ಬಳ್ಳಾರಿ, ಏ.15: ಮುಂಡರಗಿ ಬಳಿ ನಿಮರ್ಿಸಲಾಗುತ್ತಿರುವ ಮಹಾತ್ಮಾಗಾಂಧಿ ಟೌನ್ಶಿಪ್ ಆಶ್ರಯ ಬಡಾವಣೆಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೃಷ್ಣ ಬಿ.ಅಸೋಡೆ ಅವರು ಬುಧವಾರ ಭೇಟಿ ನೀಡಿ ಕಾರ್ಮಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಕಾಮರ್ಿಕರು ತಂಗಿರುವ ವಸತಿ, ಶೌಚಾಲಯ, ನೀರಿನ ವ್ಯವಸ್ಥೆ ಸೇರಿದಂತೆ ಇನ್ನೀತರ ಸೌಕರ್ಯಗಳನ್ನು ಪರಿಶೀಲಿಸಿದರು. ಕಾಮರ್ಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿಮರ್ಾಣದ ಹೊಣೆ ಹೊತ್ತಿರುವ ಗುತ್ತಿಗೆದಾರರಿಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸೂಚನೆ ನೀಡಿದರು.
ಈ ಲಾಕ್ ಡೌನ್ ಸಂದರ್ಭದಲ್ಲಿ ಕಾಮರ್ಿಕರಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸಿಕೊಡಿ; ತೊಂದರೆಗೆ ಸಿಲುಕಿಸಬೇಡಿ ಎಂದು ಹೇಳಿದ ನ್ಯಾ.ಕೃಷ್ಣ ಅಸೋಡೆ ಅವರು ಕಾಮರ್ಿಕರು ಏನಾದರೂ ಸಮಸ್ಯೆಗಳಾದಲ್ಲಿ ತಮ್ಮ ಗಮನಕ್ಕೆ ತರುವಂತೆ ಕೋರಿದರು.
ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ದೊರಕುವ ಸೌಲಭ್ಯಗಳನ್ನು ಸಹ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬಳ್ಳಾರಿ ಎನ್ಸಿಸಿ ಮೈದಾನದಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಮಾರುಕಟ್ಟೆಗೂ ಭೇಟಿ ನೀಡಿ ಪರಿಶೀಲಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆಯೇ ಹಾಗೂ ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ವ್ಯಾಪಾರಿಗಳಿಂದ ಹಾಗೂ ಸ್ವಯಂಸೇವಕರಿಂದ ತಿಳಿದುಕೊಂಡರು.
ಈ ಸಂದರ್ಭದಲ್ಲಿ ನ್ಯಾಯಾಧೀಶರುಗಳಾದ ಅಜರ್ುನ್ ಎಸ್.ಮಲ್ಲೂರು, ಕಾಸೀಂ ಚೂರಿಖಾನ್, ಕಾಮರ್ಿಕ ಇಲಾಖೆ ಅಧಿಕಾರಿಗಳಾದ ಕಮಲ್ ಶಾ ಅಲ್ತಾಫ್ ಅಹ್ಮದ್, ಚಂದ್ರಶೇಖರ ಐಲಿ, ಕಾಮರ್ಿಕ ನಿರೀಕ್ಷಕರಾದ ಎಂ.ರವಿದಾಸ್, ಸಿ.ಎನ್.ರಾಜೇಶ್ ಸೇರಿದಂತೆ ಇತರರು ಇದ್ದರು.