ಕೊಪ್ಪಳ 13: ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯತ್ ಸದಸ್ಯ ನಿಂಗಪ್ಪ ಯತ್ನಟ್ಟಿ ರವರು ಹೇಳಿದರು
ಬೆಂಗಳೂರು ಬಾಲ ಭವನ ಸೊಸೈಟಿ, ಕೊಪ್ಪಳ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಜಿಲ್ಲಾ ಬಾಲ ಭವನ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಿರೇಸಿಂದೋಗಿಯ ಎಲ್ಲಾ ಸರಕಾರಿ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ (ಸೆ.09) ಹಿರೆಸಿಂದೋಗಿಯ ಸರಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾರಾಂತ್ಯ ಚಟುವಟಿಕೆಗಳ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಬಾಲ ಭವನ ಸಮಿತಿಯಿಂದ ಶಾಲಾ ಮಕ್ಕಳಿಗೆ ವಿವಿಧ ಚಟುವಟಿಕೆಗಳಾದ ಚಿತ್ರಕಲೆ, ಕರಾಟೆ, ಯೋಗ, ರಂಗಚಟುವಟಿಕೆ, ವಿಜ್ಞಾನ, ಜೇಡಿ ಮಣ್ಣಿನ ಕಲೆ, ಸಮೂಹನೃತ್ಯ ಮತ್ತು ಸಂಗೀತ ಇತ್ಯಾದಿ ಚಟುವಟಿಕೆಗಳ ತರಬೇತಿಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ 50 ದಿನಗಳ ಕಾಲ ಪ್ರತಿ ಶನಿವಾರ ಹಾಗೂ ಭಾನುವಾರ ಶಾಲಾ ಅವಧಿ ನಂತರ ಮಕ್ಕಳ ಮನರಂಜನೆಗಾಗಿ, ಕ್ರಿಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಿರುತ್ತಾರೆ ಇದರ ಸದುಪಯೋಗವನ್ನು ಹೆಚ್ಚು ಮಕ್ಕಳು ಪಡೆಯುವಂತಾಗಬೇಕು. ಹಾಗೂ ಮಕ್ಕಳು ಮೊಬೈಲ್ನ್ನು ಒಳ್ಳೆಯದಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಾವು ಕಲಿಯುವಾಗ ಸೌಲಭ್ಯಗಳು ತುಂಬಾ ಕಡಿಮೆ ಇದ್ದವು ಇಂದು ಸರಕಾರದ ಸೌಲಭ್ಯಗಳು ಹೆಚ್ಚು-ಹೆಚ್ಚು ಇರುತ್ತವೆ ಇವುಗಳನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೆಶಕ ಈರಣ್ಣಾ ಪಂಚಾಳ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಬಾಲ ಭವನ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳಾದ ಮಾತೃಪೂರ್ಣ, ಪ್ರಧಾನ ಮಂತ್ರಿ ಮಾತೃವಂದನಾ ಮತ್ತು ಮಾತೋಶ್ರೀ ಕಾರ್ಯಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಬಾಲ್ಯ ವಿವಾಹ ತಡೆಗಟ್ಟುವುದರ ಬಗ್ಗೆ ಮಕ್ಕಳು ಮತ್ತು ಶಿಕ್ಷಕರ ಪಾತ್ರ ತುಂಬಾ ಇದೆ ಇದರ ಪರಿಣಾಮವಾಗಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಇಂದು ಹೆಚ್ಚಾಗುತ್ತಿದೆ ಇದನ್ನು ತಡೆಗಟ್ಟಲು ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳುತ್ತಾ ಶಾಲಾ ಮಕ್ಕಳಿಗೆ ಶೌಚಾಲಯ ಬಳಕೆಯ ಮಹತ್ವದ ಬಗ್ಗೆ ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಜಿಲ್ಲಾ ವಿಕಲಚೇತನ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಡಿ.ಎಮ್.ಮೂಲಿಮನಿ ಮಾತನಾಡಿ ವಿಕಲ ಚೇತನರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಸರಕಾರಿ ಪ್ರೌಢ ಶಾಲೆ ಹಿರೆಸಿಂದೋಗಿ ಶ್ರೀನಿವಾಸ ಪಾಟೀಲ್, ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ಅರಕೇರಿ ಹಾಗೂ ದೀಪಾ ಅರಕೇರಿ, ಹಿರೇಸಿಂದೋಗಿ ಸಿಆರ್ಸಿ ಮಲ್ಲಿಕಾಜರ್ುನ್ ಯತ್ನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಇಲಾಖೆ ಮತ್ತು ಹಿರೇಸಿಂದೋಗಿಯ ಸರಕಾರಿ ಶಾಲೆಗಳ ಎಲ್ಲಾ ಮುಖ್ಯೋಪಾಧ್ಯಾಯರು, ಜಿಲ್ಲಾ ಬಾಲ ಭವನದ ಕಾರ್ಯಕ್ರಮದ ಸಂಯೋಜಕ ಮೆಹಬೂಬಸಾಬ ಇಲಾಹಿ, ಶಿಕ್ಷಕರು ಹಾಗೂ ಮಕ್ಕಳು, ಗ್ರಾಮದ ಹಿರಿಯ ನಾಗರಿಕರು ಭಾಗವಹಿಸಿದ್ದರು.