಾಣಗಿ ಅವರ ಸೇವಾ ನಿವೃತ್ತಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಕ್ಷಕ ಮಲ್ಲಿಕಾಜರ್ುನ ಗಾಣಗಿಯವರನ್ನು ಶಾಲು ಹೊದಿಸಿ ಸತ್ಕರಿಸಿ ಮಾತನಾಡುತ್ತ, 41 ವರ್ಷಗಳ ಶೈಕ್ಷಣಿಕ ಸೇವೆ ಗೋಕಾಕ ಅಲ್ಲದೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಅನುಕೂಲವಾಗಿದೆ. ಶಿಕ್ಷಕರು ಅವರಿಂದ ಅನೇಕ ಕೌಶಲಗಳನ್ನು ಅಳವಡಿಸಿಕೊಂಡಿದ್ದಾರೆ ಅವರ ನಿವೃತ್ತ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.
ಸೇವಾನಿವೃತ್ತರಾದ ಮಲ್ಲಿಕಾಜರ್ುನ ಗಾಣಗಿ ಮಾತನಾಡಿ, ನಾಲ್ಕು ದಶಕಗಳ ಸೇವೆಯಲ್ಲಿ ಅನೇಕ ವಿದ್ಯಾಥರ್ಿಗಳಿಗೆ ಜ್ಞಾನಧಾರೆ ಎರೆದು ಜೀವನ ರೂಪಿಸಿರುವ ನೆಮ್ಮದಿ ನನಗಿದೆ. ಹಳೆಯ ವಿದ್ಯಾಥರ್ಿ ಬಳಗ, ಶಿಕ್ಷಕ ಬಳಗ ಹಿತೈಷಿಗಳ ಸತ್ಕರಿಸಿದ್ದಕ್ಕೆ ಧನ್ಯವಾದ ಅಪರ್ಿಸಿ ತಮ್ಮ ಸೇವಾವಧಿಯ ಗಳಿಗೆಗಳನ್ನು ಮೆಲಕು ಹಾಕಿದರು.
ಇದೇ ಕಾಲಕ್ಕೆ ಎಸ್ಎಸ್ಎಲ್ ಸಿ ವಿದ್ಯಾಥರ್ಿಗಳ ಬೀಳ್ಕೊಡುಗೆ ಹಾಗೂ ವಾಷರ್ಿಕ ಸ್ನೇಹ ಸಮ್ಮೇಳನ, ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.
ಎ.ಎಸ್. ಮಿಜರ್ಿ, ಮುಖ್ಯಾಧ್ಯಾಪಕಿ ಆರ್.ಎಂ ಆನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕುಮಾರಿ ಶಿವನಪ್ಪಗೋಳ ಸ್ವಾಗತಿಸಿದರು. ಜಿ.ಬಿ.ಬಟ್ಲದ ನಿರೂಪಿಸಿದರು.