ನವದೆಹಲಿ, ಜೂನ್ 29: ಇಂಗ್ಲೆಂಡ್‌ನ ಅಗ್ರ ಬ್ಯಾಟಿಂಗ್ ಕ್ರಮಾಂಕವು ತುಂಬಾ ದುರ್ಬಲವಾಗಿದ್ದು, ಆತಿಥೇಯರ ಮೇಲೆ ಒತ್ತಡ ಹೇರಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಅಜರ್ ಅಲಿ ಅಭಿಪ್ರಾಯಪಟ್ಟಿದ್ದಾರೆ.“ಅಲಿಸ್ಟರ್ ಕುಕ್ 2018 ರಲ್ಲಿ ನಿವೃತ್ತರಾದಾಗಿನಿಂದ, ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟಿಂಗ್ ತುಂಬಾ ದುರ್ಬಲವಾಗಿದೆ, ಅದರ ಲಾಭವನ್ನು ಪಡೆದುಕೊಂಡು ನಾವು ಅವರ ಮೇಲೆ ಒತ್ತಡ ಹೇರಬಹುದು. ಸೆಪ್ಟೆಂಬರ್ 2018 ರಲ್ಲಿ ಕುಕ್ ಅವರ ಅಂತಿಮ ಟೆಸ್ಟ್ ನಂತರ ಇಂಗ್ಲೆಂಡ್ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳನ್ನು ಸ್ಥಿರಗೊಳಿಸಲು ವಿಫಲವಾಗಿದೆ ಮತ್ತು ಆಗಾಗ್ಗೆ ಬದಲಾವಣೆಗಳನ್ನು ಮಾಡಿದೆ. ಅಂದಿನಿಂದ, ಇಂಗ್ಲೆಂಡ್ 18 ಟೆಸ್ಟ್ ಪಂದ್ಯಗಳಲ್ಲಿ ಆರು ವಿಭಿನ್ನ ಜೋಡಿ ಆರಂಭಿಕ ಆಟಗಾರರನ್ನು ಪ್ರಯತ್ನಿಸಿದೆ. ಯಾವುದೇ ಆರಂಭಿಕ ಜೋಡಿ ಒಂಬತ್ತು ಬಾರಿ ಇನ್ನಿಂಗ್ಸ್ ಪ್ರಾರಂಭಿಸಿಲ್ಲ” ಎಂದು ಪಾಕಿಸ್ತಾನದ ನಾಯಕ ತಿಳಿಸಿದ್ದಾರೆ.
"ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿ ತುಂಬಾ ಪ್ರಬಲವಾಗಿದೆ ಮತ್ತು ಅವರು ತವರಿನಲಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಜೋಫ್ರಾ ಆರ್ಚರ್ ಹೊರತುಪಡಿಸಿ, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಕ್ರಿಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್ ಸೇರಿದಂತೆ ಅವರ ಎಲ್ಲ ಬೌಲರ್‌ಗಳನ್ನು ನಾವು ಎದುರಿಸಿದ್ದೇವೆ” ಎಂದು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನದ ದಾಖಲೆ ತುಂಬಾ ಉತ್ತಮವಾಗಿದೆ. ಪಾಕಿಸ್ತಾನವು ಎರಡು ಸರಣಿ ಡ್ರಾಗಳನ್ನು ಡ್ರಾ ಮಾಡಿಕೊಂಡಿದೆ.