ಹಾವೇರಿ08: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ. ಒಂದು ಕಾಮಗಾರಿಯಲ್ಲಿ ಐದು ಜನ ಕೂಲಿಕಾರರು ಕೆಲಸ ನಿರ್ವಹಿಸಲು ನಿಬಂಧನೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಕೆಲಸಕ್ಕೆ ಯಾವುದೇ ನಿರ್ಭಂಧವಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಅವರು ಹೇಳಿದರು.
ಬುಧವಾರ ಹಾವೇರಿ ವಾತರ್ಾ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಂಡು ಉದ್ಯೋಗ ಖಾತ್ರಿಯಡಿ ಕೂಲಿಕಾರಿಗೆ ಕೆಲಸಮಾಡಲು ಯಾವುದೇ ಅಭ್ಯಂತರವಿಲ್ಲ. ಯಾರೇ ಕೆಲಸ ಕೇಳಿಬಂದರೂ ಅವರಿಗೆ ಮನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ ಎಂದು ಹೇಳಿದರು.
ಉದ್ಯೋಗಖಾತ್ರಿಯಡಿ ಜಿಲ್ಲೆಯಲ್ಲಿ ನೈಸಗರ್ಿಕ ಸಂಪನ್ಮೂಲ ರಕ್ಷಣೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.65 ವೆಚ್ಚವನ್ನು ನೈಸಗರ್ಿಕ ಸಂಪನ್ಮೂಲಗಳ ರಕ್ಷಣಾ ಯೋಜನೆಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಶೇ.20 ರಷ್ಟನ್ನ ಅರಣ್ಯೀಕರಣ ಕಾಮಗಾರಿಗೆ ಮೀಸಲಿರಿಸಲಾಗಿದೆ. ನೀರು ಇಂಗಿಸುವಿಕೆ, ಹಸರೀಕರಣ, ಭೂ ಫಲವತ್ತತೆ ಹೆಚ್ಚಳಕ್ಕೆ ಆದ್ಯತೆ ನೀಡಿ 12 ಸಾವಿರ ಎಕರೆಯಲ್ಲಿ ಬಂಡಿಂಗ್, ಟ್ರಂಚಿಂಗ್, ಕೃಷಿ ಹೊಂಡ, ಗೋ ಕಟ್ಟೆ, ಜಲ ಮೂಲಗಳ ಪುನಶ್ಚೇತನ, ಕಾಲುವೆಗಳ ನಿಮರ್ಾಣದ ಮೂಲಕ ಜಲ ಮೂಲಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ತಯಾರಿಸಲಾಗಿದೆ. ಮೇಲ್ಪಟ್ಟದ ಜಲಮೂಲ, ಮಧ್ಯಮ ಮಟ್ಟದ ಜಲ ಮೂಲ ಹಾಗೂ ಕೆಳಮಟ್ಟದ ಜಲಮೂಲಗಳೆಂದು ವಗರ್ೀಕರಿಸಿ ಪುನಶ್ಚೇತನ ಮತ್ತು ವಿವಿಧ ಜಲಮೂಲಗಳ ಸಂಪಕರ್ಿಸಲು ಕಾಲುವೆಗಳ ನಿಮರ್ಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 2001 ಜಲಮೂಲಗಳನ್ನು ಗುರುತಿಸಲಾಗಿದೆ. ಈ ಪೈಕಿ 618 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಈಗಾಗಲೇ ಜಿಯೋ ಸ್ಪೆಷಿಯಲ್ ದತ್ತಾಂಶವನ್ನು ಸಂಗ್ರಹಿಸಿ ಯೋಜನೆ ರೂಪಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಉದ್ಯೋಗ ಖಾತ್ರಿ ಅನುದಾನ ಬಳಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಪ್ರವಾಹದಿಂದ ಕೊಚ್ಚಿಹೋದ ವರದಾ ನದಿಯ ದಡದ ಇಕ್ಕೆಲೆಗಳ 300 ರಿಂದ 500 ಮೀಟರ್ ವಿಸ್ತೀರ್ಣದಲ್ಲಿ 129 ಕಿ.ಮೀ. ನದಿ ಉದ್ದಕ್ಕೂ ನರೇಗಾ ಯೋಜನೆಯಡಿ ವರದಾ ಕರೆ ಯೋಜನೆಯಡಿ ಭೂ ಸವಕಳಿ ತಡೆಯಲು ಪ್ಲಾಂಟೇಷನ್ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಯ ತಾಂತ್ರಿಕ ಒಗ್ಗೂಡುವಿಕೆಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ರೈತರ ಬದುಗಳಲ್ಲೂ ಹಾಗೂ ನಿರಪಯುಕ್ತ ಜಮೀನಿನಲ್ಲೂ ಸಸಿ ನೆಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲನಲ್ಲಿ ನರೇಗಾ ಕೂಲಿ ವೆಚ್ಚವನ್ನು 275 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ವರ್ಷದ ಎಪ್ರಿಲ್ ಮಾಹೆಯಲ್ಲಿ 986.ಎನ್. ಎಂ. ಆರ್ ಹಂಚಿಕೆಮಾಡಿ ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಈಗಾಗಲೇ 54 ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಳು ಆರಂಭವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 2.12 ಲಕ್ಷ ನೊಂದಾಯಿತ ಕುಟುಂಬಗಳ 1.98 ಲಕ್ಷ ಜನರಿದ್ದಾರೆ. 2019-20ನೇ ಸಾಲಿನ ಮಾಚರ್್ ಅಂತ್ಯಕ್ಕೆ 31.79 ಲಕ್ಷ ಮಾನವ ದಿನಗಳನ್ನು ಸೃಜನೆಮಾಡಿದೆ. 145.04 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಬೇಸಿಗೆಯಲ್ಲಿ ಈವರೆಗೆ ಜಿಲ್ಲೆಯ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇರುವುದಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸುವ ಬೇಡಿಕೆ ಬಂದಿಲ್ಲ. ಆದಾಗ್ಯೂ ಹಿಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾದ ಪರಿಸ್ಥಿತಿಯನ್ನು ಗಮನಿಸಿ 32 ಹಳ್ಳಿಗಳಿಗೆ ನೀರಿನ ಸಮಸ್ಯೆ ಉಂಟಾಗಬಹುದು ಎಂದ ಅಂದಾಜಿಸಿ ಪೈಪ್ಲೈನ್ ಮೂಲಕ ನೀರು ಪೂರೈಸಲು ವ್ಯವಸ್ಥೆಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 169 ಶುದ್ಧ ನೀರಿನ ಘಟಕಗಳ ಪೈಕಿ 104 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲವನ್ನೂ ಸುಸ್ಥಿತಿಗೆ ತರಲಾಗಿದೆ. ಉಳಿದಂತೆ 10 ರಿಂದ 20 ಘಟಕಗಳು ಮಾತ್ರ ತಾಂತ್ರಿಕ ತೊಂದರೆ ಒಳಗಾಗಿದ್ದು, ದುರಸ್ತಿ ಕೆಲಸ ನಡೆದಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ 224 ಗ್ರಾಮ ಪಂಚಾಯತಿಗಳಲ್ಲಿ ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿಗೆ ತ್ಯಾಜ್ಯ ಘಟಕಗಳನ್ನ ಗುರುತಿಸಲು ಪ್ರತಿ ಗ್ರಾಮ ಪಂಚಾಯತಿಯಲ್ಲಿ 10 ಗಂಟೆಯಿಂದ ಒಂದು ಎಕರೆವರೆಗೆ ಜಾಗ ಗುತುತಿಸಲು ಸೂಚನೆ ನೀಡಲಾಗಿದೆ. ಈಗಾಗಲೇ 40 ಗ್ರಾಮ ಪಂಚಾಯತಿಗಳಿಗೆ ತಲಾ 20 ಲಕ್ಷ ರೂ.ಗಳ ಅನುದಾನ ಸಹ ನೀಡಿದೆ. 10 ರಿಂದ 12 ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ವೈಜ್ಞಾನಿಕ ಕಸ ವಿಲೇವಾರಿ ಅನುಷ್ಠಾನಗೊಂಡಿದೆ. ಒಂದು ವರ್ಷದಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ವೈಜ್ಞಾನಿಕ ಮಾದರಿಯಲ್ಲಿ ಕಸ ವಿಂಗಡಿಸಿ ವಿಲೇವಾರಿಗೋಳಿಸಲು ಕ್ರಮವಹಿಸಲಾಗುವುದು. ಹಾಗೂ ಗ್ರಾಮೀಣ ಭಾಗದ ತಿಪ್ಪೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆಮಾಡುವ ಕುರಿತು ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಿ ಅಧ್ಯಯನಮಾಡಿಸಲಾಗಿದೆ. ಈ ಕುರಿತಂತೆ ಶೀಘ್ರವೇ ಕ್ರಮವಹಿಸಲಾಗುವುದು ಎಂದು ತಿಳಿಸಿದರು.