ಲೋಕದರ್ಶನ ವರದಿ
ಗುಳೇದಗುಡ್ಡ06: ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿ ಉದ್ಯೋಗಳನ್ನು ಸೃಜಿಸುವ ಮೂಲಕ ಗ್ರಾಮೀಣ ಜನರ ಪಾಲಿನ ಆಪತ್ಬಾಂಧವನಂತಿದೆಂದು ತಾಲೂಕ ಪಂಚಾಯತ ಆಯ್.ಇ.ಸಿ. ಸಂಯೋಜಕ ಸಮೀರ ಉಮಜರ್ಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಸೂಳಿಕೇರಿ ಗ್ರಾಮ ಪಂಚಾಯತಿಯ ಸೂಳಿಕೇರಿ ಗ್ರಾಮದಲ್ಲಿ ನರೇಗಾ ಕೂಲಿ- ಕಾಮರ್ಿಕರಿಗಾಗಿ ಹಮ್ಮಿಕೊಂಡಿದ್ದ ರೋಜಗಾರ ದಿನಾಚರಣೆಯಲ್ಲಿ ಮಾತನಾಡಿ ಉದ್ಯೋಗ ಖಾತ್ರಿ ಕಾಯ್ದೆಯು ಗ್ರಾಮೀಣ ಜನರ ಬದುಕಿನ ಆಪ್ತಮಿತ್ರನಂತಿದ್ದು ಗ್ರಾಮೀಣ ಜನರ ದುಡಿಯುವ ಕೈಗಳಿಗೆ ಉದ್ಯೋಗವನ್ನು ನೀಡಿದೆ.
ಕಾಯ್ದೆಯ ಮುಖೇನ ಸಾಮಾನ್ಯವಾಗಿ ಒಂದು ಆಥರ್ಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಅಕುಶಲ ಉದ್ಯೋಗವನ್ನು ನೀಡಲಾಗುತ್ತದೆ. ಪ್ರಸ್ತುತ ವರ್ಷ ಬರಪೀಡಿತವೆಂದು ಘೋಷಣೆ ಮಾಡಿರುವ ಕಾರಣ 150 ದಿನಗಳವರೆಗೆ ವಿಸ್ತರಿಸಲಾಗಿದೆ. ತನ್ಮೂಲಕ ಗ್ರಾಮೀಣ ಜನರ ಹಿತವನ್ನು ಸಕರ್ಾರ ಕಾಪಾಡಿದೆ. ಈ ಕಾಯ್ದೆಯಡಿ ಯಾವುದೇ ಮಧ್ಯವತರ್ಿಗಳಿಗಾಗಲಿ, ಗುತ್ತಿಗೆದಾರರಿಗೆ ಅವಕಾಶವಿಲ್ಲ. ಶ್ರಮದ ಪ್ರತಿಫಲ ನೇರವಾಗಿ ಫಲಾನುಭವಿಗೆ ಸೇರುತ್ತದೆ. ಉದ್ಯೋಗ ಖಾತ್ರಿ ಕಾಯ್ದೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಲ್ಲಿ ಉದ್ಯೋಗವನ್ನು ಹೊಂದಲು ಅವಕಾಶವಿದೆ.
ಈ ಕಾಯ್ದೆಯಡಿ ಬದು ನಿಮರ್ಾಣ, ಕೃಷಿ ಹೊಂಡ ನಿಮರ್ಾಣ , ದನದ ಶೆಡ್ ನಿಮರ್ಾಣ ಹೀಗೆ ಅನೇಕ ವೈಯಕ್ತಿಕ ಕಾಮಗಾರಿಗಳಿದ್ದು, ಅವುಗಳನ್ನು ಗ್ರಾಮೀಣ ಜನರು ಕೈಗೊಂಡು ಲಾಭ ಪಡೆಯಬೇಕು
ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಜಮಿನ ರಾಮದುರ್ಗ ಮಾತನಾಡಿ,ಈ ಕಾಯ್ದೆಯು ಲಿಂಗ ಸಮಾನತೆಯನ್ನು ಸಾರಿದೆ.
ಲಿಂಗ ಭೇದವಿಲ್ಲದೆ ಸಮಾನವಾದ ಕೂಲಿಯನ್ನು ನೀಡಲಾಗುತ್ತದೆ ಎಂದು ಹೇಳಿದರಲ್ಲದೇ ಕೂಲಿ -ಕಾಮರ್ಿಕರ ಸೌಲಭ್ಯಗಳು, ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಬಸವರಾಜ ಹಟ್ಟಿ, ಶಂಕರ ಕಟಗೇರಿ, ಪಾಂಡು ನಾಯ್ಕರ ಬಿ.ಎಫ್,ಟಿ ಮಾಗುಂಡಪ್ಪ ಕೋಟಿ ಕಾಯಕ ಬಂಧುಗಳು, ನರೇಗಾ ಕಾಮರ್ಿಕರು ಹಾಜರಿದ್ದರು