ಯುವಕರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಪ್ರೋತ್ಸಾಹ: ಕುಲಕಣರ್ಿ

ವಾಷರ್ಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಪಂದ್ಯಾವಳಿಗೆ ಚಾಲನೆ ನೀಡುತ್ತಿರುವ ಗಣ್ಯರು.

    ಅಥಣಿ 11: ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗಲು ಕ್ರೀಡೆಗಳು ತುಂಬಾ ಸಹಾಯಕವಾಗಿವೆ. ಪ್ರತಿಯೊಂದು ಆಟವು ತನ್ನದೇಯಾದಂತಹ ವೈಶಿಷ್ಟ್ಯತೆಯನ್ನು ಹೊಂದಿದ್ದು ಭಾಗವಹಿಸಿದಂತಹ ಪ್ರತಿಯೊಬ್ಬ ಆಟಗಾರನೂ ಕೂಡ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಟದಲ್ಲಿ ಭಾಗವಹಿಸಬೇಕು. ಅಲ್ಲಿ ಉಂಟಾಗುವ ಸೋಲು ಗೆಲವು ಮುಖ್ಯವಲ್ಲ. ನಿರಂತರವಾಗಿ ಆಟದಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಒಟ್ಟಿನಲ್ಲಿ ಸ್ವಚ್ಛಂದ ಮನಸ್ಸಿನ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಪ್ರಯತ್ನ ಪಟ್ಟು ಸಾಧನೆ ಮಾಡಿದರೆ ಅಂತವರಿಗೆ ನಮ್ಮ ಪ್ರೋತ್ಸಾಹ ನಿರಂತರವಾಗಿರುತ್ತದೆಂದು ಕಾಲೇಜಿನ ಉಪಪ್ರಾಚಾರ್ಯ ಪ್ರೋ ಗಿರೀಶ ಕುಲಕಣರ್ಿ ಹೇಳಿದರು.

       ಅಥಣಿಯ ಸ್ಥಳೀಯ ಜೆ.ಇ.ಶಿಕ್ಷಣ ಸಂಸ್ಥೆಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕೆ.ಎ.ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಾಷರ್ಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಒಳ್ಳೆಯ ಗುಣಗಳು, ತಾಳ್ಮೆ ಇರಬೇಕೆಂದು ಕೂಡ ಅವರು ಹೇಳಿದರು. 

         ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರೋ ಡಾ ಪ್ರಶಾಂತ ಮಗದುಮ ಮಾತನಾಡಿ ನಮ್ಮ ಕಾಲೇಜಿನಲ್ಲಿ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳು, ಅಭಿಮಾನಿಗಳು ಮತ್ತು ಪ್ರೋತ್ಸಾಹಕರಿದ್ದಾರೆ. ಇದು ಎಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಯುವಕ ಯುವತಿಯರಿಗೆ ನಮ್ಮ ಸಹಕಾರ ನಿರಂತರವಾಗಿರುತ್ತದೆ. ಕ್ರೀಡಾಪಟುಗಳು ಸತತ ಪ್ರಯತ್ನ ಪಟ್ಟು ಸಾಧನೆ ಮಾಡಬೇಕೆಂದು ಅವರು ಹೇಳಿದರು.

  ದೈಹಿಕ ನಿದರ್ೇಶಕ ಪ್ರಕಾಶ ನರಗಟ್ಟಿ, ಪ್ರೋ ಬಾಳೇಶ ಬಮನಾಳೆ, ಪ್ರೋ ವಿಶಾಲ ದೇಶಪಾಂಡೆ, ಪ್ರೋ ಸಂತೋಷ ಬಡಕಂಬಿ, ಪ್ರೋ ಎಚ್.ಜಿ.ಗಡಕರಿ, ಪ್ರೋ ರಾಮಚಂದ್ರ ನಾಯಿಕ, ಪ್ರೋ ಗೀತಾ ಕುಲಕಣರ್ಿ, ಪ್ರೋ ಎಮ್.ಜಿ.ನಾಯಿಕ, ಪ್ರೋ ರಿಯಾಜ ಪಠಾಣ, ಪ್ರೊ ಸುರೇಶ ಜಾಧವ, ಪ್ರೋ ಭಾಗ್ಯಶ್ರೀ ಗುಂಡಾ, ಪ್ರೋ ವಿ.ಪಿ.ಜಾಲಿಹಾಳ, ಪ್ರೋ ಅರ್ಚನಾ ಪೂಜಾರಿ, ಪ್ರೋ ಎಸ್.ಆರ್.ಪಾಟೀಲ, ಪ್ರೋ ಮಹಾಂತೇಶ ಜನವಾಡ, ಪ್ರೋ ಮಣಜುನಾಥ ಸರಿಕರ, ಪ್ರೋ ಆನಂದ ಹವಾಯಿ, ಪ್ರೋ ಡಿ.ಪಿ.ಕರಡಿ, ಪ್ರೋ ಜಿ.ಆಯ್.ದಿಕ್ಷೀತ, ಪ್ರೊ ಮಹಾದೇವ ಸಂಕಪಾಳ, ಪ್ರೋ ನಿಲೇಶ ಝಾರೆ, ಪ್ರೋ ಪ್ರಶಾಂತ ಚನ್ನರೆಡ್ಡಿ, ಪ್ರೋ ಬಸವರಾಜ ಯಳ್ಳೂರ, ಪ್ರೋ ಎಮ್.ಡಿ.ಹಜಾರೆ, ಪ್ರೋ ರಾಕೇಶ ಚೌಗಲಾ, ಪ್ರೋ ಸನಾಉಲ್ಲಾ , ಪ್ರೋ ಆರ್.ಆಯ್.ಜಂಬಗಿ, ಪ್ರೋ ಗಜಾನನ ಕೋರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.