ಆಧುನಿಕ ಜಗತ್ತಿನಲ್ಲಿ ಆಂಗ್ಲ ಭಾಷೆಯ ಜ್ಞಾನ ಅವಶ್ಯ: ವಡಗೇರಿ

ಹಾವೇರಿ:  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನ ಸವಾಲುಗಳನ್ನು ಯುವ ಜನತೆ ಸಮರ್ಥವಾಗಿ ಎದುರಿಸಲು ಆಂಗ್ಲ ಭಾಷೆಯ ಜ್ಞಾನ ಮತ್ತು ಕಲಿಕೆ ಅತ್ಯಂತ ಅವಶ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿಯವರು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಯಟ್ ಹಾಗೂ ಹಾವೇರಿ ಜಿಲ್ಲಾ ಆಂಗ್ಲ ಭಾಷಾ ಶಿಕ್ಷಕರ ಸಂಘದ ಆಶ್ರಯದಲ್ಲಿ  ನಗರದ ಜಿಲ್ಲಾಗುರುಭವನದಲ್ಲಿ ಗುರುವಾರ ಆಯೋಜಿಸಲಾದ ಆಂಗ್ಲ ಭಾಷಾ ಶಿಕ್ಷಕರ ಸಮ್ಮೇಳನ  ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಸಮರ್ಥವಾಗಿ ಬೋಧನೆಮಾಡಲು ಆಂಗ್ಲ ಭಾಷೆಯ ಕಲಿಸುವ ಶಿಕ್ಷಕರು ವಿಶೇಷವಾದ ನೈಪುಣ್ಯತೆ ಮತ್ತು ಸಮಕಾಲೀನ ತಂತ್ರಜ್ಞಾನದ ಕೌಶಲ್ಯವನ್ನು ತಿಳಿದವರಾಗಿರಬೇಕು ಎಂದು ಹೇಳಿದರು.

ಡಯಟ್ ಪ್ರಾಚಾರ್ಯರಾದ ಜಿ.ಎಂ ಬಸವಲಿಂಗಪ್ಪ ಅವರು  ಮಾತನಾಡಿ, ಧನಾತ್ಮಕ ಚಿಂತನೆಗಳನ್ನು ಹೊಂದಿದ ಶಿಕ್ಷಕರು ಮಾತ್ರ ಮಕ್ಕಳಲ್ಲಿ ಅಂತಹ ಆಲೋಚನೆಗಳನ್ನು ಹುಟ್ಟುಹಾಕಲು ಸಾಧ್ಯ, ಮಕ್ಕಳಲ್ಲಿ ಕೇವಲ ಅಂಕಗಳಿಸುವ ಆಲೋಚನೆಗಳನ್ನು ಮಾತ್ರ ಹುಟ್ಟುಹಾಕದೇ ಸಾಮಾಜಿಕ ಜವಾಬ್ದಾರಿ ಗುಣಗಳನ್ನು ಬೆಳೆಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಂಗ್ಲ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಫ್. ಬಿ. ಮರಡೂರ  ಹಾಗೂ ಆಂಗ್ಲ ಭಾಷಾ ವಿಷಯ ಪರಿವೀಕ್ಷಕರಾದ ಡಿ.ಎಸ್. ಬಸಮ್ಮನವರ ಮಾತನಾಡಿದರು. ಶಿಕ್ಷಣಾಧಿಕಾರಿಗಳಾದ  ಸುರೇಶ ಹುಗ್ಗಿ, ಸುನೀತಾ ಕೆ. ಎಂ, ಆರ್.ವ್ಹಿ. ಚಿನ್ನಿಕಟ್ಟಿ,   ಆರ್ ಮಂಜಪ್ಪ , ಈರಪ್ಪ ಲಮಾಣಿ,  ಆನಂದ ಉಮರ್ಿ,  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಭಗವಂತಗೌಡರ, ನಾಗರಾಜ ಇಚ್ಚಂಗಿ, ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷರುಗಳಾದ ಎಸ್.ಸಿ ಕಲ್ಮನಿ, ಮಲ್ಲಿಕಾಜರ್ುನ ಶಾಂತಗಿರಿ ಹಾಗೂ ಹನುಮಂತಪ್ಪ ಜಿ ಇತರರು ಉಪಸ್ಥಿತರಿದ್ದರು. 

ಎಸ್ ಆರ್ ತೆವರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು  ಶಂಭು ವಡೆಯರ, ಪದ್ಮಾವತಿ ಕಲ್ಲು ಹಾಗೂ ಪುಷ್ಪಾ ಬಗಾಡೆ ನಿರೂಪಿಸಿದರು. ಎ.ಸಿ ಸಂಕಣ್ಣನವರ ವಂದಿಸಿದರು. ಜಿಲ್ಲೆಯ 500 ಕ್ಕೂ ಹೆಚ್ಚು ಆಂಗ್ಲ ಭಾಷಾ ಶಿಕ್ಷಕರು ಪಾಲ್ಗೊಂಡಿದ್ದರು.