ನವದೆಹಲಿ, ಆ 27 ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್, ಬಹ್ರೇನ್ ಮತ್ತು ಯುಎಇ ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಮಂಗಳವಾರ ನವದೆಹಲಿಗೆ ಮರಳಿದ್ದಾರೆ. ಫ್ರಾನ್ಸ್ನ ಬಿಯರಿಟ್ಜ್ನಲ್ಲಿ ಇತ್ತೀಚೆಗೆ ನಡೆದ ಜಿ 7 ಶೃಂಗಸಭೆಯಲ್ಲಿ ಅವರು ಡಿಜಿಟಲ್ ರೂಪಾಂತರ ಮತ್ತು ಹವಾಮಾನ ಬದಲಾವಣೆ ಕುರಿತ ಸಮಾವೇಶದಲ್ಲಿ ಭಾಗವಹಿಸಿದ್ದರು. ಇದೇ 22 ರಂದು ಅವರು ಪ್ಯಾರಿಸ್ ತಲುಪಿ ಅಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಡುವೆ ಮಾತುಕತೆ ನಡೆಸಿ, ನಂತರ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಇದರ ಬೆನ್ನಲ್ಲೇ, ಪ್ರಧಾನ ಮಂತ್ರಿ ಆ. 23 ರಂದು ಯುಎಇಗೆ ತೆರಳಿ ಅಬುಧಾಬಿಯ ರಾಜ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಂದ 'ಆರ್ಡರ್ ಆಫ್ ಜಾಯೆದ್' ಪ್ರಶಸ್ತಿ ಸ್ವೀಕರಿಸಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ನಂತರ ಮೋದಿ ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತದಲ್ಲಿ ಬಹ್ರೇನ್ ತಲುಪಿದ ಅವರಿಗೆ 25 ರಂದು ಬಹ್ರೇನ್ ರಾಜಕುಮಾರ ಮೋದಿ ಅವರಿಗೆ 'ದಿ ಕಿಂಗ್ ಹಮದ್ ಆರ್ಡರ್ ಆಫ್ ದಿ ನವೋದಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ಜಿ 7 ಶೃಂಗಸಭೆಯಲ್ಲಿ ಮೋದಿ ಮಾತನಾಡಿ, ಅಲ್ಲಿ ಜೀವವೈವಿಧ್ಯತೆ, ಹವಾಮಾನ ಬದಲಾವಣೆ, ಜಲ ಮಾಲಿನ್ಯ ನಿಯಂತ್ರಣಕ್ಕೆ ಭಾರತದ ಕೊಡುಗೆಯನ್ನು ಒತ್ತಿ ಹೇಳಿದ್ದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.