ಮಹಾಲಿಂಗಪುರ17: ಲೈಟಾಗಿ ಲವ್ವಾಗಿದೆ ಕನ್ನಡ ಚಲನಚಿತ್ರವು ಉತ್ತರ ಕನರ್ಾಟಕದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಕೂಡಿ ಮಾಡಿದ ಉತ್ತಮ ಪ್ರಯತ್ನವಾಗಿದೆ.ನಮ್ಮ ಪ್ರಯತ್ನಕ್ಕೆ ಚಿತ್ರವನ್ನು ಪ್ರತಿಯೊಬ್ಬರು ಕುಟುಂಬ ಸಮೇತರಾಗಿ ನೋಡಿ ಪ್ರೋತ್ಸಾಹಿಸಬೇಕು ಎಂದು ಚಿತ್ರದ ನಾಯಕ ನಟ ಜೀ ವಾಹಿನಿಯ ಸರಿಗಮಪ ಚಾಂಪಿಯನ್ ಚನ್ನಪ್ಪ ಹುದ್ದಾರ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡರು.
ಶುಕ್ರವಾರ ತಮ್ಮ ಅಭಿನಯದ ಪ್ರಥಮ ಚಿತ್ರ ಪ್ರಚಾರ ನಿಮಿತ್ಯ ಪಟ್ಟಣದ ಅಷ್ಟಗಿ ಮತ್ತು ಬನಹಟ್ಟಿಯ ವೈಭವ ಚಿತ್ರಮಂದಿರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರದರ್ಶಕರಿಂದ ನಾಯಕ ನಟ ಚನ್ನಪ್ಪ ಹುದ್ದಾರ ಸನ್ಮಾನ ಸ್ವೀಕರಿಸಿ ಅಭಿಮಾನಿಗಳೊಂದಿಗೆ ಮಾತನಾಡಿದ ಅವರು ಈ ಚಿತ್ರದಲ್ಲಿ ಹಳ್ಳಿಯೊಂದರಲ್ಲಿ ನಡೆಯುವ ಪ್ರೇಮಕಥೆ, ಅಣ್ಣತಂಗಿ ಪ್ರೀತಿ, ಗೆಳೆತನದ ಮಹತ್ವ, ಸಾಮಾಜಿಕ ಜಾಲತಾಣಗಳ ಸದ್ಭಳಕೆ ದುರ್ಬಳಕೆಯ ಸಂದೇಶವುಳ್ಳ ಚಿತ್ರವಾಗಿದೆ.ಯಾವುದೇ ಸಂಕೋಚವಿಲ್ಲದೆ ಪರಿವಾರ ಸಮೇತರಾಗಿ ನೋಡಬಹುದಾದ ಸುಂದರ ಚಿತ್ರವಾಗಿದ್ದು ಅಭಿಮಾನಿಗಳು ಚಿತ್ರವನ್ನು ನೋಡಿ ಆಶೀರ್ವದಿಸಿ ಎಂದು ವಿನಂತಿಸಿದರು.
ಉಕ ಜನತೆಗೆ ಚಿರಋಣಿ : ನಾನು ಸರಿಗಮಪ ಸ್ಪಧರ್ೆಯಲ್ಲಿ ಭಾಗವಹಿಸಿದ್ದಾಗ ನನಗೆ ಅಪಾರ ಪ್ರಮಾಣದ ಬೆಂಬಲ ವ್ಯಕ್ತಪಡಿಸಿ ಗೆಲ್ಲಿಸಿದ ಉತ್ತರ ಕನರ್ಾಟಕದ ಜನತೆಗೆ ನಾನು ಸದಾಚಿರಋಣಿ. ನನ್ನ ಪೂರ್ವ ಕನಸ್ಸಿನಂತೆ ಸಣ್ಣ ಪ್ರಯತ್ನವಾದ ಲೈಟಾಗಿ ಲವ್ವಾಗಿದೆ ಚಿತ್ರಕ್ಕೆ ಗೋಕಾಕ, ಮಹಾಲಿಂಗಪುರ, ಬನಹಟ್ಟಿ ಅಲ್ಲದೆ ಕನರ್ಾಟಕದ ಉತ್ತರ ಭಾಗದೆಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.ನನ್ನ ಗಾಯನಕ್ಕೆ ಬೆಂಬಲಿಸಿದಂತೆ ಈ ಚಿತ್ರಕ್ಕೂ ಹಾಗೂ ಮುಂಬರುವ ಮಾಲರ್ಾಮಿ ಮತ್ತು ಕಣ್ಮಣಿ ಎಂಬ ಎರಡು ಚಿತ್ರಗಳನ್ನೂ ತಾವು ಪ್ರೋತ್ಸಾಹಿಸಿ ಈ ಭಾಗದ ಕಲಾವಿದರು ಬೆಳೆಯಲು ಸಹಕರಿಸಿರಿ ಎಂದರು.