ಹಾವೇರಿ, 28: ಜಾಗತೀಕರಣದ ಪ್ರಭಾವದಿಂದಾಗಿ ವಿಶ್ವವೇ ಅಂಗೈಯಲ್ಲಿ ಸಿಗುವಂತಾಗಿದ್ದು, ಆಧುನಿಕ ಯುಗದ ಯಾಂತ್ರಿಕ ಬದುಕಿನಲ್ಲಿ ಇಂಗ್ಲೀಷ್ ಭಾಷೆಯು ಜಾಗತಿಕ ಭಾಷೆಯಾಗಿ ಪರಿವರ್ತನೆ ಹೊಂದಿದೆ ಎಂದು ಮಹಾರಾಷ್ಟ್ರ ಕೊಲ್ಲಾಪುರದ ರಾಜಾರಾಮ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ|| ವಿಶ್ವನಾಥ ಬೀಟೆ ಹೇಳಿದರು.
ಅವರು ನಗರದ ಕೆ.ಎಲ್.ಇ. ಸಂಸ್ಥೆಯ ಜಿ. ಎಚ್. ಕಾಲೇಜಿನಲ್ಲಿ ಆಯೋಜಿಸಿದ್ದ "ಡಿಜಿಟಲ್ ಯುಗದಲ್ಲಿ ಇಂಗ್ಲೀಷ್ ಭಾಷೆಯ ಪಾತ್ರ ಎಂಬ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಇಂಗ್ಲೀಷ್ ಕೇವಲ ಕಲಿಕೆಗೆ ಅಷ್ಟೇ ಸೀಮಿತವಾಗದೇ ವಿಶ್ವವ್ಯಾಪಿ ವ್ಯವಹಾರಿ ಭಾಷೆಯಾಗಿದೆ. ತಾಂತ್ರಿಕ ಮತ್ತು ಯಾಂತ್ರಿಕ ಬದುಕಿನಲ್ಲಿ ಇಂಗ್ಲೀಷ್ ಮಹತ್ತರ ಪಾತ್ರ ನಿರ್ವಹಿಸುತ್ತಿದೆ.
ಇಂಗ್ಲೀಷ್ ಭಾಷಾ ಪ್ರಾಬಲ್ಯ ಇಂದು ಎಲ್ಲೆಡೆ ಪಸರಿಸಿದ್ದು, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮೊದಲಾದ ಅಂಶಗಳಿಗೆ ಪೂರಕವಾಗಿದೆ.
ಕಂಪ್ಯೂಟರ್ ಬಳಕೆಯಲ್ಲಿ ಇಂಗ್ಲೀಷ್ ಭಾಷೆಯು ತನ್ನದೆ ವ್ಯಾಪ್ತಿ ವಿಸ್ತರಿಸಿದ್ದು, ಬಹುಮಟ್ಟಿಗೆ ಸರ್ವರೂ ಇಂಗ್ಲೀಷ್ ಭಾಷಾ ಜ್ಞಾನ ಹೊಂದಬೇಕಿರುವುದು ಅನಿವಾರ್ಯವಾಗಿದೆ ಎಂದರು.
ಉದ್ಘಾಟಿಸಿದ ಕೆ.ಎಲ್.ಇ. ಉಪಾಧ್ಯಕ್ಷ ಎಮ್. ಸಿ. ಕೊಳ್ಳಿ ಮಾತನಾಡಿ ಇಂಗ್ಲೀಷ್ ಭಾಷೆಯು 26 ಅಕ್ಷರಗಳ ಸಂಗ್ರಹ ಕೂಟವಾಗಿದ್ದು, ಭಾಷೆ ಬಳಕೆ ಮತ್ತು ಉಪಯೋಗ ಬಹಳಷ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾಯರ್ಾಧ್ಯಕ್ಷ ಪಿ. ಡಿ. ಶಿರೂರ, ಪ್ರೊ. ಪಿ. ಎಸ್. ಮಂಟೂರೆ, ಸ್ಥಾನಿಕ ಮಂಡಳಿ ಸದಸ್ಯರಾದ ಸಿ. ಬಿ. ಹಿರೇಮಠ, ಬಸವರಾಜ ಮಾಸೂರ, ಎಸ್. ಜೆ. ಹೆರೂರ, ಎಸ್. ಜೆ. ಅರಣಿ, ಎಸ್. ಎಮ್. ಹುರಳಿಕುಪ್ಪಿ, ಪ್ರೊ. ಶಿವಯೋಗಿ ಅಂಗಡಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರೊ. ನಯನಾ ಪ್ರಾಥರ್ಿಸಿದರು. ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಸ್ವಾಗತಿಸಿದರು. ಪ್ರೊ. ಗಿರೀಶ ಹೊಸಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷಯ ದಳವಾಯಿ, ನಯನಾ ನಿರೂಪಿಸಿದರು. ಪ್ರೊ. ನಿಂಗಪ್ಪ ಎ. ಗಾಣಗಿ ವಂದಿಸಿದರು.