ಬಮರ್ಿಂಗ್ ಹ್ಯಾಮ್: ಪ್ರವಾಸಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸುವ ಮೂಲಕ 1000ದ ಪಂದ್ಯ ಗೆದ್ದ ಸಾಧನೆ ಮಾಡಿದೆ.
ಎಡ್ಜ್ಬಾಸ್ಟನ್ ಮೈದಾನದಲ್ಲಿ ಪ್ರವಾಸಿ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ನಾಯಕ ಜೋ ರೂಟ್(80) ಹಾಗೂ ಜಾನಿ ಬೌರ್ಸ್ಟೋವ್ (70) ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಇಂಗ್ಲೆಂಡ್ 287 ರನ್ ಗಳಿಗೆ ಆಲೌಟ್ ಆಗಿತ್ತು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 287 ರನ್ ಗಳಿಗೆ ಆಲೌಟ್ ಆಗಿತ್ತು. 13 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದ ಇಂಗ್ಲೆಂಡ್ ತಂಡವನ್ನು 180 ರನ್ ಗಳಿಗೆ ಆಲೌಟ್ ಮಾಡಲಾಗಿತ್ತು. ಇದರೊಂದಿಗೆ ಟೀಂ ಇಂಡಿಯಾ ಗೆಲ್ಲಲು 194 ರನ್ ಗಳ ಗುರಿ ಬೆನ್ನಟ್ಟಬೇಕಿತ್ತು. 194 ರನ್ ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀ ಇಂಡಿಯಾ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದಾಗಿ 162 ರನ್ ಗಳಿಗೆ ಆಲೌಟ್ ಆಗಿದ್ದು 31 ರನ್ ಗಳಿಂದ ಸೋಲು ಕಂಡಿದೆ
(ಬಾಕ್ಸ)ಕೈ ಚೆಲ್ಲಿದ ಕ್ಯಾಚ್ಗಳು ದುಬಾರಿಯಾದವು: ಆ್ಯಂಡರ್ಸನ್ : ಲಂಡನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಆಟವನ್ನೇನೂ ಆಡಲಿಲ್ಲ, ಅವರು ಅಜೇಯ ಆಟಗಾರ ಅಲ್ಲ. ನಾವು ಕೈ ಚೆಲ್ಲಿದ ಕ್ಯಾಚ್ ಗಳು ದುಬಾರಿಯಾಯಿತು ಎಂದು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಹೇಳಿದ್ದಾರೆ.
ಬಮರ್ಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡಕ್ಕೆ ಪದೇ ಪದೇ ಕಾಡುತ್ತಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ವೇಗಿಗಳನ್ನು ಕಾಡಿದ್ದ ಕೊಹ್ಲಿ ಇದೀಗ ಎರಡನೇ ಇನ್ನಿಂಗ್ಸ್ ನಲ್ಲೂ ಇಂಗ್ಲೆಂಡ್ ಗೆಲುವಿಗೆ ತಡೆಯಾಗಿ ನಿಂತಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿನದಾಟದ ಅಂತ್ಯದ ಬಳಿಕ ಮಾತನಾಡಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಆಟವನ್ನೇನೂ ಆಡಲಿಲ್ಲ, ಸ್ಲಿಪ್ ಕ್ಷೇತ್ರರಕ್ಷಕರು ಕ್ಯಾಚ್ ಕೈಚೆಲ್ಲಿದ್ದು ತಮ್ಮ ತಂಡಕ್ಕೆ ಮುಳುವಾಗಿದೆ ಎಂದು ಹೇಳಿದ್ದಾರೆ. '21ರನ್ ಗಳಿಸಿದ್ದ ವೇಳೆ ಕೊಹ್ಲಿ ಕ್ಯಾಚ್ ಅನ್ನು ಬಿಟ್ಟಿದ್ದು ಪ್ರಮಾದವಾಯಿತು. ಅವರು ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ರೀತಿಯ ಅವಕಾಶಗಳನ್ನು ಅವರು ಬಳಸಿಕೊಳ್ಳಲಿದ್ದಾರೆ. ಕ್ಯಾಚ್ ಪಡೆದಿದ್ದರೆ, ನಾವೀಗ ಇನ್ನಷ್ಟು ಉತ್ತಮ ಪರಿಸ್ಥಿತಿಯಲ್ಲಿ ಇರುತ್ತಿದ್ದೆವು. ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಅಜೇಯರಲ್ಲ, ಅವರ ವಿಕೆಟ್ ಅನ್ನು ಪಡೆಯಬಹುದಾಗಿದೆ' ಎಂದು ಆ್ಯಂಡರ್ಸನ್ ತಿಳಿಸಿದ್ದಾರೆ.
ಅಂತೆಯೇ 'ಕೊಹ್ಲಿಗೆ ಬೌಲಿಂಗ್ ಮಾಡಿದ ರೀತಿಯ ಬಗ್ಗೆ ನಮಗೆ ಸಂತಸವಿದೆ. ಅನೇಕ ಬಾರಿ ಕೊಹ್ಲಿ ಬ್ಯಾಟಿನ ಅಂಚಿಗೆ ಚೆಂಡು ತಗುಲಿ ಸ್ಲಿಪ್ ಕ್ಷೇತ್ರರಕ್ಷಕರಿಗೆ ಅವಕಾಶ ಸಿಗುವಂತೆ ಮಾಡಿದ್ದೇವೆ. ಎರಡನೇ ದಿನ ಅವರನ್ನು ಔಟ್ ಮಾಡುವ ಅವಕಾಶವನ್ನು ಸೃಷ್ಟಿಸಿದ್ದೆ ಎಂದು ಆ್ಯಂಡರ್ಸನ್ ಹೇಳಿದ್ದಾರೆ.
ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬ್ಯಾಟ್ ಮಾಡುತ್ತಿದ್ದ ವೇಳೆ, 21 ಹಾಗು 51ರನ್ಗಳಿಸಿದ್ದ ಸಂದರ್ಭ ಆಂಡರ್ಸನ್ ಬೌಲಿಂಗ್ನಲ್ಲಿ ಎರಡು ಬಾರಿ ಜೀವದಾನ ಪಡೆದಿದ್ದರು. ಎರಡೂ ನಿದರ್ಶನಗಳಲ್ಲಿ ಸ್ಲಿಪ್ ಕ್ಷೇತ್ರರಕ್ಷಕ ಡೇವಿಡ್ ಮಲಾನ್ ಪ್ರಮಾದವೆಸಗಿದ್ದರು. ಬಲಿಕ ಜೀವದಾನದ ಲಾಭ ಪಡೆದ ಕೊಹ್ಲಿ, 149 ರನ್ಗಳಿಸಿದ್ದಲ್ಲದೇ ತಂಡವನ್ನು ಸುರಕ್ಷಿತ ಮೊತ್ತದತ್ತ ಕೊಂಡೊಯ್ದರು.
ಎರಡನೇ ಇನಿಂಗ್ಸ್ ನಲ್ಲಿ ತಂಡದ ಚೇಸಿಂಗ್ ನಲ್ಲಿ ಆಧಾರವಾಗಿ ನಿಂತಿರುವ ಕೊಹ್ಲಿ 43ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಗೆಲ್ಲಲು 194ರನ್ಗಳ ಗುರಿ ಪಡೆದಿರುವ ಭಾರತ, ಸದ್ಯ ಐದು ವಿಕೆಟ್ ಕಳೆದುಕೊಂಡು 110ರನ್ ಗಳಿಸಿದ್ದು ಇನ್ನೂ 84ರನ್ಗಳ ಅವಶ್ಯಕತೆ ಹೊಂದಿದೆ. ಕೊಹ್ಲಿ ಮತ್ತು ದಿನೇಶ್ ಕಾತರ್ಿಕ್ 4ನೇ ದಿನದಾಟ
ಆರಂಭಿಸಲಿದ್ದಾರೆ.