ರೇಲ್ವೆ ಮಾರ್ಗಕ್ಕೆ ಭೂಮಿ ನೀಡಿದ ರೈತ ಮಕ್ಕಳಿಗೆ ಉದ್ಯೋಗದ ಭರವಸೆ: ಅಂಗಡಿ

ಬಾಗಲಕೋಟೆ: ರೇಲ್ವೆ ಸಚಿವರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಕುಡಚಿ-ಬಾಗಲಕೋಟ ರೇಲ್ವೆ ಮಾರ್ಗಕ್ಕೆ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಾನ್ಯ ಪ್ರಕಾಶ ತಪಶೆಟ್ಟಿ ಅವರ ಮನೆಯಲ್ಲಿ ಸಂಸದರಾದ ಪಿ.ಸಿ. ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಮುಖಂಡರಾದ ಪ್ರಕಾಶ ತಪಶೆಟ್ಟಿ ಅವರ ಸಮ್ಮುಖದಲ್ಲಿ ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಕುತುಬುದ್ದೀನ ಖಾಜಿ, ಉಪಾಧ್ಯಕ್ಷರಾದ ಶ್ರೀನಿವಾಸ ಬಳ್ಳಾರಿ, ಅವರನ್ನೊಳಗೊಂಡ ರೈತರ ನಿಯೋಗ ಮಾನ್ಯ ಸಚಿವರಿಗೆ ಸಕರ್ಾರದ ಆದೇಶದಂತೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತರಾದ ರಂಗನಗೌಡ ಪಾಟೀಲ ಮಾತನಾಡಿ ನಮಗೆ ಭೂಮಿ ನೀಡುವ ಸಂದರ್ಭದಲ್ಲಿ ಉದ್ಯೋಗ ಕೊಡುವುದಾಗಿ ಭೂಸ್ವಾಧೀನಾಧಿಕಾರಿಗಳು, ಜಿಲ್ಲಾಧಿಕಾರಿಗಳು ಲಿಖಿತ ಭರವಸೆ ಕೊಟ್ಟಿರುತ್ತಾರೆ. ಅದರಂತೆ ಯಾರಿಗೆ ನೌಕರಿ ಕೊಡಬೇಕು ಅನ್ನುವ ಲ್ಯಾಂಡ್ ಲೂಸರ್ಸ್ ಸಟರ್ಿಫಿಕೇಟ್ ಕೂಡ ಕೊಟ್ಟಿರುತ್ತಾರೆ.

     ಅದರಂತೆ ನಾವುಗಳು ರೇಲ್ವೆ ಇಲಾಖೆಗೆ ಉದ್ಯೋಗ ನೀಡಿ ಅಂತಾ ಅಜರ್ಿಯನ್ನು ಸಲ್ಲಿಸಿ ನಾಲ್ಕು ವರ್ಷ ಗತಿಸಿದರೂ ಈವರೆಗೂ ಯಾರೊಬ್ಬರನ್ನು ಉದ್ಯೋಗ ನೀಡದಿರುವುದು ರೈತರನ್ನು ಆತಂಕಕ್ಕೆ ಈಡು ಮಾಡಿದೆ ಅಂತ ತಮ್ಮ ಗೋಳನ್ನು ತೋಡಿಕೊಂಡರು. ಅದಕ್ಕೆ ದನಿಗೂಡಿಸಿದ ಸಂಸದರು ಮಾನ್ಯ ಪ್ರಕಾಶ ತಪಶೆಟ್ಟಿ ಅವರು ರೈತರು ಹೇಳಿದಂತೆ ಅವರಿಗೆ ಉದ್ಯೋಗ ಕೊಡಬೇಕು ಅಂತಾ ಸಚಿವರನ್ನು ಒತ್ತಾಯಿಸಿದರು.

ರಾಜ್ಯ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ಮಾತನಾಡಿ ಕೇಂದ್ರ ಸರಕಾರದ ಸುತ್ತೋಲೆಯಂತೆ ಮಾನ್ಯ ಭೂಸ್ವಾಧೀನ ಅಧಿಕಾರಿಗಳು 'ಡಿ' ದಜರ್ೆ ಉದ್ಯೋಗ ಕೊಡುವ ಲಿಖಿತ ಭರವಸೆಯನ್ನು ನೀಡಿರುತ್ತಾರೆ. 

       ಅದಕ್ಕೆ ತಕ್ಕಂತೆ ಸರಕಾರಗಳು ರೇಲ್ವೆ ಇಲಾಖೆ ನಡೆದುಕೊಂಡು ರೈತರನ್ನು ಉದ್ಯೋಗ ನೀಡಿದಲ್ಲಿ ರಾಜ್ಯದಲ್ಲಿ ದಶಕಗಳಿಂದ ನಡೆದಿರತಕ್ಕಂತ ರೇಲ್ವೆ ಕಾಮಗಾರಿಗಳು ಬಹುಬೇಗನೆ ಪೂರ್ಣಗೊಳ್ಳಬಹುದು, ಮತ್ತು ಕುಡಚಿ-ರೇಲ್ವೆ ಮಾರ್ಗಕ್ಕಾಗಿ ಈಗಾಗಲೇ ಅಂದಾಜು 500 ಕೋಟಿ ರೂ. ಗಳನ್ನು  ರಾಜ್ಯ ಮತ್ತು ಕೇಂದ್ರ ಸರಕಾರದ ವತಿಯಿಂದ ಖಚರ್ಾಗಿದ್ದು, ಮಾರ್ಗ ನಿರ್ಜನ ಪ್ರದೇಶವಾದ ಖಜ್ಜಿಡೋಣಿಯವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಕನಿಷ್ಠ ಪಕ್ಷ ಲೋಕಾಪೂರವರೆಗೆ ಮಾರ್ಗ ಪೂರ್ಣಗೊಳಿಸಿದ್ದರೆ ಯೋಜನೆಯ ಉಪಯೋಗ ಸಾರ್ವಜನಿಕರಿಗೆ ಆಗುತ್ತಿತ್ತು. 

ಈಗ 33 ಕಿ.ಮೀ. ಗೆ ಹಳಿಗಳ ನಿಮರ್ಾಣ ಆಗಿರುವುದರಿಂದ ಸರಕಾರಕ್ಕೆ 5 ರೂ.ಗಳ ಉತ್ಪನ್ನ ಇಲ್ಲ, 5 ಜನರಿಗೆ ಸೌಕರ್ಯ ಇಲ್ಲದಂತಾಗಿದೆ.  ಸರಕಾರ ಇದರ ಬಗ್ಗೆ ಗಂಭೀರ ಚಿಂತನೆ ಮಾಡುವ ಅವಶ್ಯಕತೆ ಇದೆ ಅಂತ ಮಾನ್ಯ ಸಚಿವರಿಗೆ ಹೇಳಿದರು.

  ಅದರಂತೆ ಪ್ರಕಾಶ ತಪಶೆಟ್ಟಿ ಅವರು, ಮಾನ್ಯ ಪಿ.ಸಿ. ಗದ್ದಿಗೌಡರ ಅವರು, ಶ್ರೀನಿವಾಸ ಬಳ್ಳಾರಿಯವರು, ಸಹಮತ ವ್ಯಕ್ತಪಡಿಸಿ ಮಾನ್ಯ ಸಚಿವರಿಗೆ ರೈತರ ಗಂಭೀರ ಸಮಸ್ಯೆಯನ್ನು ಆಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

     ಸಚಿವರು ಎಲ್ಲ ದಾಖಲೆಗಳನ್ನು ಪಡೆದುಕೊಂಡು ಕೇಂದ್ರ ರೇಲ್ವೆ ಸಚಿವಾಲಯದಲ್ಲಿ ಪರಿಶೀಲಿಸಿ ರೇಲ್ವ ಇಲಾಖೆಗೆ ಉದ್ಯೋಗ ನೀಡಲು ನಿದರ್ೇಶಿಸಲಾಗುವುದು ಎಂದು ಹೇಳಿದರು. ನಿಯೋಗದಲ್ಲಿ ದುರಗಪ್ಪ ಕಟ್ಟಿಮನಿ, ಕಿರಣ ಲಮಾಣಿ, ಅನಿಲ ರಾಠೋಡ, ಮತ್ತು ಅನೇಕ ರೈತ ಬಾಂಧವರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.