ಲೋಕದರ್ಶನ ವರದಿ
ಬೆಳಗಾವಿ 25: ಜೈನ್ ಹೆರಿಟೇಜ್ ಸ್ಕೂಲಿನ ಶೈಕ್ಷಣಿಕ ವರ್ಷ 2019-20 ಸಾಲಿನ ಸ್ಕೂಲ್ ಪದ ಸ್ಥಾಪನೆ ಹಾಗೂ ಅಧಿಕಾರ ವಹಿಸಿಕೊಡುವ ಕಾರ್ಯಕ್ರಮ ಇತ್ತೀಚಿಗೆ ಜರುಗಿತು. ಈ ಸಮಾರಂಭದಲ್ಲಿ ಪ್ರಖ್ಯಾತ ಗೌರವಾನ್ವಿತರುಗಳಾದ ಬ್ರಿಗೇಡಿಯರ್ ಸಂಜಯಕುಮಾರ ಥಾಪಾ ಸೇನಾ ಮೆಡೆಲ್ ಹಾಗೂ ಬೆಳಗಾವಿಯ ಹೆಚ್ಚುವರಿ ಎಸ್.ಪಿ. ಡಾ. ರಾಮ ಅರಸಿದ್ಧಿ ಇವರು ಗೌರವ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಈ ಸಮಾರಂಭಕೆ ಜೈನ್ ಹೆರಿಟೇಜ್ ಶಾಲೆಯ ನಿದರ್ೇಶಕಿ ಶ್ರದ್ಧಾ ಖಟವಟೆ ಹಾಗೂ ಪ್ರಾಂಶುಪಾಲ ಡಾ.ಮನಜೀತ ಜೈನ್ ಉಪಸ್ಥಿತರಿದ್ದರು.
ಈ ಹೊಸ ಕ್ಯಾಬಿನೇಟನ್ನು ಉದ್ದೇಶಿಸಿ ಮಾತನಾಡುತ್ತಾ, ಬ್ರಿಗೇಡಿಯರ್ ಥಾಪಾ ಮಾತನಾಡುತ್ತಾ, ವಿದ್ಯಾಥರ್ಿ ನಾಯಕರು ತಮ್ಮ ಪ್ರತಿಯೊಂದು ಕೆಲಸವನ್ನು ಅತೀವ ಉತ್ಸುಕತೆಯಿಂದ ನಿರ್ವಹಿಸಬೇಕು ಹಾಗೂ ತಾವು ತಮ್ಮ ತಂಡದ ನಾಯಕರೆಂಬುದನ್ನು ಮರೆಯದೇ ತಮ್ಮ ಅವಕಾಶಗಳನ್ನು ಕಳೆದುಕೊಳ್ಳದೇ ಎಲ್ಲ ಕೌಶಲ್ಯಗಳಿಂದ ನಿರ್ವಹಿಸಬೇಕೆಂದು ಉಪದೇಶಿಸಿದರು. ಅವರು ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡುತ್ತಾ, ಈಗ ನಿಮಗೆ ದೊರೆತಿರುವ ಅಂತಸ್ತು ದೊಡ್ಡ ಹೊಣೆಗಾರಿಕೆಯಿಂದ ಕೂಡಿದ್ದು, ಒಂದು ತರಹದ ತ್ಯಾಗಕ್ಕೂ ಸಿದ್ಧರಿರಬೇಕು. ಅವರು ಪ್ರೋತ್ಸಾಹಿಸುತ್ತ, ಯೋಗ್ಯ ರೀತಿಯ ಮನೋಭಾವ ನಿಮ್ಮ ಬುದ್ಧಿಮತ್ತೇ ಹಾಗೂ ಜಾಣತನಗಳ ಮೇಲೆ ಅದ್ಭುತಗಳನ್ನು ಮಾಡಬಹುದೆಂದರು.
ಬೆಳಗಾವಿಯ ಹೆಚ್ಚುವರಿ ಸುಪರಿಂಟೆಂಡೆಂಟ್ ಆಫ್ ಪೋಲೀಸ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಸಮಯಬದ್ದತೆಯಿಂದ ನಿರ್ವಹಿಸಿರುವ ವಿದ್ಯಾಥರ್ಿಗಳನ್ನು ಶ್ಲಾಘಿಸಿದರು. ಅವರು ಮಾತನಾಡುತ್ತ, ತಾವು ತಮ್ಮ ಶಾಲಾ ದಿನಗಳಲ್ಲಿ ಶಾಲಾ ಕೌನ್ಸಿಲದಲ್ಲಿ ಡಿಜಾವೋ ಭಾವನೆಯಿಂದ ಕೆಲಸ ಮಾಡಿಕೊಂಡಿದ್ದನ್ನು ನೆನಪಿಸಿಕೊಂಡರು. ಅವರು ಯುವ ಮನಸ್ಸುಗಳಿಗೆ ಧೈರ್ಯ ತುಂಬುತ್ತಾ ಪ್ರತಿಯೊಂದು ಅವಕಾಶಗಳಲ್ಲಿ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಉಪದೇಶಿಸಿದರು. ಪ್ರತಿಯೋರ್ವನೂ ತನ್ನ ದೈವವನ್ನು ರೂಪಿಸುವವನು ತಾನೇ ಎಂಬುದನ್ನೂ ನೆನಪಿಸಿ ಕೊಟ್ಟರು.
ಪ್ರಾಂಶುಪಾಲ ಡಾ.ಮನಜೀತ ಜೈನ್ ತಮ್ಮ ಸ್ವಾಗತ ಭಾಷಣದಲ್ಲಿ ವಿದ್ಯಾಥರ್ಿಗಳನ್ನು ಶ್ಲಾಘಿಸುತ್ತ, ಜೀವನ ನೀಡುವ ಎರಡು ಮಾರ್ಗಗಳಲ್ಲಿ ಆಯ್ಕೆ ಮಾಡಿಕೊಳ್ಳುವುದರ ಮಹತ್ವ ಕುರಿತು ಮಾತನಾಡಿದರು. ಅವರು ವಿದ್ಯಾಥರ್ಿಗಳ ಪೋಷಕರನ್ನು ಶ್ಲಾಘಿಸಿ, ತಮ್ಮ ಮಕ್ಕಳನ್ನು ಎತ್ತರಕ್ಕೆ ತರಲು ವಹಿಸಿದ ಕಾಳಜೀಯ ಕುರಿತು ಪ್ರಶಂಸೆ ಮಾಡಿದರು.
ವಿದ್ಯಾಥರ್ಿಗಳ ಮುಖಂಡ ಶ್ಯಾಮ ಹನುಮಣ್ಣವರ ಹಾಗೂ ವಿದ್ಯಾಥರ್ಿನಿಯರ ನಾಯಕಿ ಅಂಜಲಿ ಹೇಡಾ, ತಮಗೆ ನಿರ್ವಹಿಸಿರುವ ಕಾರ್ಯಗಳನ್ನು ಸೇವಾ ಮನೋಭಾವದಿಂದ ನಿರ್ವಹಿಸುವುದಾಗಿ ಹೇಳಿದರು. ಬಾಲಕಿಯರ ಉಪ ಮುಖ್ಯಸ್ಥೆ ಗಿರಿ ರಿದ್ದಿ ಇಜಾರೆ ಹಾಗೂ ಬಾಲಕರ ಉಪ ಮುಖಂಡ ಆರ್ಯನ್ ಜೀಲಾನಿ ಕೃತಜ್ಞತೆಗಳನ್ನು ಸಲ್ಲಿಸಿದರು.