ಉದ್ಯೋಗ ಖಾತರಿ : ಸಂತೃಪ್ತಿಗೊಂಡ ಕೂಲಿ ಕಾರ್ಮಿಕರು

ಬಾಗಲಕೋಟೆ೧೪: ಕೆಲಸ ಅರಿಸಿ ದೂರದ ಮಂಗಳೂರು ಮತ್ತು ಗೋವಾಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ಮತ್ತು ಉತ್ತಮ ಕೂಲಿ ಪಡೆದುಕೊಂಡು ಸಂತೃಪ್ತ ಜೀವನ ನಡೆಸುತ್ತಿರುವುದನ್ನು ಕಂಡು ಸಿಇಓ ಗಂಗೂಬಾಯಿ ಮಾನಕರ ಹರ್ಷ ವ್ಯಕ್ತಪಡಿಸಿದರು.

ಬಾದಾಮಿ ತಾಲೂಕಿನ ತೋಗುಣಶಿ ಮತ್ತು ಕೋಟೆಕಲ್ ಗ್ರಾಮದಲ್ಲಿ ಶುಕ್ರವಾರ ಉದ್ಯೋಗ ಖಾತರಿ ಯೋಜನೆಯ ಐಇಸಿ ಕಾರ್ಯಕ್ರಮದಡಿ ಹಮ್ಮಿಕೊಂಡ  ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ ವೇಳೆ ಕೋಟೆಕಲ್ ಗ್ರಾಮ ವ್ಯಾಪ್ತಿಯಲ್ಲಿ ನಾಲಾ ಸಂರಕ್ಷಣೆಗಾಗಿ ಹಮ್ಮಿಕೊಂಡ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಕೂಲಿ ಕಾಮರ್ಿಕರನ್ನು ಮಾತನಾಡಿಸಿದರು. 

ಬೇರೆ ದೂರದ ಊರುಗಳಿಗೆ ಉದ್ಯೋಗ ಅರಿಸಿ ಹೋಗಬೇಡಿ ಸ್ಥಳಿಯವಾಗಿಯೇ ನಿಮಗೆ ಉದ್ಯೋಗ ನೀಡಲಾಗುತ್ತದೆ. ನರೇಗಾ ಯೋಜನೆಯಡಿ ಜಾಬ್ ಕಾರ್ಡ ಹೊಂದಿದವರಿಗೆ 100 ದಿನ ಹಾಗೂ ಬರಗಾಲದಲ್ಲಿ 150 ದಿನ ಕೂಲಿ ನೀಡಲಾಗುತ್ತಿದೆ. ದಿನಕ್ಕೆ 249 ರೂ.ಗಳ ಕೂಲಿ ನೀಡಲಾಗುತ್ತದೆ. ಗಂಡು, ಹೆಣ್ಣು ಎನ್ನದೇ ಸಮಾನ ಕೂಲಿ ನೀಡಲಾಗುತ್ತಿದೆ. ಅಂಗವಿಕಲತೆ ಮತ್ತು ಹಿರಿಯ ನಾಗರಿಕರಿಗೆ ಕೆಲಸದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುತ್ತಿರುವ ಬಗ್ಗೆ ತಿಳಿಸಿದರು. 

ತೋಗುಣಶಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಲ್ಲಿಯೂ 350ಕ್ಕೂ ಹೆಚ್ಚು ಜನ ಕೂಲಿ ಮಾಡುತ್ತಿದ್ದರು. ಕೂಲಿ ಕೆಲಸದಲ್ಲಿ ಹೆಚ್ಚಾಗಿ ಮಹಿಳೆಯರು ಇದ್ದದ್ದನ್ನು ಕಂಡು ಗ್ರಾಮೀಣೋಪಾಯದಡಿ ಸ್ವ-ಸಹಾಯ ಗುಂಪುಗಳಿಗೆ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯಧನ ಸಾಲದ ಸೌಲಭ್ಯಗಳ ಒದಗಿಸಲಾಗುವುದು. ನರೇಗಾದಿಂದ ಕೋಳಿ, ಕುರಿ, ದನದ ತೊಟ್ಟಿ ನಿಮರ್ಾಣ ಹಾಗೂ ಎಸ್ಎಚ್ಜೆ ಕಟ್ಟಡಕ್ಕು ಅವಕಾಶವಿದೆ. ದುಡಿಯುವ ಕೈಗಳಿಗೆ ಮಾತ್ರವಲ್ಲದೇ ರೈತರಿಗೂ ಸಹ ನರೇಗಾ ವರದಾನವಾಗಿದೆ ಎಂದು ತಿಳಿಸಿದರು. ನರೇಗಾ ದುಡಿಯುವ ಕೈಗಳಿಗೆ ಕಲ್ಪವೃಕ್ಷವಾದರೆ, ಕೃಷಿಕರಿಗೂ ವರದಾನವಾಗಿದ್ದು, ತಮ್ಮ ಭೂಮಿಯಲ್ಲಿಯೂ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಬಹುದಾಗಿದೆ ಎಂದರು.

ಕೃಷಿ ಮತ್ತು ತೋಟಗಾರಿಕೆ ಪ್ರದೇಶ ಅಭಿವೃದ್ದಿಗೆ ನಮ್ಮ ಹೊಲ ನಮ್ಮ ದಾರಿ ನಿಮರ್ಾಣಕ್ಕು ನರೇಗಾದಡಿ ಸಾಕಷ್ಟು ಅವಕಾಶಗಳಿವೆ. ಈ ಯೋಜನೆಯ ಲಾಭವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದರು. ಮೀನುಗಾರಿಕೆ, ಕೃಷಿ ಹೊಂಡ ನಿಮರ್ಾಣಕ್ಕೆ ವರದಾನವಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ರಾಜ್ಯಕ್ಕೆ 5ನೇ ಸ್ಥಾನದಲ್ಲಿದೆ ಎಂದರು. ಕೂಲಿ  ಕಾರ್ಮಿಕರೊಂದಿಗೆ ಬೆರೆತು ಮಾತನಾಡಿ ಅವರ ಸಮಸ್ಯೆಗಳ ಬಗ್ಗೆ ಆಲಿಸಿದರು. ಅವರ ಆರೋಗ್ಯ ವಿಚಾರಿಸಿದರು. ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗೆ ಒಳಗಾದಲ್ಲಿ ಸೂಕ್ತ ಪರಿಹಾರ ಸಿಗುವಂತೆ ಕ್ರಮವಹಿಸಲು ಬಾದಾಮಿ ಕಾರ್ಯನಿವರ್ಾಹಕ ಅಧಿಕಾರಿ ಡಾ.ಪುನಿತ್ಗೆ ಸೂಚಿಸಿದರು.

ವಿಕಲಚೇತನ ಕೂಲಿ  ಕಾರ್ಮಿಕರಾದ ಯಮನವ್ವ ಪೂಜಾರಿ ಮಾತನಾಡಿ ನರೇಗಾ ಯೋಜನೆಯಿಂದ ನಮಗೆ ವರದಾನವಾಗಿದ್ದು, ಉದ್ಯೋಗ ಅರಿಸಿ ವಲಸೆ ಹೋಗುವದನ್ನು ತಪ್ಪಿಸಿದೆ. ತಿಂಗಳು ಗಟ್ಟಲೇ ಬೇರೆ ರಾಜ್ಯಕ್ಕೆ ಕೆಲಸಕ್ಕೆ ಹೋಗಬೇಕಾಗುತ್ತಿತ್ತು. ಹೊಲದ ಕೆಲಸ ಇಲ್ಲದ ಸಮಯದಲ್ಲಿ ತೊಂಬಾ ತೊಂದರೆಯಾಗುತ್ತಿತ್ತು. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಜೀವನ ನಡೆಸಲು ತೊಂದರೆಯಾಗುತ್ತಿತ್ತು. ವಿಕಲತೆ ಹೊಂದಿದರು ಯಾವುದೇ ರೀತಿಯ ತೊಂದರೆ ಆಗಿಲ್ಲ. ನರೇಗಾದಡಿ ನನಗೆ ದುಡಿಯಲು ಕೆಲಸ ಹಾಗೂ ಬದುಕುವ ಆಸೆ ಚಿಗುರಿಸಿದೆ ಎಂದು ತಿಳಿಸಿದರು.

ಕಾಮರ್ಿಕ ಯಲ್ಲಪ್ಪ ಉಪ್ಪಾರ ಮಾತನಾಡಿ ನರೇಗಾ ಯೋಜನೆ ನಮಗೆ ಅನ್ನ ಹಾಕುತ್ತಿದೆ. ಕೆಲಸಕ್ಕೆಂದು ಬೇರೆಯವರ ಜಮೀನುಗಳಿಗೆ ಹೋಗಿ ಕೆಲವೇ ದಿನಗಳ ವರಗೆ ಕೂಲಿ ಮಾಡಬೇಕಾಗುವ ಸಂದರ್ಭ ಒದಗಿಬರುತ್ತಿತ್ತು. ಆದರೆ ನರೆಗಾದಿಂದ 150 ದಿನಗಳ ಕೆಲಸ ದೊರೆಯುತ್ತಿರುವುದು ಅನುಕೂಲವಾಗಿದೆ. ಸ್ಥಳೀಯ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಲು ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವುದಾಗಿ ತಿಳಿಸಿದರು. 

ಭೇಟಿ ಸಂದರ್ಭದಲ್ಲಿ ಬಾದಾಮಿ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಡಾ.ಪುನಿತ್, ತೋಗುಣಸಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಎಲ್.ಜಿ.ಶಾಂತಗೇರಿ, ಎಡಿಪಿಸಿ ನಾಗರಾಜ ರಾಜನಾಳ, ಜಿಲ್ಲಾ ಐ.ಇ.ಸಿ ಸಂಯೋಜಕ ಪವನ ಕುಲಕಣರ್ಿ, ಜಿಲ್ಲಾ ಡಿಎಂಐಎಸ್ ಉಜ್ವಲ ಸಕ್ರಿ, ತಾಲೂಕಾ ಐಇಸಿ ಸಂಯೋಜಕ ಸಮೀರ ಉಮಜರ್ಿ, ಈರಣ್ಣ ಮಾಸ್ತಿ ಸೇರಿದಂತೆ ಇತರರು ಇದ್ದರು.

ಕೂಲಿ ಕಾರ್ಮಿಕರಿಗೆ  ಆರೋಗ್ಯ ತಪಾಸಣೆ :

ಕೋಟಿಕಲ್ ಗ್ರಾಮ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಸ್ಥಳದಲ್ಲಿ ಆರೋಗ್ಯ ಶಿಬಿರ ನಡೆಸಲಾಯಿತು. ಕೆಲಸದಲ್ಲಿ ತೊಡಗಿದ್ದ ಒಟ್ಟು 350 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಸ್ಥಳದಲ್ಲಿಯೇ ಔಷಧಿಗಳನ್ನು ನೀಡಲಾಯಿತು. ತೋಗುಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ಕಾಮರ್ಿಕರ ತಪಾಸಣೆ ಮಾಡಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಕೊಡಮಾಡುವ ಆಯುಷ್ಮಾನ ಭಾರತ ಆರೋಗ್ಯ ಕನರ್ಾಟಕ ಕಾರ್ಡ ನೀಡಲಾಗುತ್ತಿದ್ದು, ಈ ಕಾರ್ಡನ್ನು ಪಡೆದುಕೊಂಡವರಿಗೆ 5 ಲಕ್ಷ ರೂ.ಗಳ ವರೆಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ ಇದ್ದರು.

ಪಾಶ್ರ್ವವಾಯು ಚಿಕಿತ್ಸೆಗೆ ಶಿಫಾರಸ್ಸು  

ನರೇಗಾ ಯೋಜನೆಯಡಿ ಹಮ್ಮಿಕೊಂಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಓರ್ವ ಕೂಲಿ ಕಾಮರ್ಿಕನಿಗೆ ಪಾಶ್ರ್ವವಾಯುವಿಗೆ ತುತ್ತಾಗಿದ್ದು, ವೈದ್ಯಕೀಯ ಚಿಕಿತ್ಸೆಗೆ ಬಾದಾಮಿ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಡಾ.ಪುನಿತ್ ಅವರಿಗೆ ಶಿಫರಸ್ಸು ಮಾಡಿದರು. ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳ ವ್ಯಾಪ್ತಿಯಲ್ಲಿ 10 ಸಾವಿರ ಹಾಗೂ ಸಿಇಓ ಹಂತದಲ್ಲಿ 1 ಲಕ್ಷವರೆಗೆ ಚಿಕಿತ್ಸೆಗೆ ನರೇಗಾದಡಿ ಅವಕಾಶವಿರುವುದಾಗಿ ತಿಳಿಸಿದರು.

- ಗಂಗೂಬಾಯಿ ಮಾನಕರ ಜಿ.ಪಂ ಸಿಇಓ