ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹಿಸಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ: ತಹಶೀಲ್ದಾರ ಹೆಗನ್ನವರ

Encourage mass marriages and curb extravagance: Tehsildar Hegannavara

ಯರಗಟ್ಟಿ 02: ಮೂಢನಂಬಿಕೆ ಬಿಡಬೇಕು ದುಂದುವೆಚ್ಚಕ್ಕೆ ಕಡಿವಾಣಹಾಕಿ ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು. ಅಬ್ಬರ ಮದುವೆಗಳ ಬದಲು, ಆಡಂಬರವಿಲ್ಲದ ಸರಳ ಸಾಮೂಹಿಕ ವಿವಾಹಗಳಿಗೆ ಇಂದು ಮಹತ್ವ ನೀಡಬೇಕಿದೆ ಎಂದು ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೇಗನ್ನವರ ಸಲಹೆ ನೀಡಿದರು. 

ಅವರು ಸಮೀಪದ ಬೆನಕಟ್ಟಿ ಗ್ರಾಮದ ದುರ್ಗಾದೇವಿಯ ಜಾತ್ರಾ ಮಹೋತ್ಸವದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಅವರು ಸಾಮೂಹಿಕ ವಿವಾಹವು  ಗ್ರಾಮೀಣ ಭಾಗದ ಬಡ ವರ್ಗದವರಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು. 

ನಂತರ ಮಬನೂರ ಗ್ರಾ. ಪಂ. ಮಾಜಿ ಅಧ್ಯಕ್ಷ ಪುಂಡಲೀಕ ಮೇಟಿ ಮಾತನಾಡಿ ಬೆಲೆ ಏರಿಕೆಯ ಇಂದಿನ ತುಟ್ಟಿ ಕಾಲದಲ್ಲಿ ಮದುವೆಗಳನ್ನು ಮಾಡುವುದೆಂದರೆ ಹೆತ್ತವರಿಗೆ ಭಾರವಾದ ವಿಷಯವಾಗಿದೆ. ಸರಳ ರೀತಿಯ ಸಾಮೂಹಿಕ ವಿವಾಹಗಳು ಎಲ್ಲೆಡೆ ನಡೆಯುವಂತಾಗಬೇಕು. ವರದಕ್ಷಿಣೆ ಪಿಡುಗು ತೊಲಗಬೇಕು. ಸತಿಪತಿಗಳು ಒಂದಾಗಿ ಆದರ್ಶ ಜೀವನ ನಡೆಸಬೇಕು. ಮಿತ ಸಂತಾನ ಪಾಲಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಕುಟುಂಬದ ಗೌರವ ಕಾಪಾಡಬೇಕು.ಧರ್ಮದ ಹಾದಿಯಲ್ಲಿ ದುಡಿದು ಜೀವನವನ್ನು ಸುಖಮಯವಾಗಿ ಬಾಳಬೇಕೆಂದು ಹೇಳಿದರು. 

ಗ್ರಾ. ಪಂ. ಸದಸ್ಯ ಕರೆಪ್ಪ ಪೂಜೇರ ಮಾತನಾಡಿದ ಅವರು ಗ್ರಾಮದ ಆರಾಧ್ಯ ದೇವತೆಯಾದ ದುರ್ಗಾದೇವಿಯು ಭಕ್ತರ ಪಾಲಿಗೆ ನೆರಳಾಗಿದ್ದಾಳೆ ಬೇಡಿದವರವನ್ನು ನೀಡುವತಾಯಿ, ಕಂಕಣಭಾಗ್ಯ, ಸಂತಾನಭಾಗ್ಯ ಸೇರಿದಂತೆ ಅನೇಕ ಹರಕೆ ಹೊತ್ತು ಬರುವ ಭಕ್ತಾದಿಗಳ ಅಸ್ತು ಎಂದ ಗ್ರಾಮದೇವಿ ಹಾಗೂ ಶರಣರ ಧರ್ಮ ಗುರುಗಳ ತತ್ವ ಸಂದೇಶಗಳನ್ನು ಹಿತೋಪದೇಶಗಳನ್ನು ಪರಿಪಾಲಿಸಬೇಕು.ಅಂದಾಗ ಸಾಂಸಾರಿಕ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಸತಿಪತಿಗಳು ಕಾಯಕಕ್ಕೆ ಹೆಚ್ಚು ಮಹತ್ವ ನೀಡಬೇಕು. ಮದುವೆಯಾದ ವರನು ತನ್ನ ತಂದೆ ತಾಯಿಯನ್ನು ಗೌರವಿಸುವ, ಅವರ ಬಗ್ಗೆ ಕಾಳಜಿ ವಹಿಸುವ ಮೂಲಕ ಮದುವೆಯಾದ ಹೆಂಡತಿಯನ್ನು ಪ್ರೀತಿ, ಸ್ನೇಹ ಮತ್ತು ಗೌರವಗಳೊಂದಿಗೆ ನೋಡಿಕೊಳ್ಳಬೇಕು. ಸಂಸಾರದ ಗುಟ್ಟು ಹೊರ ಹೋಗದಂತೆ ತಂಟೆ, ತಕರಾರು ಬರದಂತೆ ಯಾವುದೇ ಸಂಘರ್ಷಗಳಿಗೆ ಅವಕಾಶ ಮಾಡಿಕೊಡದಂತೆ ಆದರ್ಶ ಸತಿಪತಿಗಳಾಗಿರಬೇಕೆಂದು ಹೇಳಿದರು. 

ತಾ. ಪಂ. ಮಾಜಿ ಸದಸ್ಯ ರುದ್ರ​‍್ಪ ರೆವಣ್ಣವರ, ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಸಹಕಾರ ಮಹಾಮಂಡಳ ಸದಸ್ಯ ಉಮೇಶ ಬಾಳಿ, ಪಿಕೆಪಿಎಸ್ ಅಧ್ಯಕ್ಷ ಪುಂಡಲೀಕ ಮರದನ್ನವರ, ಶ್ರೀಶೈಲ ಕುಸಲಿ, ಎಸ್ ಡಿ ಎಂ. ಸಿ ಮಾಜಿ ಮಲ್ಲಿಕಾರ್ಜುನ ದೇವರಮನಿ, ಹನಮಂತ ಸಿಂಗನ್ನವರ, ಪ್ರಕಾಶ ಕಲ್ಲೇದ, ಅಪ್ಪಯ್ಯಪ್ಪ ಶಿರಸಂಗಿ, ಮಂಜುನಾಥ ದೇವರಮನಿ, ಪ್ರಕಾಶ ಸಾವಳಗಿ ಸೇರಿದಂತೆ ಅನೇಕ ಇದ್ದರು.