ನವದೆಹಲಿ, ಏ 8, ಕೊರೊನಾ ವೈರಸ್ ನಿಂದಾಗಿ ಏಕಾಏಕಿ ವಿಶ್ವದಾದ್ಯಂತ ಕ್ರೀಡಾಕೂಟಗಳು ಸ್ಥಗಿತಗೊಂಡಿವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಆಸೀಸ್ ನ ಸ್ಟೀವ್ ಸ್ಮಿತ್ ಮತ್ತು ಇಂಗ್ಲೆಂಡ್ ನ ಜೋಸ್ ಬಟ್ಲರ್ ಅವರ ನಂತರ, ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ಅವರು ಸಹ ಅಪಾರ ಆದಾಯವಿರುವ ಐಪಿಎಲ್ ಲೀಗ್ ನಡೆಯಬೇಕು ಎಂದು ಭಾವಿಸಿದ್ದಾರೆ.ಲೀಗ್ ನಡೆಯುವ ಸಾಧ್ಯತೆ ಕುರಿತು ಹಿಂದಿ ಶೋ ಕ್ರಿಕೆಟ್ ಕನೆಕ್ಟಡ್ ನಲ್ಲಿ ತಮ್ಮ ದೂರದೃಷ್ಟಿ ಹಂಚಿಕೊಂಡಿರುವ ನೆಹ್ರಾ, ಆಗಸ್ಟ್‌ನಲ್ಲಿ ಐಪಿಎಲ್ ಆಗದಿದ್ದರೂ ಸಹ, ಆ ತಿಂಗಳಲ್ಲಿ ಮಳೆಗೆ ಸಾಕ್ಷಿಯಾಗುವ ಸ್ಥಳಗಳು ಭಾರತದಲ್ಲಿವೆ. ಇದರಿಂದ ಸಾಕಷ್ಟು ಪಂದ್ಯಗಳು ರದ್ದಾಗುವ ಸಾಧ್ಯತೆಯೆ ಹೇಚ್ಚು. ಅಕ್ಟೋಬರ್ ವೇಳೆಗೆ ಪ್ರಪಂಚದಾದ್ಯಂತ ಸಾಮಾನ್ಯ ಸ್ಥಿತಿಗೆ ನಿರ್ಮಾಣವಾದರೆ, ನಾವು ಶೇಕಡಾ 100 ರಷ್ಟು ಕ್ಲಿಯರೆನ್ಸ್ ಪಡೆಯುತ್ತೇವೆ, ಎಂದು ತಮ್ಮ ವಿಷನ್ ಬಿಚ್ಚಿಟ್ಟಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟೀವ್ ಸ್ಮಿತ್ ಮತ್ತು ಇದೇ ತಂಡದ ಜೋಸ್ ಬಟ್ಲರ್ ಸಹ ಐಪಿಎಲ್ ನಡೆಯಬೇಕು ಎಂಬುದರ ಪರವಾಗಿ ತಮ್ಮ ವಾದ ಮಂಡಿಸಿದ್ದಾರೆ.