ನರೇಗಾ ಇ-ಕೆವೈಸಿ ಮಾಡಿಸದಿದ್ದರೆ ಉದ್ಯೋಗ ಚೀಟಿ ರದ್ದು
Employment card will be cancelled if NREGA e-KYC is not done
ನರೇಗಾ ಇ-ಕೆವೈಸಿ ಮಾಡಿಸದಿದ್ದರೆ ಉದ್ಯೋಗ ಚೀಟಿ ರದ್ದು
ಗಜೇಂದ್ರಗಡ 17: ನರೇಗಾದಲ್ಲಿ ಕೂಲಿಕಾರರು ಕೆಲಸ ಮಾಡಬೇಕಾದರೆ ಇ-ಕೆವೈಸಿ ಮಾಡಿಕೊಳ್ಳಬೇಕು. ಇ-ಕೆವೈಸಿ ಮಾಡಿಸದಿದ್ದರೆ ಕೂಲಿಕಾರರ ಉದ್ಯೋಗ ಚೀಟಿ(ಜಾಬ್ ಕಾರ್ಡ) ರದ್ದಾಗಲಿದೆ ಎಂದು ಸ್ವತಃ ಕೂಲಿಕಾರರ ಮನೆ-ಮನೆಗೆ ತೆರಳಿ ಇ-ಕೆವೈಸಿ ಮಾಡಿ ನರೇಗಾ ಕೂಲಿಕಾರರಲ್ಲಿ ಗಜೇಂದ್ರಗಡ ತಾಲೂಕು ಪಂಚಾಯತ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕರು ಬಸವರಾಜ ಬಡಿಗೇರ ಜಾಗೃತಿ ಮೂಡಿಸಿದರು.ತಾಲೂಕಿನ ಇಟಗಿ, ಸೂಡಿ ಮತ್ತು ಹಾಲಕೆರೆ ಗ್ರಾಪಂ ಗಳಿಗೆ ಖುದ್ದು ತಾಪಂ ಎಡಿ ಅವರೇ ಭೇಟಿ ನೀಡಿ ಇಂದು ಇ-ಕವೈಸಿ ಕಾರ್ಯದಲ್ಲಿ ತೊಡಗಿಸಿಕೊಂಡು ಕೂಲಿಕಾರರಲ್ಲಿ ತಿಳುವಳಿಕೆ ಮೂಡಿಸಿದರು.
ಇಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರರ ಮನೆಗಳಿಗೆ ತೆರಳಿದ ಎಡಿ ಬಸವರಾಜ ಬಡಿಗೇರ ಅವರು, ನರೇಗಾ ಕೆಲಸದ ಬದುವಿನ ಕೆಲಸ ಸೇರಿದಂತೆ ಎಲ್ಲ ಕಾಮಗಾರಿಗಳಲ್ಲಿ ಕೆಲಸ ಮಾಡಲು ಇ-ಕೆವೈಸಿ ಕಡ್ಡಾಯವಾಗಿದೆ. ಇವಾಗಲೇ ಇ-ಕೆವೈಸಿ ಮಾಡಿಸಿಕೊಂಡಲ್ಲಿ ನರೇಗಾದಲ್ಲಿ ಕೆಲಸ ಮಾಡಲು ಅವಕಾಶವಿದೆ. ಇ-ಕೆವೈಸಿ ಮಾಡಿಸದಿದ್ದರೆ ನರೇಗಾದಲ್ಲಿ ಕೆಲಸ ಮಾಡಲು ಬರಲ್ಲ ಅಂತ ತಿಳಿಸಿದರು. ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಪ್ರಕಾಶ ಮ್ಯಾಕಲ್, ಇಟಗಿ, ಸೂಡಿ, ಹಾಲಕೆರೆ ಗ್ರಾಪಂ ಗಳ ಪಿಡಿಒ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 